ಫೆಬ್ರವರಿ 15ರಿಂದ 2ನೇ ಹಂತದ ಲಸಿಕೆ ಆರಂಭ: ಸಿದ್ಧತೆ ಆರಂಭ

ಎರಡನೇ ಹಂತದಲ್ಲಿ ಲಸಿಕೆ ನೀಡಲು ಪಾಲಿಕೆಯಿಂದ ಅಗತ್ಯ ಸಿದ್ಧತೆ ನಡೆಸಲಾಗಿದ್ದು, ಈಗಾಗಲೇ ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

Published: 24th January 2021 09:37 AM  |   Last Updated: 24th January 2021 09:37 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ಎರಡನೇ ಹಂತದಲ್ಲಿ ಲಸಿಕೆ ನೀಡಲು ಪಾಲಿಕೆಯಿಂದ ಅಗತ್ಯ ಸಿದ್ಧತೆ ನಡೆಸಲಾಗಿದ್ದು, ಈಗಾಗಲೇ ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುದು ಮುಂದುವ ವಾರ ಪೂರ್ಣಗೊಳ್ಳಲಿದೆ. ಜ.26 ಮತ್ತು 27 ರಂದು ಲಸಿಕೆ ಹಾಕುವ ಸಾಧ್ಯತೆ ಕಡಿಮೆಯಿದ್ದು. ಹೀಗಾಗಿ ಫೆಬ್ರವರಿ 15 ರಿಂದ ಮೊದಲ ವಾರದಿಂದ 2ನೇ ಹಂತದ ಲಸಿಕೆ ಆರಂಭವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಕೇಂದ್ರದಿಂದ ಅಧಿಕೃತ ವೇಳಾಪಟ್ಟಿ ಶೀಘ್ರದಲ್ಲೇ ಬರುವ ಸಾಧ್ಯತೆ ಇಂದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ. 

ಮೊದಲ ಹಂತದ ಲಸಿಕೆ ಅಭಿಯಾನವನ್ನು ಉತ್ತಮವಾಗಿ ನಡೆಸಲಾಗಿದ್ದು, ಎರಡನೇ ಹಂತದ ಲಸಿಕೆಗೆ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಸಚಿವ ಸುಧಾಕರ್ ಅವರು ತಿಳಿಸಿದ್ದಾರೆ. 

ಎರಡನೇ ಹಂತದ ಲಸಿಕೆಯಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲು ನಿರ್ಧಾರಕೈಗೊಳ್ಳಲಾಗಿದೆ. 

ಮೊದಲ ಹಂತದಲ್ಲಿ ಲಸಿಕಯನ್ನು ಉತ್ತಮವಾಗಿ ನಡೆಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ನಮ್ಮಲ್ಲಿ ಕೊರೋನಾ ನಿರ್ವಹಣೆಯ ನೀತಿ ನಿಯಮಗಳು ಉತ್ತಮವಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಫೆಬ್ರವರಿ 13 ರೊಳಗೆ ಆರೋಗ್ಯ ಕಾರ್ಯಕರ್ತರು ತಮ್ಮ ಎರಡನೇ ಡೋಸ್ ಲಸಿಕೆ ಪಡೆಯುವ ಸಮಯ ಬಂದಿದೆ. ಆದ್ದರಿಂದ, ಮೊದಲ ಹಂತವನ್ನು ಪೂರ್ಣಗೊಳಿಸಲು ಮತ್ತು ಅದರ ನಂತರ ಎರಡನೇ ಹಂತದ ಲಸಿಕೆಯನ್ನು ಪ್ರಾರಂಭಿಸುವ ಯೋಜನೆ ಇದೆ ಎಂದು ತಿಳಿಸಿದ್ದಾರೆ. 

ಕೊರೋನಾ ಸಮಯದಲ್ಲಿ ಪ್ರತೀ ಮನೆಯಲ್ಲೂ ಸಮೀಕ್ಷೆಗಳನ್ನು ನಡೆಸಿದ್ದೇವೆ. ಈಗಾಗಲೇ ನಮ್ಮ ಬಳಿ ದಾಖಲೆಗಳು, ಮಾಹಿತಿಗಳಿಲ್ಲು, ಇದು ನಮಗೆ ಸಹಾಯ ಮಾಡಲಿದೆ ಎಂದು ಸಚಿವ ಸುಧಾಕರ್ ಅವರು ಹೇಳಿದ್ದಾರೆ. 

Stay up to date on all the latest ರಾಜ್ಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp