ರೂ.30 ಕೋಟಿ ವೆಚ್ಚದಲ್ಲಿ ಕೇಂದ್ರ ಪ್ರದೇಶಗಳ ರಸ್ತೆಗಳ ಅಗಲೀಕರಣ: ರಾಜ್ಯ ಸರ್ಕಾರ

ರಾಜಧಾನಿ ಬೆಂಗಳೂರು ದೇಶದ ಅತ್ಯಂತ ಚಲನಶೀಲ ನಗರಗಳ ಪೈಕಿ ಒಂದಾಗಿದ್ದು, ನಗರದಲ್ಲಿನ ಸಂಚಾರ ದಟ್ಟಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ದೂರಾಗಿಸುವ ಸಲುವಾಗಿ ಕೇಂದ್ರ ಪ್ರದೇಶಗಳ ರಸ್ತೆಗಳನ್ನು ರೂ.30 ಕೋಟಿ ವೆಚ್ಚದಲ್ಲಿ ಅಗಲೀಕರಣ ಗೊಳಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ. 

Published: 24th January 2021 08:12 AM  |   Last Updated: 24th January 2021 08:12 AM   |  A+A-


Deputy CM Ashwath Narayan, Home Minister Basavaraj Bommai and others inaugurate the Road Safety Week in Bengaluru on Saturday

32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ 2021 ಉದ್ಘಾಟಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

Posted By : Manjula VN
Source : The New Indian Express

ಬೆಂಗಳೂರು: ರಾಜಧಾನಿ ಬೆಂಗಳೂರು ದೇಶದ ಅತ್ಯಂತ ಚಲನಶೀಲ ನಗರಗಳ ಪೈಕಿ ಒಂದಾಗಿದ್ದು, ನಗರದಲ್ಲಿನ ಸಂಚಾರ ದಟ್ಟಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ದೂರಾಗಿಸುವ ಸಲುವಾಗಿ ಕೇಂದ್ರ ಪ್ರದೇಶಗಳ ರಸ್ತೆಗಳನ್ನು ರೂ.30 ಕೋಟಿ ವೆಚ್ಚದಲ್ಲಿ ಅಗಲೀಕರಣ ಗೊಳಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ. 

ಶನಿವಾರವಷ್ಟೇ ಸರ್ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ 2021 ಉದ್ಘಾಟಿಸಿದರು. ಇದೇ ಸಂದರ್ಭದಲ್ಲೂ ಸುರಕ್ಷ ರಸ್ತೆ ಸಂಚಾರ-ಆ್ಯನಿಮೇಟೆಡ್ ಕಿರುಚಿತ್ರ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಉತ್ತಮ ಮತ್ತು ಕಾನೂನು ಬದ್ದವಾದ ಸಂಚಾರ ಸಂಸ್ಕತಿ ಬೆಳಸುವುದು ಇಂದಿನ ಅಗತ್ಯವಾಗಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡುವ ಸಂಸ್ಕತಿಯಿಂದ ಸಂಚಾರ ನಿಯಮ ಪಾಲನೆ ಮಾಡುವ ಸಂಸ್ಕತಿಗೆ ನಾವು ಜನರನ್ನು ಬದಲಾವಣೆ ಮಾಡಿದಾಗ ಮಾತ್ರ ಒಂದು ಪರಿಪೂರ್ಣವಾದ ಒಂದು ಪರ್ಯಾಯ ರೂಪವನ್ನು ಕೊಡಲು ಸಾಧ್ಯ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪ್ರಸ್ತುತ 1.3 ಕೋಟಿ ಜನಸಂಖ್ಯೆ ಇದ್ದು, 85 ಲಕ್ಷ ವಾಹನಗಳಿವೆ. ಕೆಲವೇ ದಿನಗಳಲ್ಲಿ ಜನಸಂಖ್ಯೆಯಲ್ಲಿ ಮೀರಿ ವಾಹನಗಳ ಸಂಖ್ಯೆ ಬೆಳೆಯಬಹುದು ಆಂತ ಮೂಡುತ್ತಿದೆ. ವಾಹನಗಳ ಸಂಖ್ಯೆಗೆ ತಕ್ಕಂತೆ ಸಂಚಾರ ವ್ಯವಸ್ಥೆ, ಪಾದಚಾರಿ ಮಾರ್ಗಗಳನ್ನು ರೂಪಿಸಬೇಕಿದೆ ಎಂದು ತಿಳಿಸಿದರು. 

ಸಂಚಾರ ದಟ್ಟಣೆ, ವಾಹನ ಸಂಚಾರ ಹೆಚ್ಚಿರುವ 12 ಹೆಡೆನ್ಸಿಟಿ ಕಾರಿಡಾರ್ ಗಳ ಅಭಿವೃದ್ಧಿಗಾಗಿ ರೂ.470 ಕೋಟಿಗಳ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ಜೊತೆಗೆ ಟ್ರಾಫಿಕ್ ಸಿಗ್ನಲ್ ಗಳು, ಸಿಗ್ನಲ್ ಕ್ಯಾಮರಾಗಳ ಅಳವಡಿಕೆ ಸೇರಿದಂತೆ ಆಧುನಿಕ ಉಪಕರಣಗಳನ್ನು ಪೊಲೀಸರಿಗೆ ನೀಡಲು ಹಾಗೂ ಸುಗಮ ಸಂಚಾರ ವ್ಯವಸ್ಥೆ ರೂಪಿಸಲು ರೂ.100 ಕೋಟಿಗಳ ಯೋಜನೆ ರೂಪಿಸಲಾಗಿದೆ. ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ ವಾಹನ ನಿಲುಗಡೆ, ಸಂಚಾರ ಸಿಗ್ನಲ್ ಗಳಲ್ಲಿ ಕೃತಕ ಬುದ್ದಿಮತ್ತೆ ಸೇರಿ ಇನ್ನಿತರ ತಂತ್ರಜ್ಞಾನ ಬಳಕೆಗಾಗಿ ರೂ.30 ಕೋಟಿ ಮೀಸಲಿಡಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಬೆಂಗಳೂರಿನ ಸಂಚಾರ ವ್ಯವಸ್ಥೆ ದೇಶದಲ್ಲಿಯೇ ಮಾದರಿಯಾಗಿ ಜಾರಿಯಾಗಿದೆ ಎಂದು ಹೇಳಿದರು. 

Stay up to date on all the latest ರಾಜ್ಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp