ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ 40 ಕೋಟಿ ರೂ. ನೀಡಲು ಕೇಂದ್ರ ಒಪ್ಪಿಗೆ: ಸದಾನಂದ ಗೌಡ
ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ ಎರಡು ದಿನಗಳಲ್ಲೇ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಅವರು ವಿವರವಾದ ಯೋಜನಾ ವರದಿಯನ್ನು ಶೀಘ್ರದಲ್ಲಿ ಸಲ್ಲಿಸುವಂತೆ ರಾಜ್ಯವನ್ನು ಕೋರಿದ್ದಾರೆ.
Published: 25th January 2021 08:02 AM | Last Updated: 25th January 2021 08:02 AM | A+A A-

ಡಿ.ವಿ.ಸದಾನಂದ ಗೌಡ
ಬೆಂಗಳೂರು: ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ ಎರಡು ದಿನಗಳಲ್ಲೇ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಅವರು ವಿವರವಾದ ಯೋಜನಾ ವರದಿಯನ್ನು ಶೀಘ್ರದಲ್ಲಿ ಸಲ್ಲಿಸುವಂತೆ ರಾಜ್ಯವನ್ನು ಕೋರಿದ್ದಾರೆ.
ಯೋಜನಾ ವೆಚ್ಚದ ಶೇಕಡಾ 50 ರಷ್ಟು, ನಾಲ್ಕು ಕಂತುಗಳಲ್ಲಿ 40 ಕೋಟಿ ರೂ.ಗಳನ್ನು ನೀಡಲು ಕೇಂದ್ರ ಸರ್ಕಾರ ತಯಾರಾಗಿದೆ ಎಂದು ಹೇಳಿದ ಸಚಿವ ಸದಾನಂದ ಗೌಡ ಯೋಜನೆಗಾಗಿ ಆರು ತಿಂಗಳಲ್ಲಿ ಅಂತಿಮ ಅನುಮತಿ ಪಡೆಯಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಆದ್ದರಿಂದ ಯೋಜನೆ ಯಾವ ವಿಳಂಬವಿಲ್ಲದೆ ಜಾರಿಯಾಗುವ ನಿರೀಕ್ಷೆ ಇದೆ ಎಂದಿದ್ದಾರೆ.
"ಸ್ವಾವಲಂಬಿ ಭಾರತ ಯೋಜನೆಯಡಿ ದೇಶದ ಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಉತ್ತೇ ಜನ ನೀಡುವ ಉದ್ದೇಶದಿಂದ ದೇಶದಲ್ಲಿ ಎರಡು ಪ್ಲಾಸ್ಟಿಕ್ ಪಾರ್ಕುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಕರ್ನಾಟಕದ ಕರಾವಳಿ ನಗರ ಮಂಗಳೂರು ಹಾಗೂ ಉತ್ತರ ಪ್ರದೇಶದ ಗೋರಕ್ಪುರದಲ್ಲಿ ತಲಾ ಒಂದೊಂದು ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸುವ ಬಗ್ಗೆ ಮೊನ್ನೆ ನಡೆದ ರಾಸಾಯನಿಕ ಇಲಾಖೆಯ ಯೋಜನೆ ಚಾಲನಾ ಸಮಿತಿ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದ್ದೇವೆ" ಎಂದರು.
"ಪ್ಲಾಸ್ಟಿಕ್ ಉದ್ಯಾನವನ ಇಕೋಸಿಸ್ಟಮ್ ಅನ್ನು ಒಳಗೊಂಡಿದ್ದು ಮೂಲಮಾದರಿ ಮತ್ತು ವರ್ಚುವಲೈಸೇಶನ್, ವಿನಾಶಕಾರಿಯಲ್ಲದ ವಸ್ತುಗಳ ಪರೀಕ್ಷೆ, ತರಬೇತಿ, ಉಗ್ರಾಣ, ಪ್ಲಾಸ್ಟಿಕ್ ಮರುಬಳಕೆ, ಉಪಕರಣಗಳ ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ ಮುಂತಾದ ಸಾಮಾನ್ಯ ಸೌಲಭ್ಯಗಳನ್ನು ಶಕ್ತಗೊಳಿಸುವ ವ್ಯವಸ್ಥೆಯನ್ನು ಒಳಗೊಂಡಿರಲಿದೆ. ಇದು ಆರ್ಥಿಕತೆಗೆ ಹೆಚ್ಚು ಪರಿಣಾಮಕಾರಿಯಾದ ಕೊಡುಗೆ ನೀಡಲಿದೆ" ಸದಾನಂದ ಗೌಡ ಹೇಳಿದರು.
"ಕೇಂದ್ರ ಸರ್ಕಾರವು ಯೋಜನಾ ವೆಚ್ಚದ 50 ಪ್ರತಿಶತದಷ್ಟು ಹಣ 40 ಕೋಟಿ ರೂ ನೀಡಲಿದೆ. ಉಳಿದ ಹಣವನ್ನು ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಎಸ್ಐಡಿಸಿ) ಯಂತಹ ಸಂಸ್ಥೆಗಳ ಮೂಲಕ ಅಥವಾ ನೂತನ ವಿಶೇಷ ಉದ್ದೇಶದೊಡನೆ ಪಡೆದುಕೊಳ್ಳಬಹುದು."
ಕೇಂದ್ರ ಸರ್ಕಾರದ ಯೋಜನೆ ಮಾರ್ಗಸೂಚಿಗಳ ಪ್ರಕಾರ, ರಾಜ್ಯ ಸರ್ಕಾರದ ಈಕ್ವಿಟಿ ಕೊಡುಗೆ ಎಸ್ಪಿವಿಯ ನಗದು ಇಕ್ವಿಟಿಯ ಕನಿಷ್ಠ 26 ಶೇಕಡಾ ಇರಬೇಕು (ಈಕ್ವಿಟಿಯಾಗಿ ನೀಡಲಾದ ಯಾವುದೇ ಭೂಮಿಯ ಮೌಲ್ಯವನ್ನು ಹೊರತುಪಡಿಸಿ).