ವಿಮಾನ ನಿಲ್ದಾಣ ಸಂಪರ್ಕಿಸುವ ಬಸ್‌: ಇ-ಬುಕಿಂಗ್ ವ್ಯವಸ್ಥೆ ಇದ್ದರೂ ಬಳಸಲು ಜನತೆ ನಿರಾಸಕ್ತಿ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ‘ವಾಯು ವಜ್ರ’ ಬಸ್‌ಗಳಲ್ಲಿ ಆಸನಗಳನ್ನು ಕಾಯ್ದಿರಿಸಲು ಅವತಾರ್ ತಂತ್ರಾಶದಲ್ಲಿ ಬಿಎಂಟಿಸಿ ಅವಕಾಶ ಕಲ್ಪಿಸಿದ್ದರೂ, ಬೆರಣಿಕೆಯಷ್ಟು ಜನರು ಮಾತ್ರ ಈ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. 

Published: 25th January 2021 09:49 AM  |   Last Updated: 25th January 2021 12:55 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ‘ವಾಯು ವಜ್ರ’ ಬಸ್‌ಗಳಲ್ಲಿ ಆಸನಗಳನ್ನು ಕಾಯ್ದಿರಿಸಲು ಅವತಾರ್ ತಂತ್ರಾಶದಲ್ಲಿ ಬಿಎಂಟಿಸಿ ಅವಕಾಶ ಕಲ್ಪಿಸಿದ್ದರೂ, ಬೆರಣಿಕೆಯಷ್ಟು ಜನರು ಮಾತ್ರ ಈ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. 

ಕಳೆದ ತಿಂಗಳು ಕೇವಲ 63 ಆನ್ ಲೈನ್ ಬುಕಿಂಗ್‌ ಆಗಿದ್ದವು. ಇದರಲ್ಲಿ 47 ಟಿಕೆಟ್ ಗಳು ನಗರದ ವಿವಿಧ ಭಾಗಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ತೆರಳಿದ ಬಸ್ ಗಳಲ್ಲಿ ಬುಕ್ ಆಗಿದ್ದವು, ವಿಮಾನ ನಿಲ್ದಾಣದಿಂದ ಮರಳಿ ನಗರಕ್ಕೆ ಹಿಮ್ಮುಖವಾಗಿ ಬಂದ ಬಸ್ ಗಳಲ್ಲಿ ಕೇವಲ 16 ಟಿಕೆಟ್ ಗಳಷ್ಟೇ ಬುಕ್ ಆಗಿದ್ದವು. ಈ ತಿಂಗಳು (ಜನವರಿ 18ರವರೆಗೆ) ಕೇವಲ 43 ಟಿಕೆಟ್ ಗಳು ಮಾತ್ರವೇ ಬುಕ್ ಆಗಿವೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಪ್ರಸ್ತುತ ವಿಮಾನ ನಿಲ್ದಾಣಕ್ಕೆ 5,000 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಕೊರೋನಾ ಸಾಂಕ್ರಾಮಿಕ ರೋಗಕ್ಕೂ ಮುನ್ನ  ಈ ಸಂಖ್ಯೆ 12,000 ಇತ್ತು. ಕಳೆದ ಮಾರ್ಚ್ ನಲ್ಲಿ 120 ಬಸ್ ಗಳು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದವು. ಆದರೀಗ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಬಸ್ ಗಳ ಸಂಖ್ಯೆ ಕೂಡ 61ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ. 

ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕೂಡ ಕಡಿಮೆಯಾಗಿದ್ದು, ಇದರಿಂದ ವಿಮಾನ ನಿಲ್ದಾಣಕ್ಕೆ ತೆರಳುವವರ ಸಂಖ್ಯೆ ಕೂಡ ಕಡಿಮೆಯಾಗಿದೆ ಎಂದಿದ್ದಾರೆ. 

Stay up to date on all the latest ರಾಜ್ಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp