ಬೆಂಗಳೂರು: ಐದು ವರ್ಷ ಕಳೆದರೂ ಇನ್ನೂ ನೀರಿನ ಸಂಪರ್ಕ ಸಿಕ್ಕಿಲ್ಲ, ದೊಡ್ಡಕಲ್ಲಸಂದ್ರ ನಿವಾಸಿಗಳ ಪರಿತಾಪ!

ಹೊಸದಾಗಿ ನೀರು ಸಂಪರ್ಕಕ್ಕಾಗಿ ಬೆಂಗಳೂರು ನೀರು ಪೂರೈಕೆ ಮತ್ತು ಒಳ ಚರಂಡಿ ಮಂಡಳಿಗೆ 3.8 ಕೋಟಿ ಸಂಪೂರ್ಣ ಮೊತ್ತವನ್ನು ಪಾವತಿಸಿ ಸುಮಾರು ಐದು ವರ್ಷ ಕಳೆದರೂ ದೊಡ್ಡಕಲ್ಲಸಂದ್ರದ ಗೋಕುಲಂ ಅಪಾರ್ಟ್ ಮೆಂಟ್ಸ್ ನ 608 ಮನೆಗಳಿಗೆ ಇನ್ನೂ ನೀರಿನ ಸಂಪರ್ಕ ಸಿಕ್ಕಿಲ್ಲ.

Published: 25th January 2021 08:40 AM  |   Last Updated: 25th January 2021 12:51 PM   |  A+A-


Casual_Images1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಬೆಂಗಳೂರು: ಹೊಸದಾಗಿ ನೀರು ಸಂಪರ್ಕಕ್ಕಾಗಿ ಬೆಂಗಳೂರು ನೀರು ಪೂರೈಕೆ ಮತ್ತು ಒಳ ಚರಂಡಿ ಮಂಡಳಿಗೆ 3.8 ಕೋಟಿ ಸಂಪೂರ್ಣ ಮೊತ್ತವನ್ನು ಪಾವತಿಸಿ ಸುಮಾರು ಐದು ವರ್ಷ ಕಳೆದರೂ ದೊಡ್ಡಕಲ್ಲಸಂದ್ರದ ಗೋಕುಲಂ ಅಪಾರ್ಟ್ ಮೆಂಟ್ಸ್ ನ 608 ಮನೆಗಳಿಗೆ ಇನ್ನೂ ನೀರಿನ ಸಂಪರ್ಕ ಸಿಕ್ಕಿಲ್ಲ. ಇದೀಗ ಬಿಡಬ್ಲ್ಯೂಎಸ್ ಎಸ್ ಬಿ ನೀರಿನ ಸಂಪರ್ಕಕ್ಕಾಗಿ ನಿವಾಸಿಗಳಿಂದ 4 ಕೋಟಿಗೂ ಹೆಚ್ಚು ಹಣವನ್ನು ಬಯಸಿದೆ.  ಈ ಸಂಘರ್ಷ ಮುಂದುವರೆದಿದ್ದು, ಟ್ಯಾಂಕರ್ ನೀರಿನ ವ್ಯವಹಾರ ಹೆಚ್ಚಾಗುತ್ತಿದೆ.

2012 ಮತ್ತು 2008ರ ನಡುವೆ ಅನೇಕ ಮಾಲೀಕರು ಬೇರೆಡೆ ಹೋಗಲು ಆರಂಭಿಸಿದ್ದಾರೆ. 2014ರಲ್ಲಿ ಆದೇಶವೊಂದನ್ನು ಹೊರಡಿಸಿದ ಬಿಡಬ್ಲ್ಯೂಎಸ್ ಎಸ್ ಬಿ ಹೊಸದಾಗಿ ನೀರು ಸಂಪರ್ಕ ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಲು 2, 77,59, 320 ರೂಪಾಯಿ ನಿಗದಿಪಡಿಸಿತು ಮತ್ತು ಫಲಾನುಭವಿ ಹಣದ ಕೊಡುಗೆಯಾಗಿ 1, 01,16,334 ರೂನ್ನು ಬಿಬಿಎಂಪಿ ಪ್ರದೇಶಗಳಲ್ಲಿ ವಿಶೇಷವಾಗಿ ಹೊಸದಾಗಿ ವಿಧಿಸಿತ್ತು. ಮಾರ್ಚ್ 2016ಕ್ಕೆ ಪಾವತಿಗೆ ಗಡುವನ್ನು ನೀಡಿತ್ತು.  ಆದರೆ, ಈ ವರ್ಷದ ಮಾರ್ಚ್ 24 ರಂದು ಬಿಡಬ್ಲ್ಯೂಎಸ್ ಎಸ್ ಬಿ ಹೊಸದಾಗಿ ನೀರು ಸಂಪರ್ಕ ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಶುಲ್ಕವನ್ನು ಪ್ರತಿ ಚದರ ಮೀಟರ್ ಗೆ 200 ರೂ. ನಿಂದ 400 ರೂಪಾಯಿಗೆ ದುಪ್ಪಟ್ಟು ಮಾಡಿದೆ ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.

ಹಿಂದಿನ ದರವನ್ನು ಆಧರಿಸಿ ನಾಲ್ಕು ದಿನಗಳಲ್ಲಿ ಶುಲ್ಕವನ್ನು ಪಾವತಿಸಲು ಅಂದಿನ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರಿಂದ ಸಂಘಕ್ಕೆ ವಿಶೇಷ ಅನುಮತಿ ದೊರೆತು ಮಾರ್ಚ್ 28 ರಂದು ಈ ಮೊತ್ತವನ್ನು ಹಸ್ತಾಂತರಿಸಲಾಯಿತು. ಆದರೆ ಬಿಡಬ್ಲ್ಯೂಎಸ್ಎಸ್ ಬಿ ಕಚೇರಿಯಲಲಿ ವಿಫರೀತ ದಟ್ಟಣೆಯಿಂದಾಗಿ ಪಾವತಿ ರಶೀದಿಯನ್ನು ನೀಡಿಲ್ಲ. ಮರು ದಿನ ಡಿಡಿ ಸ್ವೀಕೃತಿ ಪತ್ರ ಪಡೆದಿದ್ದು, ಮಾರ್ಚ್ 30 ರಂದು ಸ್ವೀಕೃತಿಯನ್ನು ಪಡೆದಿರುವುದಾಗಿ ಮತ್ತೊರ್ವ ನಿವಾಸಿಯೊಬ್ಬರು ಹೇಳಿದ್ದಾರೆ.

ಗೋಕುಲಂ ಅಪಾರ್ಟ್ ಮೆಂಟ್ ಮಾಲೀಕರ ಕಲ್ಯಾಣ ಸಂಘದ ಸದಸ್ಯರು ಪದೇ ಪದೇ ಬಿಡಬ್ಲ್ಯೂಎಸ್ ಎಸ್ ಬಿ ಕಚೇರಿಗೆ ಅಲೆದು, ಹೈಕೋರ್ಟ್ ನಲ್ಲಿ ಕೇಸ್ ದಾಖಲಿಸಿ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರನ್ನು ಸಹಾಯಕ್ಕಾಗಿ ಕೋರಿದ್ದಾರೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ.

ಶುಲ್ಕ ಹೆಚ್ಚಳದಿಂದಾಗಿ ಮನೆ ಮಾಲೀಕರು ಸುಮಾರು 4 ಕೋಟಿ ರೂ.ಗಳ ಹೆಚ್ಚುವರಿ ಮೊತ್ತವನ್ನು ಪಾವತಿಸುವಂತೆ ಸೂಚಿಸಲಾಗಿದೆ.  ಅವರು ಪಾವತಿಸಿದಾದ್ದಲ್ಲಿ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ. ಪಾವತಿ ವಿಳಂಬವಾದ್ದಲ್ಲಿ ಕಾನೂನು ಪ್ರಕಾರ ನಡೆದುಕೊಳ್ಳುವುದಾಗಿ ಬಿಡಬ್ಲ್ಯೂಎಸ್ ಎಸ್ ಬಿ ಮುಖ್ಯಸ್ಥ ಎನ್. ಜಯರಾಂ ಹೇಳಿದ್ದಾರೆ. 


Stay up to date on all the latest ರಾಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp