ವರದಕ್ಷಿಣೆ ಕಿರುಕುಳ, ಕೊಲೆ ಯತ್ನ ಆರೋಪ: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ವಿರುದ್ಧ ದೂರು ದಾಖಲು

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ತಮ್ಮ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುವುದರ ಜೊತೆಗೆ ಹಣ್ಣಿನ ರಸಕ್ಕೆ ವಿಷ ಬೆರೆಸಿ  ಕೊಲೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Published: 25th January 2021 08:09 AM  |   Last Updated: 25th January 2021 08:12 AM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : The New Indian Express

ಬೆಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ತಮ್ಮ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುವುದರ ಜೊತೆಗೆ ಹಣ್ಣಿನ ರಸಕ್ಕೆ ವಿಷ ಬೆರೆಸಿ  ಕೊಲೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪತ್ನಿಯ ದೂರಿನ ಆಧಾರದ ಮೇಲೆ ಪೊಲೀಸರು ದಿನೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶುಕ್ರವಾರ ರಾತ್ರಿ ಘಟನೆ ನಡೆದ ನಂತರ ದಿನೇಶ್ ನಾಪತ್ತೆಯಾಗಿದ್ದು ಅವರ ರ ಫೋನ್ ಸ್ವಿಚ್ ಆಫ್ ಆಗಿದೆ.  ಆಪಾದಿತನನ್ನು ಪತ್ತೆ ಹಚ್ಚಲು ಮತ್ತು ಘಟನೆಯ ಬಗ್ಗೆ ಪ್ರಶ್ನಿಸಲು ಈಗ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿನೇಶ್ ಕುಮಾರ್ ಅವರ ಪತ್ನಿ ದೀಪ್ತಿ ಕೆಪಿ ಈ ಸಂಬಂಧ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸರಿಗೆ ದೂರು ನೀಡಿದ್ದು, ಪತಿ ತನ್ನ ಕೊಲೆಗೆ ಯತ್ನಿಸಿದ್ದಾನೆ.ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ದಿನೇಶ್ ಹಾಗೂ ಅವರ ಹಿರಿಯ ಸಹೋದರನ ಪತ್ನಿ ರಮ್ಯಾ ತಮ್ಮ ಮೇಲೆ ಬರದಕ್ಷಿಣೆ ನೆಪದಲ್ಲಿ ಆಗಾಗ ಹಲ್ಲೆ ಮಾಡುತ್ತಿದ್ದರು.ಎಂದು ದೀಪ್ತಿ ಆರೋಪಿಸಿದ್ದಾರೆ.

ಶುಕ್ರವಾರ ರಾತ್ರಿ (ಜನವರಿ 22) ರಾಜರಾಜೇಶ್ವರಿ ನಗರದ ತಮ್ಮ ಮನೆಯಲ್ಲಿ ಏಕಾಂಗಿಯಾಗಿದ್ದ ವೇಳೆ ದಿನೇಶ್ ನನಗೆ ವಿಷ ಬೆರೆಸಲಾದ ಹಣ್ಣಿನ ರಸ ಕುಡಿಯುವಂತೆ ಒತ್ತಾಯಿಸಿದ್ದಾರೆ. ಎಂದು ದೀಪ್ತಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಆಕೆ ಅದನ್ನು ಸೇವಿಸುವ ಮೊದಲು, ದಿನೇಶ್ ಮೇಲೆ ಅನುಮಾನಗೊಂಡಿದ್ದರು. "ಇದ್ದಕ್ಕಿದ್ದಂತೆ ಈ ಹಣ್ಣಿನ ರಸ ಈಗೇಕೆ?"ಎಂದು ಅವಳು ಅವನನ್ನು ಕೇಳಿದ್ದಳು. ಅವಳು ಆಯಾಸವಾಗುತ್ತಿದೆ ಎಂದು ಹೇಳಿದ್ದ ಕಾರಣ ಹಣ್ಣಿನ ರಸ ಆಕೆಯನ್ನು ಮತ್ತೆ ಉಲ್ಲಾಸಗೊಳಿಸುತ್ತದೆ ಎಂದು ಅವನು ಉತ್ತರಿಸಿದ್ದಾನೆ. ಅವಳು ರಸವನ್ನು ಸೇವಿಸಿದ ನಂತರ ದಿನೇಶ್ ಸ್ಥಳದಿಂದ ಪರಾರಿಯಾಗಿದ್ದನು.

ಇತ್ತ ಹಣ್ಣಿನ ರಸ ಸೇವಿಸಿ ಅರ್ಧ ತಾಸಿನ ನಂತರ ದೀಪ್ತಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಕೆಲ ಸಮಯದ ನಂತರ ಮರಳಿ ಪ್ರಜ್ಞೆ ಬಂದಿದೆ. ಆಕೆ ತಕ್ಷಣ ಚಿತ್ರದುರ್ಗದಲ್ಲಿ ವಾಸಿಸುವ ತನ್ನ ಪೋಷಕರಿಗೆ ಕರೆ ಮಾಡಿದ್ದಾರೆ. . ಪೋಷಕರು ಆಕೆಯ ಆರ್.ಆರ್.ನಗರ ಮನೆಗೆ ಧಾವಿಸಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯ ವೈದ್ಯರು, ಅವರಿಗೆ ಚಿಕಿತ್ಸೆ ನೀಡಿದ ನಂತರ ಸ್ಥಳೀಯ ಪೋಲೀಸರಿಗೆ ಘಟನೆಯ ಬಗ್ಗೆ ಜ್ಞಾಪಕ ಪತ್ರವನ್ನು ಕಳುಹಿಸಿದ್ದಾರೆ, ಅದರ ನಂತರ ಪೊಲೀಸರು ದೀಪ್ತಿಯ ದೂರನ್ನು ಪಡೆದುಕೊಂಡಿದ್ದಾರೆ.

ದೀಪ್ತಿ ಹಾಗೂ ದಿನೇಶ್ ಕುಮಾರ್ 2015 ರಲ್ಲಿ ಮೈಸೂರಿನಲ್ಲಿ ವಿವಾಹವಾಗಿದ್ದರು. ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದಿನೇಶ್ ಕುಮಾರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸುವ ಹಲವಾರು ಪ್ರಯತ್ನಗಳು ವ್ಯರ್ಥವಾಗಿದೆ. ಏಕೆಂದರೆ ಅವರ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ತನಿಖೆಯ ಭಾಗವಾಗಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಈ ಬಗ್ಗೆ ಖಚಿತಪಡಿಸಿದ್ದು "ನಾವು ಆಸ್ಪತ್ರೆಯಿಂದ ಮೆಮೋ ಸ್ವೀಕರಿಸಿದ್ದೇವೆ ಮತ್ತು ನಂತರ ಅವರ ಹೇಳಿಕೆಯನ್ನು ತೆಗೆದುಕೊಳ್ಳಲು ದೀಪ್ತಿಗೆ ಕರೆ ಮಾಡಿದ್ದೇವೆ. ಅವರು ಲಿಖಿತ ದೂರು ನೀಡಿದ್ದಾರೆ ಮತ್ತು ಇದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

"ದೀಪ್ತಿ (ಬಲವಂತವಾಗಿ) ಕುಡಿಯಲು ಒತ್ತಾಯಿಸಲ್ಪಟ್ಟ ಹಣ್ಣಿನ ರಸದ ವಿಷದ ಮಾದರಿಗಳನ್ನು ಸಹ ನಾವು ಸಂಗ್ರಹಿಸಿದ್ದೇವೆ. ತನಿಖೆಯ ಭಾಗವಾಗಿ ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದಿದ್ದೇವೆ. ಶನಿವಾರ ನಾವು ದಿನೇಶ್ ಕುಮಾರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಆದರೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಈಗ ಆತನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ನಾವು ಕ್ರಮ ಕೈಗೊಳ್ಳುತ್ತೇವೆ "ಎಂದು ಅಧಿಕಾರಿ ಹೇಳಿದರು.

"ತನಿಖಾ ಅಧಿಕಾರಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ, ಅದರ ಆಧಾರದ ಮೇಲೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು." ಡಿಸಿಪಿ (ಪಶ್ಚಿಮ) ಸಂಜೀವ್ ಪಾಟೀಲ್ ಹೇಳಿದ್ದಾರೆ.

Stay up to date on all the latest ರಾಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp