ನಾವು ಯಾವ ಪ್ರಜಾಪ್ರಭುತ್ವದ ಕಗ್ಗೊಲೆಯನ್ನೂ ಮಾಡಿಲ್ಲ: ವಿಪಕ್ಷಗಳಿಗೆ ಸಿಎಂ ಯಡಿಯೂರಪ್ಪ ತಿರುಗೇಟು
ರೈತರು ಬೆಂಗಳೂರಿಗೆ ಬರದಂತೆ ಪೊಲೀಸರು ತಡೆ ಹಡಿಯುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಸಿಎಂ ಯಡಿಯೂರಪ್ಪ ಅವರು ಮಂಗಳವಾರ ತಿರುಗೇಟು ನೀಡಿದ್ದಾರೆ.
Published: 26th January 2021 11:43 AM | Last Updated: 26th January 2021 11:43 AM | A+A A-

ಯಡಿಯೂರಪ್ಪ
ಬೆಂಗಳೂರು: ರೈತರು ಬೆಂಗಳೂರಿಗೆ ಬರದಂತೆ ಪೊಲೀಸರು ತಡೆ ಹಡಿಯುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಸಿಎಂ ಯಡಿಯೂರಪ್ಪ ಅವರು ಮಂಗಳವಾರ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾವ ಪ್ರಜಾಪ್ರಭುತ್ವದ ಕಗ್ಗೊಲೆಯನ್ನೂ ಮಾಡಿಲ್ಲ. ರೈತರ ಪ್ರತಿಭಟನೆಯನ್ನೂ ಹತ್ತಿಕ್ಕಿಲ್ಲ ಎಂದು ಹೇಳಿದ್ದಾರೆ.
ರೈತರ ಪ್ರತಿಭಟನೆ ಹತ್ತಿಕ್ಕುವ ಪ್ರಶ್ನೆಯೇ ಇಲ್ಲ. ಟ್ರ್ಯಾಕ್ಟರ್ ಬರುವುದನ್ನು ಮಾತ್ರ ತಡೆಹಿಡಿದಿದ್ದೇವೆ. ಟ್ರ್ಯಾಕ್ಟರ್ ಮೆರವಣಿಗೆಯಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತೆ. ಹೀಗಾಗಿ ಟ್ರ್ಯಾಕ್ಟರ್ಗಳು ಬೇಡ ಎಂದು ಹೇಳಿದ್ದೇವೆ. ಪ್ರತಿಭಟನಾಕಾರರು ಯಾವ ಕಾರಣಕ್ಕೆ ಪ್ರತಿಭಟನೆ ಮಾಡ್ತಿದ್ದಾರೆಂದು ಹೇಳುತ್ತಿಲ್ಲ. ಕೇವಲ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಅಷ್ಟೆ. ನನ್ನ ಮನೆ ಬಾಗಿಲು ಯಾವಾಗಲೂ ತೆರೆದಿರುತ್ತದೆ. ರೈತ ಮುಖಂಡರು ನಮ್ಮ ಮನೆಗೆ ಬಂದು ಚರ್ಚಿಸಬಹುದು ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲಾ ರೀತಿಯಲ್ಲಿಯೂ ಯೋಜನೆ ಮಾಡಿ ಕಾಯ್ದೆ ಜಾರಿಗೆ ತಂದಿದ್ದಾರೆ. ಆದರೂ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ. ನಾವು ಬದುಕಿದ್ದೇವೆಂದು ಹೋರಾಟ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಯಾವ ಕಾರಣಕ್ಕೆ ಹೋರಾಟ ಮಾಡುತ್ತಿದ್ದೇವೆ ಎನ್ನುವ ಬಗ್ಗೆ ರೈತರ ನಾಯಕರಿಗೇ ಗೊತ್ತಿಲ್ಲ. 2 ವರ್ಷ ಕಾಯ್ದೆ ಮುಂದೂಡುವ ಬಗ್ಗೆ ಮೋದಿಯವರು ತೀರ್ಮಾನ ಮಾಡಿದ್ದಾರೆ. ಆದರೂ ಜನರ ಹಾದಿ ತಪ್ಪಿಸುವ ಕೆಲಸ ಮಾಡಬಾರದು. ಕೆಲವರು ಅಸ್ತಿತ್ವ ತೋರಿಸಲು ಮಾಡುತ್ತಿರುವ ಹೋರಾಟ ಇದು. ಇದು ರೈತರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ನಾವು ಯಾವ ಪ್ರಜಾಪ್ರಭುತ್ವದ ಕಗ್ಗೊಲೆಯನ್ನೂ ಮಾಡಿಲ್ಲ. ರೈತರ ಪ್ರತಿಭಠನೆ ಹತ್ತಿಕ್ಕಿಲ್ಲ. ಟ್ರ್ಯಾಕ್ಟರ್ ರ್ಯಾಲಿಯಿಂದ ಜನರಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಬೇಡ ಎಂದಿದ್ದೇವೆ. ರೈತರ ಹೋರಾಟ ಶಾಂತಿಯುತವಾಗಿ ನಡೆದರೆ, ನಮ್ಮ ಆಕ್ಷೇರವಿಲ್ಲ. ಅವರ ಬೇಡಿಕೆಗೆ ಈಗಾಗಲೇ ಮೋದಿಯವರು ಪರಿಹಾರ ನೀಡಿದ್ದಾರೆ. ಹೋರಾಟದ ಸ್ಪಷ್ಟತೆಯೇ ಅವರಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.