ಶಿವಮೊಗ್ಗ ಸ್ಫೋಟ ಪ್ರಕರಣ: ತನಿಖೆಗೆ 6 ತಂಡ ರಚನೆ

ನಗರದ ಹೊರವಲಯದ ಹುಣಸೋಡು ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖಗೆ ರಾಜ್ಯ ಸರ್ಕಾರ 6 ತಂಡಗಳನ್ನು ರಚನೆ ಮಾಡಿದೆ. 

Published: 26th January 2021 09:03 AM  |   Last Updated: 26th January 2021 09:03 AM   |  A+A-


shivmogga

ಸ್ಫೋಟ ಸಂಭವಿಸಿದ ಸ್ಥಳ

Posted By : Manjula VN
Source : The New Indian Express

ಶಿವಮೊಗ್ಗ: ನಗರದ ಹೊರವಲಯದ ಹುಣಸೋಡು ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖಗೆ ರಾಜ್ಯ ಸರ್ಕಾರ 6 ತಂಡಗಳನ್ನು ರಚನೆ ಮಾಡಿದೆ. 

ಈ ಕುರಿತು ಮಾಹಿತಿ ನೀಡಿರುವ ಐಜಿಪಿ ಎಸ್.ರವಿ ಅವರು, ಪ್ರಕರಣ ಸಂಬಂಧ ತನಿಖೆ ನಡೆಯಲು 6 ತಂಡಗಳನ್ನು ರಚನೆ ಮಾಡಲಾಗಿದೆ. ಸ್ಫೋಟ ಪ್ರಕರಣ ಸಂಬಂಧ ಅಕ್ರಮ ಸ್ಫೋಟಕ ದಾಸ್ತಾನು, ರವಾನೆ ಹಾಗೂ ಸ್ಫೋಟ ಕುರಿತು ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ. 

ಪ್ರಕರಣದಲ್ಲಿ 6 ಜನರು ಸಾವನ್ನಪ್ಪಿದ್ದು, ಮೂವರು ಭದ್ರಾವತಿ ಹಾಗೂ ಮೂವರು ಅನಂತಪುರದವರೆಂದು ಗುರ್ತಿಸಲಾಗಿದೆ. ಇದರಲ್ಲಿ ಒಬ್ಬನ ಗುರುತು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. 

ಸ್ಫೋಟ ಸಂಭವಿಸಿದ ಸ್ಥಳದ ಸುತ್ತಮುತ್ತ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದೆ. ಈ ಪ್ರಕಣವನ್ನು ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. 

ಪ್ರಕಱಣ ಸಂಬಂಧ ಕ್ರಷಿಂಗ್ ಘಟಕದ ಮಾಲೀಕ ಹಾಗೂ ಮೂವರನ್ನು ಪೊಲೀಸರು ಬಂಧಿಸಿದ್ದು, ಇವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. 

ಸ್ಫೋಟಕ ವಸ್ತುಗಳನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ತರಲಾಗಿದೆ. ಚೆಕ್ ಪೋಸ್ಟ್ ಗಳಿ ಅಧಿಕಾರಿಗಳ ಕಣ್ಣುತಪ್ಪಿಸಿ ಯಾವ ರೀತಿ ಶಿವಮೊಗ್ಗಕ್ಕೆ ತರಲಾಗಿತ್ತು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ. ಸ್ಫೋಟ ವಸ್ತುಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗುತ್ತಿದೆ. ಘಟನಾ ಸ್ಥಳದಲ್ಲಿ ಜೀವಂತ ಜಿಲೆಟಿನ್ ಕಡ್ಡಿಗಳು ದೊರೆತಿವೆ. ಸ್ಥಳದಲ್ಲಿ ಪರಿಶೀಲನೆಗಳು ಮುಂದುವರೆಯಲಿದೆ ಎಂದು ರವಿಯವರು ತಿಳಿಸಿದ್ದಾರೆ. 

ಸ್ಫೋಟದಲ್ಲಿ ಮೃತನಾಗಿರುವ ಭದ್ರಾವತಿ ತಾಲೂಕಿನ ಅಂತರಗಂಗೆಯ ಪ್ರವೀಣ್ ಈ ಸ್ಫೋಟಕ ವಸ್ತುಗಳನ್ನು ಪೂರೈಸುವ ಏಜೆಂಟ್ ಆಗಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆಧರೆ, ಪ್ರವೀಣ್ ಈಗ ಬದುಕಿಲ್ಲದ ಕಾರಣ ಆಳವಾದ ಮಾಹಿತಿಗೆ ಪೊಲೀಸರಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧನಕ್ಕೊಳಪಡಿಸಲಾಗಿದೆ. ಬಂಧಿತರಿಂದ ಸಾಕಷ್ಟು ವಿಚಾರಗಳು ತಿಳಿದುಬರುತ್ತಿದೆ. ಆದರೆ, ಈ ವಿಷಯಗಳನ್ನು ಪೊಲೀಸರು ಹೊರಗೆ ಬಾರದಂತೆ ಬಹಳ ಎಚ್ಚರಿಕೆ ವಹಿಸಿದಂತೆ ಕಾಣುತ್ತಿದೆ. ಪೊಲೀಸರು ಯಾವ ಮಾಹಿತಿಯನ್ನು ಕೂಡ ಬಿಟ್ಟುಕೊಡದೆ ತಮಗೆ ಬೇಕಾದ ಅಂಶಗಳನ್ನು ಮಾತ್ರ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದ್ದಾರೆ. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp