ಪರಮವೀರ ಚಕ್ರ ಪ್ರಶಸ್ತಿ ನೀಡಿದ್ದು ನನಗೆ ತೃಪ್ತಿ ನೀಡಿಲ್ಲ: ಕರ್ನಲ್ ಸಂತೋಷ್ ಬಾಬು ತಂದೆ
ಗಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ನನ್ನ ಮಗ ಕರ್ನಲ್ ಸಂತೋಷ್ ಬಾಬುಗೆ ಕೇಂದ್ರ ಸರ್ಕಾರ ಪರಮವೀರ ಚಕ್ರ ಪ್ರಶಸ್ತಿ ನೀಡಿದ್ದು ತಮಗೆ ಶೇ.100ರಷ್ಟು ತೃಪ್ತಿ ನೀಡಿಲ್ಲ ಎಂದು ತಂದೆ ತಂದೆ ಬಿ. ಉಪೇಂದ್ರ ಅವರು ಹೇಳಿದ್ದಾರೆ.
Published: 27th January 2021 12:24 AM | Last Updated: 27th January 2021 12:24 AM | A+A A-

ಕರ್ನಲ್ ಸಂತೋಷ್ ಬಾಬು
ನವದೆಹಲಿ: ಗಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ನನ್ನ ಮಗ ಕರ್ನಲ್ ಸಂತೋಷ್ ಬಾಬುಗೆ ಕೇಂದ್ರ ಸರ್ಕಾರ ಪರಮವೀರ ಚಕ್ರ ಪ್ರಶಸ್ತಿ ನೀಡಿದ್ದು ತಮಗೆ ಶೇ.100ರಷ್ಟು ತೃಪ್ತಿ ನೀಡಿಲ್ಲ ಎಂದು ತಂದೆ ತಂದೆ ಬಿ. ಉಪೇಂದ್ರ ಅವರು ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಬಿ. ಉಪೇಂದ್ರ ಅವರು, ಭಾರತ-ಚೀನಾದ ಲಡಾಖ್ ಪೂರ್ವ ಗಡಿ ಪ್ರದೇಶ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ವೀರಯೋಧನ ಕರ್ನಲ್ ಸಂತೋಷ್ ಬಾಬು ಅವರಿಗೆ ಪರಮವೀರ ಚಕ್ರ ಪ್ರಶಸ್ತಿ ನೀಡುವುದರಿಂದ ಶೇ.100ರಷ್ಟು ತೃಪ್ತಿ ಆಗುವುದಿಲ್ಲ. ಅಂತೆಯೇ ಕೇಂದ್ರ ಸರ್ಕಾರವು ತಮ್ಮ ಮಗನಿಗೆ ಘೋಷಿಸಿರುವ ಪರಮವೀರ ಚಕ್ರ ಪ್ರಶಸ್ತಿ ಬಗ್ಗೆ ನಾನು ಅತೃಪ್ತಿ ಹೊಂದಿದ್ದೇನೆ ಎಂದು ಅರ್ಥವಲ್ಲ. ಆದರೆ ಒಂದು ಪ್ರಶಸ್ತಿಯಿಂದ ಶೇ.100ರಷ್ಟು ತೃಪ್ತಿ ನೀಡುವುದಕ್ಕೆ ಸಾಧ್ಯವಾಗದು. ಅದರ ಬದಲಿಗೆ ಬೇರೆ ರೀತಿಯಲ್ಲಿ ಗೌರವಿಸುವ ಅವಕಾಶವಿದೆ ಎಂದು ಹೇಳಿದ್ದಾರೆ.
ನನ್ನ ಮಗ, ತಾನು ನಿಯೋಜನೆಗೊಂಡ ಪ್ರದೇಶದಲ್ಲಿನ ಹವಾಮಾನ ಪರಿಸ್ಥಿತಿಗಳಿಂದ ಎದುರಾದ ಸವಾಲುಗಳನ್ನು ನಿವಾರಿಸಿಕೊಂಡು, ಚೀನಾದ ಸೈನ್ಯದೊಂದಿಗೆ ಹೋರಾಡಿದರು. ನನ್ನ ಮಗ ಮತ್ತು ಅವನ ಸಹಪಾಟಿ ಯೋಧರು ಬರಿಗಾಲಿನಿಂದ ಹೋರಾಡಿದರು. ಶತ್ರು ರಾಷ್ಟ್ರದ ಹೆಚ್ಚು ಸೈನಿಕರನ್ನು ಕೊಲ್ಲುವ ಮೂಲಕ ಭಾರತವು ಚೀನಾಕ್ಕಿಂತ ಶ್ರೇಷ್ಠ ಮತ್ತು ಬಲಶಾಲಿ ಎಂಬುದನ್ನು ಸಾಬೀತುಪಡಿಸಿದರು ಎಂದು ಹೇಳಿದರು.
ಕರ್ನಲ್ ಸಂತೋಷ್ ಬಾಬು ಅವರು ಬಿಹಾರದ 16ನೇ ರೆಜಿಮೆಂಟ್ ನ ಕಮಾಂಡರ್ ಆಫೀಸರ್ ಆಗಿದ್ದರು. 2020ರ ಜೂನ್.15ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮತ್ತು ಭಾರತೀಯ ಯೋಧರ ನಡುವೆ ಮುಖಾಮುಖಿ ಸಂಘರ್ಷ ನಡೆಯಿತು. ಅಂದು ಭಾರತದ 20 ಯೋಧರು ಹುತಾತ್ಮರಾಗಿದ್ದರು. ಕಳೆದ 2020ರ ಜೂನ್ ತಿಂಗಳಿನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದಿತ್ತು. ಅಂದು ದೇಶಕ್ಕಾಗಿ ಪ್ರಾಣಬಿಟ್ಟ ವೀರಯೋಧ ಕರ್ನಲ್ ಸಂತೋಷ್ ಬಾಬು ಅವರನ್ನು ಗುರುತಿಸಿದ ಕೇಂದ್ರ ಸರ್ಕಾರವು 72ನೇ ಗಣರಾಜ್ಯೋತ್ಸವದಂದು ಅವರಿಗೆ ಮರಣೋತ್ತರ ಪರಮವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸುವುದಾಗಿ ಘೋಷಿಸಿತ್ತು.