ಮಂಗಳೂರು ವಿಮಾನ ನಿಲ್ದಾಣ: ಅಕ್ರಮ ಸಾಗಣೆ ನಡೆಸಿದ್ದ 90 ಲಕ್ಷ ರೂ. ಮೌಲ್ಯದ ಚಿನ್ನ ವಶ, ಮೂವರ ಬಂಧನ
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಆಗಮಿಸಿದ ಮೂವರು ಪ್ರಯಾಣಿಕರನ್ನು ಬಂಧಿಸಿ, ಸುಮಾರು 90 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
Published: 27th January 2021 12:33 PM | Last Updated: 27th January 2021 01:28 PM | A+A A-

ವಶಕ್ಕೆ ಪಡೆಯಲಾದ ಚಿನ್ನ
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಆಗಮಿಸಿದ ಮೂವರು ಪ್ರಯಾಣಿಕರನ್ನು ಬಂಧಿಸಿ, ಸುಮಾರು 90 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಮೊದಲ ಪ್ರಕರಣದಲ್ಲಿ ಮಂಗಳವಾರ ರಾತ್ರಿ ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಆಗಮಿಸಿದ ಅಬ್ದುಲ್ ರಶೀದ್ ಅಡುಕಮ್ಮ ಕೊಟ್ಟುಂಬ ನನ್ನು ಕಸ್ಟಮ್ಸ್ ಅಧಿಕಾರಿಗಳು ತಡೆದಿದ್ದಾರೆ. ಕೇರಳದ ಕಾಸರಗೋಡು ನಿವಾಸಿಯಾಗಿರುವ ಈತ ಗುದನಾಳದಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ. ಅಧಿಕಾರಿಗಳು ಈತನಿಂದ 0.658 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ. ಚಿನ್ನವು 24 ಕ್ಯಾರೆಟ್ ಶುದ್ಧತೆಯನ್ನು ಹೊಂದಿದ್ದು, ಇದರ ಮೌಲ್ಯ 33.29 ಲಕ್ಷ ರೂ. ಆಗಿತ್ತು.
ಎರಡನೇ ಪ್ರಕರಣದಲ್ಲಿ ಸ್ಪೈಸ್ ಜೆಟ್ ವಿಮಾನದ ಮೂಲಕ ದುಬೈನಿಂದ ಆಗಮಿಸಿದ್ದ ಇಬ್ಬರು ಪ್ರಯಾಣಿಕರಿಂದ 57 ಲಕ್ಷ ರೂ.ಗಳ ಮೌಲ್ಯದ 1.119 ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.