ಚಾಮರಾಜನಗರ: ಲಂಚ ಸ್ವೀಕರಿಸುತ್ತಿದ್ದ ಲೆಬರ್‌ ಇನ್‌ಸ್ಪೆಕ್ಟರ್‌ ಎಸಿಬಿ ಬಲೆಗೆ!

ಮದುವೆ ಸಹಾಯಧನ ಮಂಜೂರು ಮಾಡಲು ಫಲಾನುಭವಿಯೊಬ್ಬರಿಂದ ಮೂರು ಸಾವಿರ ಲಂಚ ಪಡೆಯುತ್ತಿದ್ದ ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕಿ ಹಾಗೂ ಕಂಪ್ಯೂಟರ್‌ ಆಪರೇಟರ್‌ ಗುರುವಾರ ಭ್ರಷ್ಟಾಚಾರ ನಿಗ್ರಹದಳ(ಎಸಿಬಿ) ಬಲೆಗೆ ಬಿದ್ದಿದ್ದಾರೆ.

Published: 28th January 2021 08:07 PM  |   Last Updated: 28th January 2021 08:07 PM   |  A+A-


arrest

ಸಾಂಕೇತಿಕ ಚಿತ್ರ

Posted By : Vishwanath S
Source : UNI

ಚಾಮರಾಜನಗರ: ಮದುವೆ ಸಹಾಯಧನ ಮಂಜೂರು ಮಾಡಲು ಫಲಾನುಭವಿಯೊಬ್ಬರಿಂದ ಮೂರು ಸಾವಿರ ಲಂಚ ಪಡೆಯುತ್ತಿದ್ದ ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕಿ ಹಾಗೂ ಕಂಪ್ಯೂಟರ್‌ ಆಪರೇಟರ್‌ ಗುರುವಾರ ಭ್ರಷ್ಟಾಚಾರ ನಿಗ್ರಹದಳ(ಎಸಿಬಿ) ಬಲೆಗೆ ಬಿದ್ದಿದ್ದಾರೆ.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಯ ಸೀನಿಯರ್ ಲೇಬರ್ ಇನ್ಸ್‍ಪೆಕ್ಟರ್ ಗೀತಾ, ಕಂಪ್ಯೂಟರ್ ಆಪರೇಟರ್ (ಹೊರಗುತ್ತಿಗೆ) ಮಾಲತಿ ಎಸಿಬಿ ಬಲೆಗೆ ಬಿದ್ದ ನೌಕರರು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಮದುವೆ ಸಹಾಯಧನ ನೀಡಲಾಗುತ್ತಿದ್ದು, ಇದನ್ನು ಪಡೆಯಲು ಅರ್ಜಿ ಸಲ್ಲಿಸಿದ್ದ ರಾಮಸಮುದ್ರದ ಫ್ಲಂಬರ್‌ ಕೆಲಸಗಾರ ಚೇತನ್ ಅವರಿಂದ   ಗೀತಾ ಮತ್ತು ಮಾಲತಿ 3 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಆರೋಪಿಗಳಾದ ಗೀತಾ ,ಮಾಲತಿ ಅನ್ನು ಬಂಧಿಸಿದ್ದು, ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. 

ಸಹಾಯಧನ ನೀಡಲು ಲಂಚ ಕೇಳಿದ್ದರು!:

ರಾಮಸಮುದ್ರದ ಚೇತನ್ 2020ರ ನ.20ರಂದು ರೇಣುಕಾ ಎಂಬುವವರನ್ನು ವಿವಾಹವಾಗಿದ್ದು, ಕಾರ್ಮಿಕ ಇಲಾಖೆಯಲ್ಲಿ ಮದುವೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಕಾರ್ಮಿಕ ಇಲಾಖೆಯ ಕಂಪ್ಯೂಟರ್ ಆಪರೇಟರ್ ಮಾಲತಿ 2021ರ ಜ.21ರಂದು ಅರ್ಜಿದಾರ ಚೇತನ್‍ಗೆ ಕರೆ ಮಾಡಿ ಕಚೇರಿಗೆ ದಾಖಲೆಗಳನ್ನು ತರುವಂತೆ ಸೂಚಿಸಿದ್ದಾರೆ. ಜ.27ರಂದು ದಾಖಲೆಗಳನ್ನು ಮಾಲತಿ ಅವರಿಗೆ ಸಲ್ಲಿಸಿದಾಗ ಅವರು ಲೇಬರ್‍ಇನ್ಸ್‍ಪೆಕ್ಟರ್ ಲತಾ ಅನ್ನು ಪರಿಚಯಿಸಿ ಮದುವೆ ಸಹಾಯಧನ ಮಂಜೂರು ಮಾಡಲು 3 ಸಾವಿರ ರೂ. ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ಚೇತನ್ ಎಸಿಬಿಗೆ ದೂರು ನೀಡಿದ್ದರು.

ಈ ದೂರಿನನ್ವಯ ಎಸಿಬಿ ಮೈಸೂರು ದಕ್ಷಿಣ ವಲಯದ ಡಿವೈಎಸ್ಪಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಸದಾನಂದ ಎ.ತಿಪ್ಪಣ್ಣವರ್, ಎಸ್‌ಐಗಳಾದ ಕಿರಣ್‍ಕುಮಾರ್, ಎಲ್.ದೀಪಕ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ಗುಳಿಪುರ ನಂದೀಶ ಎಂ


Stay up to date on all the latest ರಾಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp