ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಕೇಂದ್ರದಿಂದ 800 ಕೋಟಿ ರು. ಅನುದಾನ

15ನೇ ಹಣಕಾಸು  ಆಯೋಗದ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರ ರಾಜ್ಯದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ 800 ಕೋಟಿ ರು ಹಣ ಬಿಡುಗಡೆ ಮಾಡಿದೆ.

Published: 28th January 2021 01:20 PM  |   Last Updated: 28th January 2021 01:21 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಬೆಂಗಳೂರು: 15ನೇ ಹಣಕಾಸು  ಆಯೋಗದ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರ ರಾಜ್ಯದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ 800 ಕೋಟಿ ರು ಹಣ ಬಿಡುಗಡೆ ಮಾಡಿದೆ. ಇನ್ನು 800 ಕೋಟಿ ರು ಅನುದಾನ ಬಿಡುಗಡೆ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.

2020-21ರ ಆರ್ಥಿಕ ವರ್ಷದ ಮೊದಲ ಕಂತಿನಲ್ಲಿ ರಾಜ್ಯಕ್ಕೆ 1,600 ಕೋಟಿ ರೂ. ನಿಗದಿ ಮಾಡಲಾಗಿದೆ. ಅದರಲ್ಲಿ ಸದ್ಯ 800 ಕೋಟಿ ರು ಮಾತ್ರ ಬಿಡುಗಡೆ ಮಾಡಲಾಗಿದೆ, ಸ್ಥಳೀಯ ಸಂಸ್ಥೆಗಳು ಸಂಬಳ ಅಥವಾ ಇತರ ಸ್ಥಾಪನಾ ವೆಚ್ಚಗಳನ್ನು ಹೊರತುಪಡಿಸಿ ಸ್ಥಳ-ನಿರ್ದಿಷ್ಟ ಅಗತ್ಯಗಳಿಗಾಗಿ ಮೂಲ ಅನುದಾನವನ್ನು ಬಳಸಬಹುದಾಗಿದೆ. 

ಟೈಡ್ ಅನುದಾನವನ್ನು ಮೂಲಭೂತ ಸೇವೆಗಳಾದ ನೈರ್ಮಲ್ಯ  ಮುಕ್ತ  ಮತ್ತು ಕುಡಿಯುವ ನೀರಿನ ಪೂರೈಕೆ, ಮಳೆನೀರು ಕೊಯ್ಲು ಮತ್ತು ನೀರಿನ ಮರುಬಳಕೆಗಾಗಿ ಬಳಸಿಕೊಳ್ಳಬಹುದು ಎಂದು ಕೇಂದ್ರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎರಡನೇ ಕಂತಿನಲ್ಲಿ, ಕೇಂದ್ರ ಹಣಕಾಸು ಇಲಾಖೆ 18 ರಾಜ್ಯಗಳಿಗೆ 12,351.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಸ್ವಚ್ಛ ಭಾರತ್ ಮತ್ತು ಜಲ ಜೀವನ್ ಮಿಷನ್‌ನಂತಹ ಕೇಂದ್ರೀಯ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ನೈರ್ಮಲ್ಯ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯವು ನಿಗದಿಪಡಿಸಿದ ಹಣಕ್ಕಿಂತ ಹೆಚ್ಚಿನದಾಗಿದೆ.

ಕೇಂದ್ರ ಸರ್ಕಾರದಿಂದ ಸ್ವೀಕೃತವಾದ 10 ಕೆಲಸದ ದಿನಗಳಲ್ಲಿ ರಾಜ್ಯಗಳು ಆರ್‌ಎಲ್‌ಬಿಗಳಿಗೆ ಅನುದಾನವನ್ನು ವರ್ಗಾಯಿಸಬೇಕಾಗುತ್ತದೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp