ಸಾಲದ ತೀರಿಸಲಾಗದೆ ಬೆಳಗಾವಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು
ಒಂದೇ ಕುಟುಂಬದ ನಾಲ್ವರು ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಬುಧವಾರ ತಡ ರಾತ್ರಿ ಜಿಲ್ಲೆಯ ರಾಯಬಾಗ ಬಳಿ ನಡೆದಿದೆ.
Published: 28th January 2021 04:04 PM | Last Updated: 28th January 2021 04:04 PM | A+A A-

ಆತ್ಮಹತ್ಯೆ
ಬೆಳಗಾವಿ: ಒಂದೇ ಕುಟುಂಬದ ನಾಲ್ವರು ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಬುಧವಾರ ತಡ ರಾತ್ರಿ ಜಿಲ್ಲೆಯ ರಾಯಬಾಗ ಬಳಿ ನಡೆದಿದೆ.
ಸಾತಪ್ಪ ಅಣ್ಣಪ್ಪ ಸುತಾರ (60), ಪತ್ನಿ ಮಹಾದೇವಿ ಸಾತಪ್ಪ ಸುತಾರ (50) ಹಾಗೂ ಮಕ್ಕಳಾದ ಸಂತೋಷ ಸಾತಪ್ಪ ಸುತಾರ (26), ದತ್ತಾತ್ರೇಯ ಸಾತಪ್ಪ ಸುತಾರ (28) ಆತ್ಮಹತ್ಯೆ ಮಾಡಿಕೊಂಡವರು.
ಮೃತರನ್ನು ಭಿರಡಿ ಗ್ರಾಮದವರು ಎಂದು ಗುರುತಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಸಾಲ ತೀರಿಸಲಾಗದೇ ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.