ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಜೈಲಿನಿಂದ ಬಿಡುಗಡೆಯಾದರೂ, ಆಸ್ಪತ್ರೆವಾಸದಲ್ಲಿ ಜಯಲಲಿತಾ ಆಪ್ತೆ ಶಶಿಕಲಾ 

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಆಸ್ತಿ ಸಂಪಾದನೆ ಆರೋಪ ಹೊತ್ತು 4 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಅವರು ಗುರುವಾರ ಅಧಿಕೃತವಾಗಿ ಬಂಧನ ಮುಕ್ತರಾಗಿದ್ದಾರೆ. 

Published: 28th January 2021 08:28 AM  |   Last Updated: 28th January 2021 01:00 PM   |  A+A-


Sasikala

ಶಶಿಕಲಾ

Posted By : Manjula VN
Source : The New Indian Express

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಆಸ್ತಿ ಸಂಪಾದನೆ ಆರೋಪ ಹೊತ್ತು 4 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಅವರು ಗುರುವಾರ ಅಧಿಕೃತವಾಗಿ ಬಂಧನ ಮುಕ್ತರಾಗಿದ್ದಾರೆ. 

ಕೊರೋನಾ ಪೀಡಿತರಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿಕಲಾಗೆ ವೈದ್ಯರ ಮೂಲಕ ಕಾರಾಗೃಹ ಅಧಿಕಾರಿಗಳು ಬಿಡುಗಡೆ ಪತ್ರ ನೀಡಿದರು. 

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜಯಲಲಿತಾ, ಶಶಿಕಲಾ, ಇಳವರಸಿ ಹಾಗೂ ಸುಧಾಕರ್ ಶಿಕ್ಷೆಗೆ ಗುರಿಯಾಗಿದ್ದರು. ಶಶಿಕಲಾ ಜೊತೆ ಇತರೆ ಇಬ್ಬರು ಕೂಡ ಬಂಧ ಮುಕ್ತರಾಗಿದ್ದಾರೆ. ಈ ಮೊದಲು ಶಶಿಕಲಾ ರೂ.10 ಕೋಟಿ ದಂಡವನ್ನು ನ್ಯಾಯಾಲಯಕ್ಕೆ ಪಾವತಿಸಿದ್ದರು. 

ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ತಮಿಳುನಾಡಿನ ಶಶಿಕಲಾ ಅವರ ಬಿಡುಗಡೆ ರಾಜಕೀಯವಾಗಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.

ಶಶಿಕಲಾ ಅವರಿಗೆ ಪ್ರತೀನಿತ್ಯ ಆರ್'ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ. ಜನವರಿ 30ರವರೆಗೂ ಈ ಪ್ರಕ್ರಿಯೆ ಇದೇ ರೀತಿ ಮುಂದುವರೆಯಲಿದೆ. ಸೋಂಕಿಗೊಳಗಾಗಿ 10 ದಿನವಾದರೂ ಚಿಕಿತ್ಸೆ ಬಳಿಕವೂ ಅವರಲ್ಲಿ ಕೊರೋನಾ ಪಾಸಿಟಿವ್ ಬಂದಿದೆ. ಎರಡು ಪರೀಕ್ಷೆಯಲ್ಲಿ ಕೊರೋನಾ ನೆಗೆಟಿವ್ ಬಂದರೆ ಶಶಿಕಲಾ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಶಶಿಕಲಾ ಆರೋಗ್ಯ ಇದೀಗ ಸ್ಥಿರವಾಗಿದ್ದು, ಪ್ರಜ್ಞೆಯಲ್ಲಿದ್ದಾರೆ. ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ಆಸ್ಪತ್ರೆಯಲ್ಲಿ ಶಶಿಕಲಾ ಅವರಿಗೆ ಚಿಕಿತ್ಸೆ ಮುಂದುವರೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಶಶಿಕಲಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಟಿಟಿವಿ ಧನಕರನ್ ಹಾಗೂ ಶಶಿಕಲಾ ಅವರ ಸಂಬಂಧಿಕರು, ಪಕ್ಷಕ ಕಾರ್ಯಕರ್ತರು ವಿಕ್ಟೋರಿಯಾ ಆಸ್ಪತ್ರೆ ಬಳಿ ಬಂದು ಸಂಭ್ರಮಿಸಿದರು. ಅಲ್ಲದೆ, ಸ್ಥಳದಲ್ಲಿದ್ದವರಿಗೆ ಸಿಹಿ ತಿನಿಸುಗಳನ್ನು ತಿನಿಸಿ ಶಶಿಕಲಾ ಪರ ಘೋಷಣೆಗಳನ್ನು ಕೂಗಿದರು. 

ಆಸ್ಪತ್ರೆ ಬಂದ ದಿನಕರನ್ ಅವರು ಶಶಿಕಲಾ ಅವರನ್ನು ಭೇಟಿ ಮಾಡಲು ಹಾತೊರೆದರು. ಆದರೆ, ಆಸ್ಪತ್ರೆಯ ಸಿಬ್ಬಂದಿಗಳು ಕೊರೋನಾ ಹಿನ್ನೆಲೆಯಲ್ಲಿ ಭೇಟಿಗೆ ಅವಕಾಶ ನೀಡಲಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ. 


Stay up to date on all the latest ರಾಜ್ಯ news
Poll
Minister sudhakar

ಆಧುನಿಕ ಭಾರತೀಯ ಮಹಿಳೆ ಮದುವೆ, ಮಕ್ಕಳನ್ನು ಬಯಸುವುದಿಲ್ಲ: ಸಚಿವ ಸುಧಾಕರ್ ಹೇಳಿಕೆ ಕುರಿತು ನಿಮ್ಮ ಅಭಿಪ್ರಾಯವೇನು?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp