ಉಡುಪಿ: ಇಂದ್ರಾಣಿ ನದಿಗೆ ರಾಸಾಯನಿಕ, ವಿಷಕಾರಿ ಕೊಳಚೆ ನೀರು ಸೇರ್ಪಡೆ, ಸ್ಥಳೀಯರ ಬದುಕು ಶೋಚನೀಯ
ಇಂದ್ರಾಣಿ ನದಿಗೆ ಸೇರುತ್ತಿರುವ ರಾಸಾಯನಿಕಗಳು, ತ್ಯಾಜ್ಯಗಳು ಮತ್ತು ಒಳಚರಂಡಿ ನೀರಿನ ವಿಷಕಾರಿ ಅಂಶಗಳು ಉಡುಪಿ ಜಿಲ್ಲೆಯ ಮಲ್ಪೆ ಬಳಿಯ ಕಲ್ಮಾಡಿಯಲ್ಲಿನ ಜನರ ಜೀವನವನ್ನು ಶೋಚನೀಯವಾಗಿಸಿದೆ.
Published: 29th January 2021 04:29 PM | Last Updated: 29th January 2021 04:29 PM | A+A A-

ರಾಸಾಯನಿಕ, ಕೊಳಚೆ ನೀರು ಸೇರಿರುವ ಕಲ್ಮಾಡಿಯ ಇಂದ್ರಾಣಿ ನದಿ
ಉಡುಪಿ: ಇಂದ್ರಾಣಿ ನದಿಗೆ ಸೇರುತ್ತಿರುವ ರಾಸಾಯನಿಕಗಳು, ತ್ಯಾಜ್ಯಗಳು ಮತ್ತು ಒಳಚರಂಡಿ ನೀರಿನ ವಿಷಕಾರಿ ಅಂಶಗಳು ಉಡುಪಿ ಜಿಲ್ಲೆಯ ಮಲ್ಪೆ ಬಳಿಯ ಕಲ್ಮಾಡಿಯಲ್ಲಿನ ಜನರ ಜೀವನವನ್ನು ಶೋಚನೀಯವಾಗಿಸಿದೆ. ಕಳೆದ ಒಂದು ದಶಕದಿಂದ ನದಿ ನೀರು ಕಲುಷಿತವಾಗಿದ್ದರೂ ಈ ವರ್ಷ ನೀರಿನ ವಾಸನೆ ಹಾಗೂ ಕಪ್ಪು ಬಣ್ಣದ ನೀರು ಇನ್ನಿಲ್ಲದಂತೆ ಜನರಿಗೆ ಸಂಕಟ ತಂದಿದೆ. ಈಗಲೂ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಮೇಲ್ವಿಚಾರಣೆ ನಡೆಸದೆ ಹೋದಲ್ಲಿ ಜಲಮೂಲವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸದೆ ಇದ್ದಲ್ಲಿ ಇದು ನದಿಯನ್ನು ಶಾಶ್ವತವಾಗಿ ನಾಮಾವಶೇಷವಾಗುವಂತೆ ಮಾಡಲಿದೆ.
ಕಲ್ಮಾಡಿಯ ಗೋವರ್ಧನ್ ಮೆಂಡನ್, ಸ್ಥಳೀಯರ ದುಗುಡ ಆಲಿಸಲು ಒಬ್ಬ ಜನರ ಪ್ರತಿನಿಧಿಯೂ ಸಹ ಸೌಜನ್ಯ ಹೊಂದಿಲ್ಲ‘‘ ಈ ಕಲುಷಿತ ಜಲವು ಕಲ್ಮಾಡಿಯ ನದಿಪಾತ್ರದಲ್ಲಿ ವಾಸಿಸುವ 500 ಕ್ಕೂ ಹೆಚ್ಚು ಕುಟುಂಬಗಳಿಗೆ ಅಪಾಯವಾಗಿದೆ, ’’ ಎಂದಿದ್ದಾರೆ.
‘‘ಕೆಲವು ನಿವಾಸಿಗಳು ಜ್ವರದಿಂದ ಪದೇ ಪದೇ ಬಳಲುತ್ತಿದ್ದರೆ ಕೆಲವರಿಗೆ ಚರ್ಮದ ಕಾಯಿಲೆಗಳು ಕಾಣಿಸಿದೆ.’’ ಎಂದು ಅವರು ಹೇಳುತ್ತಾರೆ. ಈ ನದಿಯ ಕಶ್ಮಲ ಹಾಗೂ ಅಸಹನೀಯ ಮಾಲಿನ್ಯದ ಕಾರಣದಿಂದ ಉಡುಪಿ ನಗರ ಪುರಸಭೆಯ ಮಿತಿಯಲ್ಲಿ ಹಲವಾರು ಡೆಂಗ್ಯೂ ಮತ್ತು ಮಲೇರಿಯಾ ಪ್ರಕರಣಗಳು ವರದಿಯಾಗಿದೆ.
ನಗರದ ಪರಿಸರ ಸಮಸ್ಯೆಗಳನ್ನು ಕಡಿಮೆಗೊಳಿಸಲು ಉತ್ತಮ ಕಾರ್ಯವಿಧಾನ ಅಳವಡಿಸಿಕೊಂಡಿದ್ದೇವೆ ಎನ್ನುವ ವ ಉಡುಪಿ ಸಿಎಂಸಿ ಅಧಿಕಾರಿಗಳು ಕಲ್ಮಾಡಿಗೆ ಭೇಟಿ ನೀಡಿ ಒಂದು ದಿನ ಇಲ್ಲಿಯೇ ಯಂಗಬೇಕು ಎಂದು ಗ್ರಾಮದ ಇನ್ನೊಬ್ಬ ನಿವಾಸಿ ಮೋಹನ್ ಹೇಳಿದ್ದಾರೆ. ‘‘ ಆಗ ಮಾತ್ರ ಅವರಿಗೆ ನೋವಿನ ಅರಿವಾಗುತ್ತದೆ" ಇಡೀ ಪ್ರದೇಶದ ಜನರು ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ನೀಡುತ್ತಿದ್ದು ಸಸಿತೋಟ, ಕಕ್ಕೆತೋಟ, ಹೊಸಕಟ್ಟೆ, ಮಠತೋಟ ಮತ್ತು ಬಾಪುತೋಟದಂತಹಾ ಪ್ರದೇಶಗಳು ಹೆಚ್ಚಿನ ಹಾನಿಗೊಳಗಾಗುತ್ತಿದೆ.
ಉಡುಪಿ ಸಿಎಂಸಿ ಅಧ್ಯಕ್ಷೆ ಸುಮಿತ್ರಾ ನಾಯಕ್ ಅವರು ತ್ಯಾಜ್ಯದ ನೀರನ್ನು ಹೊಳೆಗೆ ಹರಿದುಬಿಡುವ ಮೊದಲು ಸಂಸ್ಕರಿಸುವ ಬಗ್ಗೆ ಗಮನ ಹರಿಸುವುದಾಗಿ ಹೇಳಿದರು. ಕೆಲವು ವಾರಗಳ ಹಿಂದೆ ಉಡುಪಿ ನಗರದಲ್ಲಿ ಹಾನಿಗೊಳಗಾದ ಒಳಚರಂಡಿ ಪೈಪ್ಲೈನ್ಗೆ ಸಂಬಂಧಿಸಿ ಸಮಸ್ಯೆಗಳಿದ್ದು ಪೈಪ್ಲೈನ್ ಅನ್ನು ಈಗ ದುರಸ್ತಿ ಮಾಡಲಾಗುತ್ತಿದೆ. ಹಾಗಾಗಿ ಮಾಲಿನ್ಯದ ಮಟ್ಟ ಕ್ರಮೇಣ ಕಡಿಮೆಯಾಗಬಹುದು ಎಂದು ಅವರು ಹೇಳಿದರು.