ಲಂಚಕ್ಕೆ ಬೇಡಿಕೆ ಇಟ್ಟ ಆರೋಪ: ಸಚಿವರ ಪಿಎ ವಿರುದ್ಧ ಎಫ್ಐಆರ್ ದಾಖಲು

ಲಂಚಕ್ಕಾಗಿ ಬೇಡಿಕೆ ಇಟ್ಟ ಗಂಭೀರ ಆರೋಪದ ಸಂಬಂಧ ರಾಜ್ಯದ ಪ್ರಭಾವಿ ಸಚಿವರ ಪಿಎ ವಿರುದ್ಧ ಎಫ್ಐಆರ್ ದಾಖಲಾಗಿದೆ.

Published: 30th January 2021 12:57 PM  |   Last Updated: 30th January 2021 01:14 PM   |  A+A-


Posted By : Raghavendra Adiga
Source : Online Desk

ಶೃಂಗೇರಿ: ಲಂಚಕ್ಕಾಗಿ ಬೇಡಿಕೆ ಇಟ್ಟ ಗಂಭೀರ ಆರೋಪದ ಸಂಬಂಧ ರಾಜ್ಯದ ಪ್ರಭಾವಿ ಸಚಿವರ ಪಿಎ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪ್ರಭಾವಿ ಸಚಿವರೊಬ್ಬರ ಪಿಎ ಆಗಿರುವ ಗಂಗಾಧರ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪೋಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಗಂಗಾಧರ್ ತಮ್ಮ ಬಳಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರೆಂದು ಶೃಂಗೇರಿಯ ಸಬ್ ರಿಜಿಸ್ಟಾರ್ ಎಚ್.ಎಸ್. ಚೆಲುವರಾಜು ಶೃಂಗೇರಿ ಠಾಣೆಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ಶೃಂಗೇರಿಯ ಜೆಎಂಎಫ್ ಸಿ ನ್ಯಾಯಾಲಯ ಕೂಡ ಸರ್ಕಾರಿ ಅಧಿಕಾರಿ ದೂರು ಸಲ್ಲಿಸಿರುವ ಕಾರಣ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದ ಹಿನ್ನೆಲೆ ಪೋಲೀಸರು ಎಫ್ಐಆರ್  ದಾಖಲು ಮಾಡಿದ್ದಾರೆ.

ಇತ್ತ ಪ್ರಕರಣ ಬೆಳಕು ಕಾಣುತ್ತಿದ್ದಂತೆ ಸಚಿವರು ಗಂಗಾಧರ್ ಅವರನ್ನು ತಮ್ಮ ಪಿಎ ಸ್ಥಾನದಿಂದ ಕಿತ್ತು ಹಾಕಿದ್ದಾರೆ.


Stay up to date on all the latest ರಾಜ್ಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp