ಕರ್ತವ್ಯದ ಸಮಯದಲ್ಲೇ ಮಂಗಳೂರು ಸಿಸಿಬಿ ಪೊಲೀಸರಿಂದ 'ಎಣ್ಣೆ' ಪಾರ್ಟಿ, ವಿಡಿಯೋ ವೈರಲ್!

ಕರ್ತವ್ಯದ ಅವಧಿಯಲ್ಲೇ ಬಾರ್ ವೊಂದರಲ್ಲಿ ಮಂಗಳೂರಿನ ಸಿಸಿಬಿ ಪೊಲೀಸರು 'ಎಣ್ಣೆ' ಪಾರ್ಟಿ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

Published: 30th January 2021 04:45 PM  |   Last Updated: 30th January 2021 05:10 PM   |  A+A-


Incident Photo

ಪ್ರತ್ಯಕ್ಷ ದೃಶ್ಯ

Posted By : Vishwanath S
Source : Online Desk

ಮಂಗಳೂರು: ಕರ್ತವ್ಯದ ಅವಧಿಯಲ್ಲೇ ಬಾರ್ ವೊಂದರಲ್ಲಿ ಮಂಗಳೂರಿನ ಸಿಸಿಬಿ ಪೊಲೀಸರು 'ಎಣ್ಣೆ' ಪಾರ್ಟಿ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. 

ಮಂಗಳೂರು ಹೊರವಲಯದ ಕುತ್ತಾರು ಬಳಿಯ ಬಾರ್ ವೊಂದರಲ್ಲಿ ಪೊಲೀಸರು ಮದ್ಯ ಸೇವನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು ಟ್ವೀಟರಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅದು ಅಪರಾಧಿಯೊಬ್ಬನ ಜೊತೆ ಎಂಟು ಮಂದಿ ಸಿಸಿಬಿ ಪೊಲೀಸರು ಹಾಡಹಗಲೇ ಪಾರ್ಟಿ ಮಾಡಿದ್ದಾರೆ. ಈ ಸುದ್ದಿ ತಿಳಿದ ಕೂಡಲೇ ಮಂಗಳೂರು ಕಮಿಷನರ್ ಶಶಿಕುಮಾರ್ ತನಿಖೆಗೆ ಆದೇಶಿಸಿದ್ದಾರೆ. 

ಬಾರ್ ಹೊರಗೆ ಟಿಟಿ ವಾಹನ ನಿಲ್ಲಿಸಿ ಪೊಲೀಸರು ಪಾರ್ಟಿ ನಡೆಸುತ್ತಿದ್ದರು. ಈ ಸಂಬಂಧ ಮಂಗಳೂರು ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp