ಲಸಿಕೆ ಹಂಚಿಕೆಯಲ್ಲಿ ರಾಜ್ಯಕ್ಕೆ ತಾರತಮ್ಯವಾಗಿಲ್ಲ, ವಾಡಿಕೆಗಿಂತ 4.5 ಲಕ್ಷ ಡೋಸ್ ಹೆಚ್ಚು ಬಂದಿದೆ: ಸಚಿವ ಡಾ. ಕೆ.ಸುಧಾಕರ್

ರಾಜ್ಯಕ್ಕೆ ಕೇಂದ್ರದಿಂದ ಕೋವಿಶೀಲ್ಡ್ ಲಸಿಕೆ ಡೋಸ್ ಏಳೂವರೆ ಲಕ್ಷ ಬಂದಿದೆ. ಬಾಕಿ ಇರುವ ಲಸಿಕೆಯನ್ನು ಕಳುಹಿಸಿಕೊಡುವುದಾಗಿ ಕೇಂದ್ರ ಸರ್ಕಾರದಿಂದ ಮಾಹಿತಿ ಬಂದಿದೆ. ರಾಜ್ಯಕ್ಕೆ ಹಂಚಿಕೆ ಮಾಡಬೇಕಾಗಿದ್ದ ವಾಡಿಕೆಯ ಡೋಸ್ ಗಿಂತ ನಾಲ್ಕೂವರೆ ಲಕ್ಷ ಹೆಚ್ಚು ಲಸಿಕೆ ಬಂದಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.
ಸಚಿವ ಡಾ ಕೆ ಸುಧಾಕರ್
ಸಚಿವ ಡಾ ಕೆ ಸುಧಾಕರ್

ಬೆಂಗಳೂರು:ರಾಜ್ಯಕ್ಕೆ ಕೇಂದ್ರದಿಂದ ಕೋವಿಶೀಲ್ಡ್ ಲಸಿಕೆ ಡೋಸ್ ಏಳೂವರೆ ಲಕ್ಷ ಬಂದಿದೆ. ಬಾಕಿ ಇರುವ ಲಸಿಕೆಯನ್ನು ಕಳುಹಿಸಿಕೊಡುವುದಾಗಿ ಕೇಂದ್ರ ಸರ್ಕಾರದಿಂದ ಮಾಹಿತಿ ಬಂದಿದೆ. ರಾಜ್ಯಕ್ಕೆ ಹಂಚಿಕೆ ಮಾಡಬೇಕಾಗಿದ್ದ ವಾಡಿಕೆಯ ಡೋಸ್ ಗಿಂತ ನಾಲ್ಕೂವರೆ ಲಕ್ಷ ಹೆಚ್ಚು ಲಸಿಕೆ ಬಂದಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿರಂತರವಾಗಿ ವ್ಯತ್ಯಾಸವಾಗದಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಲಸಿಕೆ ಕಳುಹಿಸಿಕೊಡುತ್ತಿದೆ. ಇನ್ನೂ ಹೆಚ್ಚು ಲಸಿಕೆ ನೀಡಲು ರಾಜ್ಯ ಸರ್ಕಾರದ ಪರವಾಗಿ ಮನವಿ ಮಾಡಲು ನಾನು ಸೋಮವಾರ ದೆಹಲಿಗೆ ಹೋಗುತ್ತೇನೆ  ಎಂದರು.

ಜನಸಂಖ್ಯೆ ಸಾಂದ್ರತೆ ಆಧಾರದ ಮೇಲೆ ಮತ್ತು ದುರ್ಬಲ ಗುಂಪುಗಳಿಗೆ ಆದ್ಯತೆ ಮೇರೆಗೆ ನಾವು ಲಸಿಕೆ ಹಂಚಿಕೆ ಮಾಡುತ್ತೇವೆ. ಅದು ಬಿಟ್ಟರೆ ಯಾವುದೇ ಕ್ಷೇತ್ರಕ್ಕೆ, ತಾಲ್ಲೂಕಿಗೆ ಲಸಿಕೆಗಳನ್ನು ವಿಶೇಷವಾಗಿ ಹಂಚಿಕೆ ಮಾಡುವುದಿಲ್ಲ. ಇದಕ್ಕೆ ನಮ್ಮ ಅಪರ ಮುಖ್ಯ ಕಾರ್ಯದರ್ಶಿಗಳೇ ನೋಡಲ್ ಅಧಿಕಾರಿಯಾಗಿದ್ದಾರೆ. ಲಸಿಕೆ ಹಂಚಿಕೆಯಲ್ಲಿ ಯಾವುದೇ ರೀತಿಯ ತಾರತಮ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಾರ್, ನೈಟ್ ಕರ್ಫ್ಯೂ ತೆರೆಯುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆಯಾಗಿಲ್ಲ, ಇದು ಮಾಧ್ಯಮಗಳಲ್ಲಿ ಬಂದ ವರದಿ ಮಾತ್ರ, ನಮ್ಮಲ್ಲಿ ಆಗದ ಮಾತುಕತೆ, ಚರ್ಚೆ ಮಾಧ್ಯಮಗಳಲ್ಲಿ ಹೇಗೆ ಬರುತ್ತಿದೆ, ಈ ಮಾಹಿತಿಗಳನ್ನು ನಿಮಗೆ ನೀಡುವವರು ಯಾರು ಎಂಬ ಕುತೂಹಲ ನನಗೆ ಎಂದು ಸಚಿವರು ಹೇಳಿದರು.

3ನೇ ಹಂತದ ಅನ್‌ಲಾಕ್ ಸಂಬಂಧ ಸಭೆಗೂ ಮುನ್ನ ಚರ್ಚೆ. ತಾಂತ್ರಿಕಾ ಸಲಹಾ ಸಮಿತಿ ಸದಸ್ಯರ ಜೊತೆ ಚರ್ಚಿಸುತ್ತೇವೆ. ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಿಂದ ಸಲಹೆ ಪಡೆಯಬೇಕಾಗುತ್ತದೆ. ತಜ್ಞರ ಸಲಹೆಯ ಬಗ್ಗೆ ಸಿಎಂ ನೇತೃತ್ವದಲ್ಲಿ ನಾಳೆ ಸಭೆ ನಡೆದು ತೀರ್ಮಾನವಾಗುತ್ತದೆ. ನಾನು ವೈಯಕ್ತಿಕವಾಗಿ ಹೇಳಿಕೆ ನೀಡುವುದಕ್ಕೆ ಸಾಧ್ಯವಿಲ್ಲ. ತಜ್ಞರ ಅಭಿಪ್ರಾಯವನ್ನು ಪಡೆದು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com