ಬಿಡದಿ ತೋಟದ ಮನೆಯೇ ನನ್ನ ಖಾಯಂ ಆಸ್ತಿ: ಎಚ್.ಡಿ. ಕುಮಾರಸ್ವಾಮಿ

"ಬಿಡದಿಯ ತೋಟದ ಮನೆಯೇ ನನ್ನ ಖಾಯಂ ಆಸ್ತಿ. ಬದುಕಿರುವವರೆಗೂ ಇದೇ ನನ್ನ ಆಸ್ತಿ"ಹೀಗೆಂದು ಹೇಳಿದವರು ಬೇರೆ ಯಾರೂ ಅಲ್ಲ, ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ. ನಾನೀಗ ಬಿಡದಿ ತೋಟದ ಮನೆಯಲ್ಲಿಯೇ ಇದ್ದೇನೆ. ಯಾವುದೇ ವೆಸ್ಟ್ ಯಂಡ್ ಇಲ್ಲ, ರೈಟ್ ಯಂಡ್ ಇಲ್ಲ. ಈಗ ಯಾರೂ ದೂರಲು ಆಗುವುದಿಲ್ಲ ಎಂದಿದ್ದಾರೆ. 
ಎಚ್. ಡಿ. ಕುಮಾರಸ್ವಾಮಿ
ಎಚ್. ಡಿ. ಕುಮಾರಸ್ವಾಮಿ

ಬೆಂಗಳೂರು: "ಬಿಡದಿಯ ತೋಟದ ಮನೆಯೇ ನನ್ನ ಖಾಯಂ ಆಸ್ತಿ. ಬದುಕಿರುವವರೆಗೂ ಇದೇ ನನ್ನ ಆಸ್ತಿ"ಹೀಗೆಂದು ಹೇಳಿದವರು ಬೇರೆ ಯಾರೂ ಅಲ್ಲ, ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ. ನಾನೀಗ ಬಿಡದಿ ತೋಟದ ಮನೆಯಲ್ಲಿಯೇ ಇದ್ದೇನೆ. ಯಾವುದೇ ವೆಸ್ಟ್ ಯಂಡ್ ಇಲ್ಲ, ರೈಟ್ ಯಂಡ್ ಇಲ್ಲ. ಈಗ ಯಾರೂ ದೂರಲು ಆಗುವುದಿಲ್ಲ ಎಂದಿದ್ದಾರೆ. 

ಗುರುವಾರ ನಗರದ ಜೆ. ಪಿ. ಭವನದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್. ಡಿ. ಕುಮಾರಸ್ವಾಮಿ, ಮುಂದಿನ ದಿನಗಳಲ್ಲಿ ರಾಜ್ಯದ ಆರೂವರೆ ಕೋಟಿ ಜನರ ವಿಶ್ವಾಸ ಗಳಿಸುತ್ತೇನೆ. ರೈತರು ಬದುಕಲು ಹೇಗೆ ಸಾಧ್ಯ ಎಂಬುದನ್ನು ನನ್ನ ತೋಟದಲ್ಲಿ ಮಾಡಿ ತೋರಿಸುತ್ತೇನೆ. 

ಕೋವಿಡ್ ಅಲ್ಲಾ ಅದರಪ್ಪನಂತಹ ರೋಗ ಬಂದರೂ ಸಾವೇ ಬರದೇ ಇರುವ ಹಾಗೆ ಆರೋಗ್ಯ ಕ್ಷೇತ್ರಕ್ಕೆ ಕಾರ್ಯಕ್ರಮ ಕೊಡುತ್ತೇನೆಂದು ಸವಾಲು ಹಾಕಿದರು. 

ಪಂಚರತ್ನ ಕಾರ್ಯಕ್ರಮಕ್ಕೆ ನಿರ್ಧಿಸಿದ್ದು,ಸಿಎಂ ಆದರೆ ಐದು ವರ್ಷದಲ್ಲಿ ಒಂದೊಂದು ಕಾರ್ಯಕ್ರಮ ಕೊಡುತ್ತೇನೆ. ಪಂಚರತ್ನ ಬದಲಿಗೆ ಪಂಚಾಕ್ಷರಿ ಎಂದು ಹೆಸರಿಟ್ಟಿದ್ದೇನೆ. ವೀರಶೈವ ಸಮಾಜ ಅತ್ಯಂತ ಗೌರವ ಕೊಡುವ ಪಂಚಾಕ್ಷರಿ ಕಾರ್ಯಕ್ರಮ ಕೊಡುತ್ತೇನೆ. 120 ಸ್ಥಾನ ಬಂದರೆ ಆರೋಗ್ಯ, ರೈತ, ವಸತಿ, ಶಿಕ್ಷಣ ಮತ್ತು ಉದ್ಯೋಗ ಕಾರ್ಯಕ್ರಮ‌ ಕೊಡುತ್ತೇನೆ ಎಂದು ಮತ್ತೊಮ್ಮೆ ಸಿಎಂ ಆಗುವ ಮನದಿಂಗಿತವನ್ನು ವ್ಯಕ್ತಪಡಿಸಿ,ಸಾರ್ವತ್ರಿ ವಿಧಾನಸಭಾ ಚುನಾವಣೆ ಬಹಳ ದೂರವಿದ್ದರೂ ಈಗಲೇ ಪಕ್ಷದ ಪ್ರಣಾಳಿಕೆಯನ್ನೂ ಹೆಚ್‌ಡಿಕೆ ಘೋಷಿಸಿಬಿಟ್ಟರು. 

ಅಯ್ಯೋ ನಮ್ಮ ಸ್ವಾಮೀಜಿಗಳು ಬಹಳ ಜನ ಇವರೇ ಯಡಿಯೂರಪ್ಪ ಸಿಎಂ ಆಗಿರಬೇಕು ಎನ್ನುತ್ತಿದ್ದಾರೆ. ಇವರನ್ನೇ ಇಟ್ಟುಕೊಳ್ಳಿ ನಮಗೇನು? ಎಂದು ಲೇವಡಿ‌ ಮಾಡಿದ ಕುಮಾರಸ್ವಾಮಿ, ಮುಂದಿನ ಎರರಡು ವರ್ಷ ನಾನೇ ಸಿಎಂ ಎಂದೂ ಮುಂದಿನ ಹತ್ತು ವರ್ಷ ನಮ್ಮದೇ ಸರ್ಕಾರವೆಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಮೊದಲು ಈ ಯಡಿಯೂರಪ್ಪ ಈ ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿರುವುದನ್ನು ಇವರುಗಳು ಮೊದಲು ನಿಲ್ಲಿಸಲಿ ಎಂದು ಸೂಚ್ಯವಾಗಿ ಹೇಳಿದರು. 

ನಾವು ಈಗ ಕ್ವಾರಂಟೇನ್ ನಿಂದ ಹೊರಗೆ ಬಂದಿದ್ದೇವೆ. ಜೆಪಿ ಭವನದಲ್ಲಿ ಕೊರೊನಾ ಬಳಿಕ ಮೊದಲ ಕಾರ್ಯಕ್ರಮ ನಡೆಸಿದ್ದೇವೆ. ಇನ್ನು ಮುಂದೆ ಜೆಡಿಎಸ್ ಏನು ಎನ್ನುವುದನ್ನು ತೋರಿಸುತ್ತೇವೆ. ಜ. 15ರಿಂದ ನನ್ನ ಕಾರ್ಯಕ್ರಮ ಏನು ಎನ್ನುವುದನ್ನು ತಿಳಿಸುತ್ತೇನೆ. ಯಡಿರಪ್ಪರನ್ನೇ ನೀವು ತಲೆ ಮೇಲೆ ಹೊತ್ತುಕೊಂಡು ಓಡಾಡಿದರೆ ಏನೂ ಮಾಡಲು ಆಗುವುದಿಲ್ಲ ಎನ್ನುವ ಮೂಲಕ ಮುಂಬರಲಿರುವ ಚುನಾವಣೆಗೆ ತಾಲೀಮು ನಡೆಸಲು ಈಗಿನಿಂದಲೇ ತಮ್ಮ ಪಕ್ಷ ಸಿದ್ಧತೆ ನಡೆಸುತ್ತಿದೆ ಎನ್ನುವುದನ್ನು ಕುಮಾರಸ್ವಾಮಿ ಪರೋಕ್ಷವಾಗಿ ಒತ್ತಿ ಹೇಳಿದರು. 

ಮೈತ್ರಿ ಸರ್ಕಾರದಲ್ಲಿ ನಾನು ಹೋಟೆಲ್‌ನಲ್ಲಿ ಅಧಿಕಾರ ನಡೆಸಿದೆ ಎಂದು ಹೇಳುವ ಇದೇ ಸಿದ್ದರಾಮಯ್ಯ ಸರ್ಕಾರಿ ಬಂಗಲೆ ಬಿಟ್ಟುಕೊಡಲಿಲ್ಲ. ಕೆ. ಜೆ. ಜಾರ್ರ್ಜ್ ಹೆಸರಿನಲ್ಲಿದ್ದ ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯ ಉಳಿದುಕೊಂಡರು. ಆದರೆ ಸರ್ಕಾರದ ಬಂಗಲೆ, ಕಾರು ಯಾವುದನ್ನೂ ನಾನು ಪಡೆಯಲೇ ಇಲ್ಲ ಎಂದು ಹೆಚ್. ಡಿ ಕುಮಾರಸ್ವಾಮಿ ಹೇಳಿದರು. 

ಕಳೆದ ಮಾರ್ಚ್ 15ರಂದೇ ಲಾಕ್ ಡೌನ್ ಘೋಷಿಸುವಂತೆ ಸರ್ಕಾರಕ್ಕೆ ನಾನು ಹೇಳಿದ್ದೆ. ಹೀಗೆ ಲಾಕ್ಡೌನ್ ಬಗ್ಗೆ ಇಡೀ ದೇಶ, ರಾಜ್ಯದಲ್ಲಿ ನಾನೇ ಮೊದಲು ಹೇಳಿದ್ದೆ. ಆಗಲೇ ಲಾಕ್ ಡೌನ್ ಆಗಬೇಕಿತ್ತು. ಆದರೆ, ನನ್ನ ಮಾತನ್ನ ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ನಾನೇ ಆ ಜಾಗದಲ್ಲಿ ಇದ್ದಿದ್ದರೆ ಆಗಲೇ ಲಾಕ್ ಡೌನ್ ಮಾಡಿ ಪರಿಹಾರ ಘೋಷಿಸುತ್ತಿದ್ದೆ. ನಾನು ಮಾಡಿದ ಕೆಲಸವನ್ನು ಯಾರೂ ನೆನೆಸಿಕೊಳ್ಳಲಿಲ್ಲ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com