ಅಬಕಾರಿ ಇಲಾಖೆ ತ್ರೈಮಾಸಿಕ ವರದಿ: ಕೋವಿಡ್-19 ಲಾಕ್ ಡೌನ್ ಹೊರತಾಗಿಯೂ ಶೇ.55ರಷ್ಟು ಆದಾಯ ಹೆಚ್ಚಳ!

ಕೋವಿಡ್-19 ಲಾಕ್ ಡೌನ್ ಹೊರತಾಗಿಯೂ ರಾಜ್ಯ ಅಬಕಾರಿ ಇಲಾಖೆಯ ಆದಾಯ ಶೇ.55ರಷ್ಟು ಹೆಚ್ಚಳವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಹೊರತಾಗಿಯೂ ರಾಜ್ಯ ಅಬಕಾರಿ ಇಲಾಖೆಯ ಆದಾಯ ಶೇ.55ರಷ್ಟು ಹೆಚ್ಚಳವಾಗಿದೆ.

ಹೌದು.. ಅಬಕಾರಿ ಇಲಾಖೆ ತನ್ನ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದ್ದು, ಇದರಲ್ಲಿ ಇಲಾಖೆಯ ಆದಾಯ ಶೇ.55ರಷ್ಟು ಹೆಚ್ಚಳವಾಗಿದೆ. ಅಚ್ಚರಿ ಎಂದರೆ ಕಳೆದ 2 ತಿಂಗಳ ಕೋವಿಡ್ ಸಾಂಕ್ರಾಮಿಕದಿಂದಾಗಿ ರಾಜ್ಯದಲ್ಲಿ ಲಾಕ್ ಡೌನ್ ಹೇರಲಾಗಿತ್ತು. ಲಾಕ್ ಡೌನ್ ಹೊರತಾಗಿಯೂ ಇಲಾಖೆ ಶೇ.55ರಷ್ಟು ಆದಾಯ  ಹೆಚ್ಚಿಸಿಕೊಂಡಿದೆ. ಇದು ಇಲಾಖೆಯ ವಾರ್ಷಿಕ ಆಯವ್ಯಯದ ಗುರಿಗೆ ಸಮೀಪದ್ದಾಗಿದೆ. 

ಕಳೆದ ವರ್ಷದ ಲಾಕ್ ಡೌನ್ ನಲ್ಲಿ ಇಲಾಖೆಯ ಆದಾಯ ಭಾರಿ ಕುಸಿತಕಂಡಿತ್ತು. ಆದರೆ ಈ ಬಾರಿಯ ಲಾಕ್ ಡೌನ್ ನಲ್ಲಿ ಸರ್ಕಾರ ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಗಳಿಗೆ ಷರತ್ತುಬದ್ದ ಅನುಮತಿ ನೀಡಿತ್ತು. ಇದು ಇಲಾಖೆಯ ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಏಪ್ರಿಲ್ ನಿಂದ ಜೂನ್  ವರೆಗಿನ ಮೊದಲ ತ್ರೈಮಾಸಿಕ ವರದಿಯಲ್ಲಿ ಇಲಾಖೆ 5,954.07 ಕೋಟಿ ಆದಾಯ ಗಳಿಸಿತ್ತು. ಇದು ಕಳೆದ ವರ್ಷದ ಆದಾಯಕ್ಕಿಂತ 2,122.90ಕೋಟಿ ರೂ ಅಂದರೆ ಶೇ.55ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.

ಲಾಕ್ ಡೌನ್ ಸಮಯದಲ್ಲಿ ದಿನದಲ್ಲಿ ಕೆಲವು ಗಂಟೆಗಳ ಕಾಲ ಮದ್ಯದಂಗಡಿಗಳನ್ನು ತೆರೆದಿಡುವ ರಾಜ್ಯ ಸರ್ಕಾರದ ನಿರ್ಧಾರವು ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದು ತೋರುತ್ತದೆ.  ಸೀಮಿತ ಸಮಯವಿದ್ದರೂ ಮದ್ಯದ ಗಳಿಕೆಯಲ್ಲಿ 55.41%ರಷ್ಟು ಆದಾಯ ಹೆಚ್ಚಾಗಿದೆ.

2021-22ರ ಅಬಕಾರಿ ಆದಾಯದ ಬಜೆಟ್ ಅಂದಾಜು 24,580 ಕೋಟಿ ರೂ ಆಗಿದೆ. ಕಳೆದ ಮೂರು ತಿಂಗಳಲ್ಲಿ ರಾಜ್ಯವು ಆ ಗುರಿಯ ಶೇಕಡಾ 24.2 ರಷ್ಟು ಸಾಧಿಸಿದೆ. ಕರ್ನಾಟಕ ತನ್ನ ಬಜೆಟ್ ಅಂದಾಜು ಗುರಿಗಳನ್ನು ಸಾಧಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 2,122.90 ಕೋಟಿ ರೂ.  ಹೆಚ್ಚಾಗಿದೆ. ಇಲಾಖೆಯ ಮೂಲಗಳ ಪ್ರಕಾರ, ಮೊದಲ ತ್ರೈಮಾಸಿಕದಲ್ಲಿ ಇಂಡಿಯನ್ ಮೇಡ್ ಲಿಕ್ಕರ್‌ನ 154.19 ಲಕ್ಷ ಕಾರ್ಟನ್ ಪೆಟ್ಟಿಗೆಗಳು (ಸಿಬಿಗಳು) ಮಾರಾಟವಾದರೆ, 45.38 ಲಕ್ಷ ಸಿಬಿ ಬಿಯರ್ ಮಾರಾಟವಾಗಿದೆ. ಏಪ್ರಿಲ್ನಲ್ಲಿ ಐಎಂಎಲ್ ಮತ್ತು ಬಿಯರ್ ಮಾರಾಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com