ಸಿಎಂ ಯಡಿಯೂರಪ್ಪಗೆ ಭೂ ಸಂಕಷ್ಟ: ಡಿನೋಟಿಫಿಕೇಶ್ ಕೇಸಿನಲ್ಲಿ ಬಿ- ರಿಪೋರ್ಟ್ ತಿರಸ್ಕರಿಸಿದ ವಿಶೇಷ ನ್ಯಾಯಾಲಯ 

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ನೋಟಿಫಿಕೇಶನ್ ಕೇಸಿಗೆ ಸಂಬಂಧಪಟ್ಟಂತೆ ಮತ್ತೊಮ್ಮೆ ಹಿನ್ನಡೆಯಾಗಿದೆ.
ಸಿಎಂ ಬಿ ಎಸ್ ಯಡಿಯೂರಪ್ಪ
ಸಿಎಂ ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ನೋಟಿಫಿಕೇಶನ್ ಕೇಸಿಗೆ ಸಂಬಂಧಪಟ್ಟಂತೆ ಮತ್ತೊಮ್ಮೆ ಹಿನ್ನಡೆಯಾಗಿದೆ.

ನಗರದ ಪ್ರಮುಖ ಪ್ರದೇಶವೊಂದರಲ್ಲಿ 15 ವರ್ಷಗಳ ಹಳೆಯ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯನ್ನು ಅಂತ್ಯಗೊಳಿಸುವಂತೆ ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಇದೇ ವೇಳೆ ನ್ಯಾಯಾಲಯ ತನಿಖೆಯನ್ನು ತ್ವರಿತಗೊಳಿಸಿ ಅಂತಿಮ ಅಥವಾ ಹೆಚ್ಚುವರಿ ವರದಿಯನ್ನು ಕೂಡಲೇ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದೆ. ಕ್ರಿಮಿನಲ್ ವಿಧಾನ ಕೋಡ್ ನ ಸೆಕ್ಷನ್ 173(2)ರಡಿ ತನಿಖಾಧಿಕಾರಿಗಳು ಸಲ್ಲಿಸಿರುವ ಬಿ ರಿಪೋರ್ಟ್ ನ್ನು ತಿರಸ್ಕರಿಸಲಾಗುವುದು ಎಂದು ನ್ಯಾಯಾಧೀಶ ಶ್ರೀಧರ್ ಗೋಪಾಲಕೃಷ್ಣ ಭಟ್ ನಿನ್ನೆ ವಿಚಾರಣೆ ಬಳಿಕ ತಿಳಿಸಿದರು.

ಅದರ ಜೊತೆಗೆ ಸಿಆರ್ ಪಿಸಿ ಸೆಕ್ಷನ್ 156(3)ರಡಿ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜ್ಯ ಲೋಕಾಯುಕ್ತ ಇಲಾಖೆಯ ಪೊಲೀಸ್ ವಿಭಾಗಕ್ಕೆ ವರದಿಯನ್ನು ಸಲ್ಲಿಸಿ ಮುಂದಿನ ಹಂತದ ತನಿಖೆಯನ್ನು ತ್ವರಿತಗೊಳಿಸಿ ಅಂತಿಮ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com