ಚಿತ್ರದುರ್ಗ: ಮನೆ ಗೋಡೆ ಕುಸಿದು 3 ವರ್ಷದ ಬಾಲಕ ಸಾವು

ಮನೆಯ ಗೋಡೆ ಕುಸಿದ ಪರಿಣಾಮ ಮೂರು ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದಲ್ಲಿ ವರದಿಯಾಗಿದೆ.
ಘಟನಾ ದೃಶ್ಯ
ಘಟನಾ ದೃಶ್ಯ

ಚಿತ್ರದುರ್ಗ: ಮನೆಯ ಗೋಡೆ ಕುಸಿದ ಪರಿಣಾಮ ಮೂರು ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದಲ್ಲಿ ವರದಿಯಾಗಿದೆ.

ಮಳೆಯಿಂದಾಗಿ ನೆನೆದಿದ್ದ ಹಳೇ ಮನೆಯ ಗೋಡೆ ರಾತ್ರಿ ಮಲಗಿದ್ದ ಬಾಲಕ ಲೋಹಿತ್ (3) ಮೇಲೆ ಕುಸಿದಿದೆ. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬಾಲಕನ ಪೋಷಕರಾದ ಓಂಕಾರಪ್ಪ ಹಾಗೂ ಸಾವಿತ್ರಮ್ಮ ಇಬ್ಬರೂ ಘಟನೆ ವೇಳೆ ಬಾಲಕನ ಜತೆಯಲ್ಲಿದ್ದು ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಸಂಬಂಧ  ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com