ಯೆಸ್ ಬ್ಯಾಂಕ್ ನಿಂದ 712 ಕೋಟಿ ರು. ಸಾಲ ಪಡೆದು ವಂಚನೆ: ನಿತೇಶ್ ಎಸ್ಟೇಟ್ ಕಂಪನಿ ವಿರುದ್ಧ ದೂರು ದಾಖಲು

ನಾನಾ ಯೋಜನೆಗಳ ಹೆಸರಿನಲ್ಲಿ ಯೆಸ್‌ ಬ್ಯಾಂಕ್‌ನಿಂದ 712 ಕೋಟಿ ರೂ. ಸಾಲ ಪಡೆದು ವಂಚಿಸಿದ ಆರೋಪದಡಿ ನಿತೇಶ್‌ ಎಸ್ಟೇಟ್‌ ಕಂಪನಿ ವಿರುದ್ಧ ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಾನಾ ಯೋಜನೆಗಳ ಹೆಸರಿನಲ್ಲಿ ಯೆಸ್‌ ಬ್ಯಾಂಕ್‌ನಿಂದ 712 ಕೋಟಿ ರೂ. ಸಾಲ ಪಡೆದು ವಂಚಿಸಿದ ಆರೋಪದಡಿ ನಿತೇಶ್‌ ಎಸ್ಟೇಟ್‌ ಕಂಪನಿ ವಿರುದ್ಧ ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೆಸ್‌ ಬ್ಯಾಂಕ್‌ನ ಮುಂಬಯಿ ಶಾಖೆ ಅಧಿಕಾರಿ ಆಶೀಶ್‌ ವಿನೋದ ಜೋಶಿ ಎಂಬುವವರು ನೀಡಿದ ದೂರಿನ ಮೇರೆಗೆ ಜೂನ್ 9 ರಂದು ನಿತೇಶ್‌ ಸಮೂಹ ಕಂಪನಿ ವಿರುದ್ಧ ಕಬ್ಬನ್‌ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿತೇಶ್‌ ಎಸ್ಟೇಟ್‌, ನಿತೇಶ್‌ ಹೌಸಿಂಗ್‌ ಡೆವಲಪ್‌ಮೆಂಟ್‌, ನಿತೀಶ್‌ ಅರ್ಬನ್‌ ಡೆವಲಪ್‌ಮೆಂಟ್‌ ಪ್ರೈ.ಲಿ., ನಿತೇಶ್‌ ಶೆಟ್ಟಿ ಪ್ರಮೋಟರ್‌, ಲಾಲ್‌ಗುಡಿ ಸಪ್ತರಿಷಿ ವೈದ್ಯನಾಥನ್‌, ಕುಮಾರ್‌ ನೆಲ್ಲೂರ್‌ ಗೋಪಾಲ್‌ ಕೃಷ್ಣ, ಸುಬ್ರಮಣಿಯನ್‌ ಅನಂತನಾರಾಯಣ್‌, ಪ್ರದೀಪ್‌ ನಾರಾಯಣ್‌, ಮಹೇಶ್‌ ಭೂಪತಿ, ಚಂದ್ರಶೇಖರ್‌ ಪ್ರಶಾಂತ್‌ ಕುಮಾರ್‌ ಮತ್ತಿತರರ ವಿರುದ್ಧ ದೂರು ದಾಖಲಾಗಿದೆ. ಈ ಕಂಪನಿಯ ಎಲ್ಲ ಶಾಖೆಗಳು ಮುಂಬೈ ಹಾಗೂ ಬೆಂಗಳೂರಿನ ಕಸ್ತೂರ ಬಾ ರಸ್ತೆಯಲ್ಲಿರುವ ಯೆಸ್‌ ಬ್ಯಾಂಕ್‌ನಲ್ಲಿ ಹಣಕಾಸು ವ್ಯವಹಾರ ನಡೆಸಿತ್ತು ಎನ್ನಲಾಗಿದೆ.

ಆರೋಪಿಗಳ ಮೇಲೆ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆಗಾಗಿ ಶಿಕ್ಷೆ), 409 (ಸಾರ್ವಜನಿಕ ಸೇವಕರಿಂದ ಅಥವಾ ಬ್ಯಾಂಕರ್, ವ್ಯಾಪಾರಿ ಅಥವಾ ಏಜೆಂಟರಿಂದ ಅಪರಾಧದ ಉಲ್ಲಂಘನೆ), ಮತ್ತು 420 (ಮೋಸ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಿತೇಶ್ ಎಸ್ಟೇಟ್ಸ್‌ನ ಮೂಲ ಕಂಪನಿಯಾದ ಎನ್‌ಇಎಲ್ ಹೋಲ್ಡಿಂಗ್ಸ್ ಮಂಗಳವಾರ ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಿದ್ದು, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳ ಬಡ್ಡಿ, ಮರುಪಾವತಿ ಮತ್ತು ಪಟ್ಟಿಮಾಡದ ಸಾಲ ಸೆಕ್ಯೂರಿಟಿಗಳ ಮೇಲೆ ಡೀಫಾಲ್ಟ್ ಆಗಿವೆ. ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯು ಭಾರಿ ನಷ್ಟವನ್ನು ಅನುಭವಿಸಿದ ಬಗ್ಗೆ ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com