ಪಿಯುಸಿ ರಿಪೀಟರ್‌ಗಳು ತಮ್ಮ ಹಳೆಯ ಅಂಕಗಳ ಉಳಿವಿಗಾಗಿ ನೊಂದಾಯಿಸಿಕೊಳ್ಳಲು ಅವಕಾಶ: ಶಿಕ್ಷಣ ಇಲಾಖೆ

ದ್ವಿತೀಯ ಪಿಯುಸಿ ರಿಪೀಟರ್‌ಗಳು, ಅವರು ಉತ್ತಮವಾದ ಅಂಕ ಗಳಿಸಿದ್ದ ವಿಷಯಗಳಲ್ಲಿ ತಮ್ಮ ಅಂಕಗಳನ್ನು ಉಳಿಸಿಕೊಳ್ಳಲು ಬಯಸುತ್ತಾರೆ, ಅದಕ್ಕಾಗಿ ನಿರ್ದಿಷ್ಟ ವಿಷಯದ ಬಗ್ಗೆ ನೊಂದಾವಣೆ ಅಗತ್ಯವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು:  ದ್ವಿತೀಯ ಪಿಯುಸಿ ರಿಪೀಟರ್‌ಗಳು, ಅವರು ಉತ್ತಮವಾದ ಅಂಕ ಗಳಿಸಿದ್ದ ವಿಷಯಗಳಲ್ಲಿ ತಮ್ಮ ಅಂಕಗಳನ್ನು ಉಳಿಸಿಕೊಳ್ಳಲು ಬಯಸುತ್ತಾರೆ, ಅದಕ್ಕಾಗಿ ನಿರ್ದಿಷ್ಟ ವಿಷಯದ ಬಗ್ಗೆ ನೊಂದಾವಣೆ ಅಗತ್ಯವಾಗಿದೆ. ಹಳೆಯ ಅಂಕಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಅಥವಾ ಉತ್ತಮ ಅಂಕಕ್ಕಾಗಿ ಮತ್ತೆ ಪರೀಕ್ಷೆಯನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ನಿರ್ಧರಿಸಲು ಅವಕಾಶ ಸಿಗುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿದರು.

ಒಂದು ವೇಳೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಯಸಿದರೆ ಅವರ ಹೊಸ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿ ಹೇಳಿದರು. ಅಲ್ಲದೆ, ಅವರು ಹಳೆಯ ಅಂಕಗಳನ್ನು ಉಳಿಸಿಕೊಳ್ಳಲು ನೋಂದಾಯಿಸಲು ವಿಫಲವಾದರೆ ಅಥವಾ ಮುಂದಿನ ದಿನಗಳಲ್ಲಿ ಪರೀಕ್ಷೆಗೆ ಹಾಜರಾಗದಿದ್ದರೆ, ನಂತರ ಅವರು ಶೇಕಡಾ 5 ರಷ್ಟು ಗ್ರೇಸ್ ನಿಂದಾಗಿ ಪಾಸ್ ಅಂಕಗಳನ್ನು ಪಡೆಯುತ್ತಾರೆ.

ಶಿಕ್ಷಣ ಇಲಾಖೆಯು ಬುಧವಾರ ಈ ಬಗೆಗಿನ ಕಾರ್ಯವಿಧಾನವನ್ನು ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ಹಳೆಯ ಅಂಕಗಳನ್ನುಉಳಿಸಿಕೊಳ್ಳಲು ಜುಲೈ 12 ರ ಮೊದಲು ಕವರ್ ಲೆಟರ್ ಕಳುಹಿಸಬೇಕೆಂದು ಹೇಳಿದೆ. "ಈ ದಿನಾಂಕವನ್ನು ಮೀರಿದ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ" ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ವಿಶ್ವವಿದ್ಯಾಲಯ ಶಿಕ್ಷಣ ಸುತ್ತೋಲೆ. ಪರೀಕ್ಷೆಯನ್ನು ಮರು ಬರೆಯಲು ಬಯಸುವ ವಿದ್ಯಾರ್ಥಿಗಳು ಕಾಲೇಜು ಪ್ರಾಂಶುಪಾಲರಿಗೆ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ಹೇಳಿದೆ.

ಕಾಲೇಜು ಪ್ರಾಂಶುಪಾಲರು ಈ ಅರ್ಜಿಗಳನ್ನು ಜುಲೈ 15 ರೊಳಗೆ ಉಪ ನಿರ್ದೇಶಕರಿಗೆ ರವಾನಿಸುತ್ತಾರೆ. ಅರ್ಜಿಗಳನ್ನು ಜುಲೈ 19 ರೊಳಗೆ ಇಲಾಖಾ ಪ್ರಧಾನ ಕಚೇರಿಗೆ ಕಳುಹಿಸಲಾಗುವುದು. ಆಗಸ್ಟ್ 31 ರಂದು ಹೊಸ ಖಾಸಗಿ ಅಭ್ಯರ್ಥಿಗಳ ಪರೀಕ್ಷೆಯನ್ನು ನಿಗದಿಪಡಿಸಲು ಇಲಾಖೆ ನಿರ್ಧರಿಸಿದೆ, ಇದರ ಫಲಿತಾಂಶಗಳನ್ನು ಸೆಪ್ಟೆಂಬರ್ 20 ರೊಳಗೆ ಘೋಷಿಸಲಾಗುವುದು.

ಪರೀಕ್ಷೆಯನ್ನು ಬರೆಯಲು ಆಯ್ಕೆ ಮಾಡುವವರಿಗೆ ಇಲಾಖೆ ಮತ್ತಷ್ಟು ಅವಕಾಶ  ಹೆಚ್ಚಿಸಿದೆ. ಒಮ್ಮೆ ಅವರು ಪರೀಕ್ಷೆಯನ್ನು ಮರುಬರೆಯಲು ನೋಂದಾಯಿಸಿಕೊಂಡರೆ ಹೊಸ ಅರ್ಜಿಗಳನ್ನು ಸಲ್ಲಿಸಲು ಅವರಿಗೆ ಎರಡನೇ ಅವಕಾಶ ಸಿಗುವುದಿಲ್ಲ, 

ಜೈನ್ ವಿಶ್ವವಿದ್ಯಾನಿಲಯ ಬೆಂಬಲ

ಕೋವಿಡ್ ಸಹಾಯ ಹಸ್ತ ಚಾಚಲು, ಜೈನ್ (ಡೀಮ್ಡ್-ಟು-ಬಿ) ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ 100% ವಿದ್ಯಾರ್ಥಿ ವೇತನವನ್ನು ಘೋಷಿಸಿದೆ, ಅವರು ತಮ್ಮ ಕುಟುಂಬ ಸದಸ್ಯರನ್ನು ಕೋರೋನಾದಿಂದ ಕಳೆದುಕೊಂಡರೆ ಮತ್ತು ಉನ್ನತ ಶಿಕ್ಷಣದಲ್ಲಿ ತಮ್ಮ ಆನ್‌ಲೈನ್ ಪದವಿ ಕಾರ್ಯಕ್ರಮಗಳನ್ನು ಅನುಸರಿಸಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿವಿ ನೀಡಲಿದೆ.

ಅಣಕು ಪರೀಕ್ಷೆ ಕಡ್ಡಾಯವಲ್ಲ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಜುಲೈ 9 ಮತ್ತು 14 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1:30 ರವರೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸಲು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಪ್ರತಿ ಜಿಲ್ಲೆಯಿಂದ 20,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ.

ಪ್ರೋಟೋಕಾಲ್ ಗಳು ಮತ್ತು ಹೊಸ ಪರೀಕ್ಷಾ ವಿಧಾನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಇಲಾಖೆ ಅಣಕು ಪರೀಕ್ಷೆಯನ್ನು ಯೋಜಿಸಿದ್ದರೂ, ಸಾರ್ವಜನಿಕ ಶಿಕ್ಷಣ ಆಯುಕ್ತ ಅನ್ಬು ಕುಮಾರ್ ಅಣಕು ಪರೀಕ್ಷೆಯು ಕಡ್ಡಾಯವಲ್ಲ, ಆದರೆ ಅದೊಂದು ಸಲಹೆ ಬಂದಿದೆ ಎಂದು ಪತ್ರಿಕೆಗೆ ಹೇಳಿದ್ದಾರೆ. ಜುಲೈ 15 ಮತ್ತು 17 ರಂದು ಕೇಂದ್ರಗಳಲ್ಲಿ ಅಣಕು ಪರೀಕ್ಷೆಗಳನ್ನು ನಡೆಸಲು 10-15 ವಿದ್ಯಾರ್ಥಿಗಳ ಸಣ್ಣ ಗುಂಪುಗಳನ್ನು ಕರೆಯಲು ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ,

ಏತನ್ಮಧ್ಯೆ, ಎಲ್ಲಾ ಪರೀಕ್ಷಾ ಸಿಬ್ಬಂದಿಗೆ ಜುಲೈ 8 ರೊಳಗೆ ಲಸಿಕೆ ಹಾಕುವ ನಿರೀಕ್ಷೆಯಿದೆ, ಮಂಗಳವಾರ ಶೇ 95 ಕ್ಕಿಂತ ಹೆಚ್ಚು ಲಸಿಕೆ ನೀಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com