ಕೋವಿಡ್ ಲಸಿಕೆ ಮತ್ತು ಬೂಸ್ಟರ್ ಡೋಸ್ ವಿಭಿನ್ನ: ವೈರಾಲಜಿಸ್ಟ್ ಡಾ. ಶಾಹಿದ್ ಜಮೀಲ್

ಕೋವಿಡ್-19 ಲಸಿಕೆಗಳು ಸಾರ್ಸ್-ಕೋವಿಡ್-2 ರೂಪಾಂತರಿ ಡೆಲ್ಟಾ ರೂಪಾಂತರಿ ಮೇಲೆ ಎಷ್ಟು ಪರಿಣಾಮಕಾರಿ ಎಂಬ ಬಗ್ಗೆ ದೇಶ-ವಿದೇಶಗಳಲ್ಲಿ ವಿಜ್ಞಾನಿಗಳು, ತಜ್ಞರು ಚರ್ಚೆ ನಡೆಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಲಸಿಕೆಗಳು ಸಾರ್ಸ್-ಕೋವಿಡ್-2 ರೂಪಾಂತರಿ ಡೆಲ್ಟಾ ರೂಪಾಂತರಿ ಮೇಲೆ ಎಷ್ಟು ಪರಿಣಾಮಕಾರಿ ಎಂಬ ಬಗ್ಗೆ ದೇಶ-ವಿದೇಶಗಳಲ್ಲಿ ವಿಜ್ಞಾನಿಗಳು, ತಜ್ಞರು ಚರ್ಚೆ ನಡೆಸುತ್ತಿದ್ದಾರೆ.

ಭಾರತೀಯ ಸಾರ್ಸ್ ಕೋವಿಡ್-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG) ನ ಮಾಜಿ ಮುಖ್ಯಸ್ಥ ಮತ್ತು ವೈರಾಲಜಿಸ್ಟ್, ಡಾ. ಶಾಹಿದ್ ಜಮೀಲ್, ಭಾರತದಲ್ಲಿ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೈರೋಲಾಜಿಕಲ್ ಮತ್ತು ಇಮ್ಯುನೊಲಾಜಿಕಲ್ ದೃಷ್ಟಿಕೋನದ ಪ್ರಕಾರ, ವೈರಸ್ ವಿರುದ್ಧ ಲಸಿಕೆಗೆ ಬೂಸ್ಟರ್ ಡೋಸ್ ಕೊಡುವುದು ಒಳ್ಳೆಯ ನಡೆಯಾಗದಿರಬಹುದು.ಸರಳವಾಗಿ ಹೇಳುವುದೇನೆಂದರೆ, ಅಡೆನೊವೈರಸ್ ಗಳು ಹೆಚ್ಚು ಇಮೋನೊಜೆನಿಕ್ ಮತ್ತು ನಮ್ಮ ದೇಹವು ಎರಡು ಪ್ರಮಾಣಗಳ ನಂತರ, ಈಗಾಗಲೇ ಅಡೆನೊವೈರಸ್ ಹಿನ್ನೆಲೆಯ ವಿರುದ್ಧ ಸಾಕಷ್ಟು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಆದ್ದರಿಂದ, ಅದೇ ಲಸಿಕೆಯ ಮೂರನೇ ಬೂಸ್ಟರ್ ಪ್ರಮಾಣವು ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ ಎಂದು ಡಾ ಜಮೀಲ್ ಹೇಳುತ್ತಾರೆ.

ಈ ವಿಷಯದಲ್ಲಿ ಪ್ರಾಯೋಗಿಕ ಅಧ್ಯಯನಗಳು ನಡೆಸಬೇಕಾಗಿದ್ದು, ಮೂರನೇ ಡೋಸ್ ಬೇಕೆಂದರೆ ಅದು ವಿಭಿನ್ನ ಲಸಿಕೆಯಲ್ಲಾಗಿರಬೇಕು. ಭಾರತದಲ್ಲಿ ಬಳಕೆಯಾಗುವ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳ ಮಾದರಿಯಲ್ಲಿಯೇ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಗಳು ಕೆಲಸ ಮಾಡುತ್ತವೆ ಎಂದರು.

ಬೂಸ್ಟರ್ ಡೋಸ್ ಆಗಿ ಕೊವಾಕ್ಸಿನ್ ನ್ನು ಪ್ರಯೋಗಿಸಲು ಕಳೆದ ಏಪ್ರಿಲ್ ನಲ್ಲಿ ಭಾರತ್ ಬಯೋಟೆಕ್ ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಅನುಮತಿ ಸಿಕ್ಕಿತ್ತು. ಅದರ ಪ್ರಾಯೋಗಿಕ ಪರೀಕ್ಷೆ ಮೊದಲ ಫಲಿತಾಂಶ ಆಗಸ್ಟ್ ನಲ್ಲಿ ಬಿಡುಗಡೆಯಾಗಿದ್ದು ಅಂತಿಮ ಪ್ರಯೋಗ ಪರೀಕ್ಷೆ ಫಲಿತಾಂಶ ನವೆಂಬರ್ ನಲ್ಲಿ ಹೊರಬೀಳಲಿದೆ. ಲಸಿಕೆಯ ಮೂರನೇ ಡೋಸ್ ಕೋವಾಕ್ಸಿನ್, ಕೋವಿಶೀಲ್ಡ್ ಅಥವಾ ಇನ್ನಾವುದೇ ಎಂಆರ್‌ಎನ್‌ಎ ಲಸಿಕೆ, ಅಥವಾ ಪ್ರೋಟೀನ್ ಲಸಿಕೆ ತೆಗೆದುಕೊಂಡವರಿಗೆ ಸಂಯೋಜನೆಯಾಗಿರಬಹುದು. ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸುತ್ತಿರುವ ನೊವೊವಾಕ್ಸ್ ಅತ್ಯುತ್ತಮ ಫಲಿತಾಂಶಗಳನ್ನು ತೋರಿಸಿದೆ, ಆದ್ದರಿಂದ ಇದು ಸರಿಯಾದ ಆಯ್ಕೆಯಾಗಿರಬಹುದು ಎಂದು ಡಾ ಜಮೀಲ್ ಹೇಳುತ್ತಾರೆ.

ಲಸಿಕೆಗಳನ್ನು ಬೆರೆಸಲು ಮತ್ತು ಹೊಂದಾಣಿಕೆ ಮಾಡಲು ಮುಂದಾಗುವ ಮೊದಲು ಹೆಚ್ಚಿನ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಲು ಸರ್ಕಾರ ಕಾಯಬೇಕು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com