ಬಳ್ಳಾರಿ ಜಿಲ್ಲೆಗೆ ಮತ್ತೊಂದು ಗರಿ: ದೇಶದ ಎರಡನೇ ಗಣಿ ತರಬೇತಿ ಶಾಲೆ ಸ್ಥಾಪನೆ

ಕರ್ನಾಟಕ ಗಣಿಗಾರಿಕೆ ಕೇಂದ್ರ ಬಳ್ಳಾರಿಗೆ ಮತ್ತೊಂದು ಗರಿ ಪಡೆಯಲು ಸಜ್ಜಾಗಿದೆ. ದೇಶದ ಎರಡನೇ ಗಣಿ ತರಬೇತಿ ಶಾಲೆ ಶೀಘ್ರದಲ್ಲೇ ಸ್ಥಾಪಿಸಲಾಗುವುದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಳ್ಳಾರಿ: ಕರ್ನಾಟಕ ಗಣಿಗಾರಿಕೆ ಕೇಂದ್ರ ಬಳ್ಳಾರಿಗೆ ಮತ್ತೊಂದು ಗರಿ ಪಡೆಯಲು ಸಜ್ಜಾಗಿದೆ. ದೇಶದ ಎರಡನೇ ಗಣಿ ತರಬೇತಿ ಶಾಲೆ ಶೀಘ್ರದಲ್ಲೇ ಸ್ಥಾಪಿಸಲಾಗುವುದು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಈ ಯೋಜನೆಯನ್ನು 50 ಎಕರೆ ಜಾಗದಲ್ಲಿ ಸ್ಥಾಪಿಸುತ್ತಿದೆ.  ಕರ್ನಾಟಕ ಮತ್ತು ಭಾರತದ ಇತರ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣಿಗಾರಿಕೆ ಕಂಪನಿಗಳಿಗೆ ಲಗತ್ತಿಸಲಾದ ನೌಕರರಿಗೆ ತರಬೇತಿ ನೀಡಲಿದೆ.

ಗಣಿಗಾರಿಕೆ ಸಂಸ್ಥೆಗಳಿಗೆ ಮಾಲೀಕರು ಮತ್ತು ಇತರ ಉದ್ಯೋಗಿಗಳಿಗೆ ಕಾನೂನು ಷರತ್ತುಗಳು, ಸಾರಿಗೆ ಮತ್ತು ರಫ್ತು ಮಾಡುವಲ್ಲಿ ನೀತಿ ನಿಯಮಗಳು ಮತ್ತು ಇತರ ಕೆಲಸಗಳಿಗೆ ಈ ಸಂಸ್ಥೆ ಅಲ್ಪಾವಧಿಯ ತರಬೇತಿ ಕೋರ್ಸ್‌ಗಳನ್ನು ನಡೆಸುತ್ತದೆ.

ಜಾರ್ಖಂಡ್ ನ ಧನಾಬಾದ್ ನಲ್ಲಿ ಇಂತ ಒಂದು ತರಬೇತಿ ಕೇಂದ್ರವಿದೆ, ಬಳ್ಳಾರಿಯಲ್ಲಿ ಗಣಿ ತರಬೇತಿ ಶಾಲೆ ಆರಂಭಿಸಲು ಸಿದ್ಧತೆಗಳು ನಡೆದಿದ್ದು, ಮುಂದಿನ ತಿಂಗಳು ಕಟ್ಟಡ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.

ಗಣಿಗಾರಿಕೆಯ ಕೆಳ ಹಂತದ ಸಿಬ್ಬಂದಿಯಿಂದ ಹಿಡಿದು ಗಣಿ ಮಾಲೀಕರವರೆಗೆ ತರಬೇತಿ ನೀಡಲಾಗುತ್ತದೆ. ತರಬೇತಿಯಿಂದ ಸಮರ್ಥವಾಗಿ ಗಣಿಗಾರಿಕೆ ನಡೆಸಲು ಅನುಕೂಲವಾಗುತ್ತದೆ. ಜತೆಗೆ ಗಣಿಗಾರಿಕೆ ಪ್ರದೇಶಗಳನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎಂಬುದು ತಿಳಿಯುತ್ತದೆ. ಇದರಿಂದಾಗಿ ಗಣಿಗಾರಿಕೆ ಕ್ಷೇತ್ರದಲ್ಲಿ ಅಪವ್ಯಯ ತಪ್ಪಿಸಲು ನೆರವಾಗಲಿದ್ದು, ಹೆಚ್ಚು ಆದಾಯ ಹೊಂದಬಹುದು. ಜತೆಗೆ ಸರ್ಕಾರಕ್ಕೂ ಹೆಚ್ಚು ಆದಾಯ ಬರಲಿದೆ ಎಂದು ಹೇಳಿದರು.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳನ್ನು ಕರ್ನಾಟಕದ ಪ್ರಮುಖ ಗಣಿಗಾರಿಕೆ ಕೇಂದ್ರಗಳು ಎಂದು ಕರೆಯಲಾಗುತ್ತದೆ. ಈ ಎರಡು ಜಿಲ್ಲೆಗಳಲ್ಲಿ 32 ಪ್ರಮುಖ ಗಣಿಗಾರಿಕೆ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಜನರು ಈ ಪ್ರದೇಶದಲ್ಲಿ ಗಣಿಗಾರಿಕೆ ವ್ಯವಹಾರಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಕೆಲಸ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com