ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 10ನೇ, ಪ್ರಥಮ ಪಿಯುಸಿ ಅಂಕಗಳು ನಾಳೆಯಿಂದ ವೀಕ್ಷಣೆಗೆ ಲಭ್ಯ
ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಅಂಕಗಳನ್ನು ವೀಕ್ಷಿಸುವ ಅವಕಾಶವನ್ನು ನೀಡಿದ್ದು, ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆಯ ಪೋರ್ಟಲ್(SATS) ನಲ್ಲಿ ವೀಕ್ಷಿಸಬಹುದು.
Published: 09th July 2021 12:37 PM | Last Updated: 09th July 2021 12:37 PM | A+A A-

ಪದವಿ ಪೂರ್ವ ಶಿಕ್ಷಣ ಇಲಾಖೆ
ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಅಂಕಗಳನ್ನು ವೀಕ್ಷಿಸುವ ಅವಕಾಶವನ್ನು ನೀಡಿದ್ದು, ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆಯ ಪೋರ್ಟಲ್(SATS) ನಲ್ಲಿ ವೀಕ್ಷಿಸಬಹುದು.
ಪೋರ್ಟಲ್ ಲಿಂಕ್ ನಾಳೆಯಿಂದ ಸಕ್ರಿಯವಾಗಲಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು https://sts.karnataka.gov.in/SATSPU/ ಈ ಲಿಂಕ್ ಮೂಲಕ ನೋಡಬಹುದು. ಅಂಕಗಳನ್ನು ವೀಕ್ಷಿಸಿದ ನಂತರ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳಲ್ಲಿ ಸಂದೇಹ ಕಂಡುಬಂದರೆ ಅಥವಾ ಯಾವುದೇ ಲೋಪದೋಷ ಕಂಡುಬಂದರೆ ಆಯಾ ಕಾಲೇಜು ಪ್ರಾಂಶುಪಾಲರಿಗೆ ಇದೇ ತಿಂಗಳ 12ರೊಳಗೆ ಮಾಹಿತಿ ನೀಡಿ ಸರಿಪಡಿಸಿಕೊಳ್ಳಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಕಾಲೇಜು ಪ್ರಾಂಶುಪಾಲರು ದಾಖಲೆ ಮಾಡಿಕೊಂಡ ಅಂಕಗಳು ವಿದ್ಯಾರ್ಥಿಯ ಅಂತಿಮ ಅಂಕವೆಂದು ಪರಿಗಣಿಸಲಾಗುತ್ತದೆ. ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆಯ(SATS) ಪೋರ್ಟಲ್ ನಲ್ಲಿ ವಿದ್ಯಾರ್ಥಿಯು ತಮ್ಮ ಕಾಲೇಜಿನ ದಾಖಲು ಸಂಖ್ಯೆಯನ್ನು ದಾಖಲು ಮಾಡಿಕೊಂಡು ನೋಡಬಹುದು.
ವಿದ್ಯಾರ್ಥಿಗಳಿಗೆ ಸ್ಯಾಟ್ಸ್ ನಂಬರ್ ಅವರ ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿ ಅಥವಾ ವರ್ಗಾವಣೆ ಪ್ರಮಾಣಪತ್ರದಲ್ಲಿ ದೊರಕುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.