ಕರ್ನಾಟಕದ ನೂತನ ರಾಜ್ಯಪಾಲರಾಗಿ ಜುಲೈ 11ರಂದು ತಾವರ್‌ಚಂದ್ ಗೆಹ್ಲೋಟ್‌ ಪ್ರಮಾಣ ವಚನ: ವರದಿ

ಕರ್ನಾಟಕದ ನೂತನ ರಾಜ್ಯಪಾಲರಾಗಿ ಆಯ್ಕೆಯಾಗಿರುವ ತಾವರ್‌ಚಂದ್ ಗೆಹ್ಲೋಟ್‌ ಅವರು ಜುಲೈ 11 ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ತಾವರ್‌ಚಂದ್ ಗೆಹ್ಲೋಟ್‌
ತಾವರ್‌ಚಂದ್ ಗೆಹ್ಲೋಟ್‌

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಆಯ್ಕೆಯಾಗಿರುವ ತಾವರ್‌ಚಂದ್ ಗೆಹ್ಲೋಟ್‌ ಅವರು ಜುಲೈ 11 ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಹಾಲಿ ರಾಜ್ಯಪಾಲ ವಜುಭಾಯಿವಾಲಾ ಅವರ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ತಾವರ್‌ಚಂದ್ ಗೆಹ್ಲೋಟ್‌ ಅವರನ್ನು ರಾಷ್ಟ್ರಪತಿ ಭವನ ಕರ್ನಾಟಕದ ನೂತನ ರಾಪಾಲರಾಗಿ ಆಯ್ಕೆ ಮಾಡಿತ್ತು. ಮೂಲಗಳ ಪ್ರಕಾರ ಇದೇ ಭಾನುವಾರ ಬೆಳಿಗ್ಗೆ 10:30ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ  ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್ ಓಕಾ ಅವರು ನೂತನ ರಾಜ್ಯಪಾಲರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಲಿದ್ದಾರೆ. 

ದಲಿತ ಮುಖಂಡರಾಗಿರುವ ಗೆಹ್ಲೋಟ್ ಅವರು ಮೇ 18, 1948 ರಂದು ಮಧ್ಯಪ್ರದೇಶದ ಉಜ್ಜಯಿನಿಯ ರೂಪೇಟದಲ್ಲಿ ಜನಿಸಿದರು. ಅವರು ಉಜ್ಜಯಿನಿಯ ವಿಕ್ರಮ್ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದಿದ್ದರು. ಗೆಹ್ಲೋಟ್ 1962 ರಲ್ಲಿ ಜನ ಸಂಘದ ಮೂಲಕ ರಾಜಕೀಯ ಪ್ರವೇಶಿಸಿದರು ಮತ್ತು ಬಿಜೆಪಿಯಲ್ಲಿ  ಅದರ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿ ಸೇರಿದಂತೆ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ 2006 ಮತ್ತು 2014 ರ ನಡುವೆ ವರ್ಷಗಳ ಕಾಲ ರಾಜ್ಯ ಉಸ್ತುವಾರಿ ವಹಿಸಿದ್ದರಿಂದ ಅವರಿಗೆ ಕರ್ನಾಟಕದ ಪರಿಚಯವಿದೆ.

ಮಧ್ಯಪ್ರದೇಶದಲ್ಲಿ ಮೂರು ಅವಧಿಯ ಶಾಸಕರಾಗಿದ್ದ ಗೆಹ್ಲೋಟ್ 1996 ರಿಂದ 2009 ರವರೆಗೆ ಶಾಜಾಪುರದಿಂದ ಲೋಕಸಭಾ ಸದಸ್ಯರಾಗಿ ನಾಲ್ಕು ಅವಧಿಗೆ ಸೇವೆ ಸಲ್ಲಿಸಿದರು. 2009 ರ ಲೋಕಸಭಾ ಚುನಾವಣೆಯಲ್ಲಿ ಸೋತ ಅವರು 2012 ರಲ್ಲಿ ರಾಜ್ಯಸಭೆಗೆ ಕಳುಹಿಸಲ್ಪಟ್ಟರು. ಅಂತೆಯೇ ಕೇಂದ್ರದ  ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾಗಿದ್ದ ತಾವರ್‌ಚಂದ್‌ ಅವರು ಇತ್ತೀಚೆಗಷ್ಟೇ ರಾಜಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com