ಚಲನ್ ತಿದ್ದಿ ಸರ್ಕಾರದ ಬೊಕ್ಕಸಕ್ಕೆ ನಷ್ಟ: ನಾಲ್ವರು ಅಧಿಕಾರಿಗಳ ಅಮಾನತು

ಮಂಡ್ಯ ಉಪ ನೋಂದಣಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಚಲನ್‌ಗಳನ್ನು ತಿದ್ದಿ ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದ ಪ್ರಕರಣದಲ್ಲಿ ಇಬ್ಬರು ಸಬ್ ರಿಜಿಸ್ಟ್ರಾರ್ ಸೇರಿ 4 ಮಂದಿಯನ್ನು ಸೇವೆಯಿಂದ ವಜಾ ಮಾಡಿ ಸರ್ಕಾರ ಆದೇಶಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿವಮೊಗ್ಗ/ ಚಿಕ್ಕಮಗಳೂರು: ಮಂಡ್ಯ ಉಪ ನೋಂದಣಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಚಲನ್‌ಗಳನ್ನು ತಿದ್ದಿ ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದ ಪ್ರಕರಣದಲ್ಲಿ ಇಬ್ಬರು ಸಬ್ ರಿಜಿಸ್ಟ್ರಾರ್ ಸೇರಿ 4 ಮಂದಿಯನ್ನು ಸೇವೆಯಿಂದ ವಜಾ ಮಾಡಿ ಸರ್ಕಾರ ಆದೇಶಿಸಿದೆ.

ಶೃಂಗೇರಿ ಸಬ್ ರಿಜಿಸ್ಟ್ರಾರ್ ಎಚ್.ಎಸ್ ಚಲುವರಾಜ್ ಮತ್ತು  ಎಸ್.ಎನ್.ಪ್ರಭಾ ಅವರನ್ನು ವಜಾಗೊಳಿಸಲಾಗಿದೆ. ಇವರು 2005-06ರಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಚಲನ್‌ಗಳನ್ನು ತಿದ್ದಿ ಸರ್ಕಾರಕ್ಕೆ ನಷ್ಟ ಮಾಡಿದ್ದ ಆರೋಪಕ್ಕೆ ಗುರಿಯಾಗಿದ್ದರು.

ನೆಲಂಮಂಗಲ ಎಸ್‌ಡಿಎ ಎ.ಸಿ. ಸುನಂದ, ಮಳವಳ್ಳಿಯ ಎಸ್‌ಡಿಎ ಲೀಲಾವತಿ ಸೇವೆಯಿಂದ ವಜಾಗೊಂಡವರು. ಇವರು 2005 06ರಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಚಲನ್‌ಗಳನ್ನು ತಿದ್ದಿ ಸರ್ಕಾರಕ್ಕೆ ನಷ್ಟ ಮಾಡಿದ್ದ ಆರೋಪಕ್ಕೆ ಗುರಿಯಾಗಿದ್ದರು. ನಿವೃತ್ತ ನ್ಯಾಯಾಧೀಶರಾದ ಬಿ.ರಂಗಸ್ವಾಮಿ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು

ವಿಚಾರಣೆ ವೇಳೆ ಪ್ರಭಾ 77 ಪ್ರಕರಣಗಳಲ್ಲಿ 6.36 ಲಕ್ಷ ರೂ., ಚಲುವರಾಜು 13 ಪ್ರಕರಣಗಳಲ್ಲಿ 1.78 ಲಕ್ಷ ರೂ. ಸುನಂದ 8 ಕೇಸಿನಲ್ಲಿ 62 ಸಾವಿರ ರೂ. ಹಾಗೂ ಲೀಲಾವತಿ 40 ಪ್ರಕರಣದಲ್ಲಿ 5.29 ಲಕ್ಷ ರೂಪಾಯಿಯನ್ನು ಸರ್ಕಾರಕ್ಕೆ ನಷ್ಟ ಮಾಡಿರುವುದು ಬೆಳಕಿಗೆ ಬಂದಿತ್ತು.

ಚೆಲುವರಾಜು ಅವರು ಶೃಂಗೇರಿ ಉಪ-ರಿಜಿಸ್ಟ್ರಾರ್ ಆಗಿದ್ದಾಗ, ಕಂದಾಯ ಸಚಿವ ಆರ್ ಅಶೋಕ ಅವರ  ಆಪ್ತ ಕಾರ್ಯದರ್ಶಿ’ ಗಂಗಾಧರ ಬಿ ಅವರ ವಿರುದ್ಧ ಹಣ ಬೇಡಿಕೆ ಮತ್ತು ಹಣ ಪಾವತಿಸಲು ನಿರಾಕರಿಸಿದಾಗ ಬೆದರಿಕೆ ಹಾಕಿದ್ದರೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು.  ಅವರನ್ನು ಸೇವೆಯಿಂದ ವಜಾಗೊಳಿಸಿದ್ದು ಚಲನ್ ಟ್ಯಾಂಪರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ,  ನವೆಂಬರ್ 13, 2006 ರಂದು ತನಿಖೆಗೆ ಆದೇಶಿಸಲಾಗಿತ್ತು. ನ್ಯಾಯಾಲಯದಲ್ಲಿ ಅಧಿಕಾರಿ, ನೌಕರರನ್ನು ಅಪರಾಧಿ ಎಂದು ಶಿಕ್ಷೆಯಾದ ಕಾರಣ ಅವರನ್ನುಸೇವೆಯಿಂದ ವಜಾ ಮಾಡಿರುವುದಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಪಿ.ಮೋಹನ್ ರಾಜ್ ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com