ಜುಲೈ 20ರ ವೇಳೆಗೆ ದ್ವಿತೀಯ ಪಿಯುಸಿ ಫಲಿತಾಂಶ: ಸಚಿವ ಸುರೇಶ್ ಕುಮಾರ್
ಬಹುನಿರೀಕ್ಷಿತ, ವಿದ್ಯಾರ್ಥಿಗಳು ಕಾಯುತ್ತಿರುವ ದ್ವಿತೀಯ ಪಿಯುಸಿ ಫಲಿತಾಂಶ ಜುಲೈ 20ರ ವೇಳೆಗೆ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್ ತಿಳಿಸಿದ್ದಾರೆ.
Published: 10th July 2021 01:47 PM | Last Updated: 10th July 2021 01:51 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬಹುನಿರೀಕ್ಷಿತ, ವಿದ್ಯಾರ್ಥಿಗಳು ಕಾಯುತ್ತಿರುವ ದ್ವಿತೀಯ ಪಿಯುಸಿ ಫಲಿತಾಂಶ ಜುಲೈ 20ರ ವೇಳೆಗೆ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್ ತಿಳಿಸಿದ್ದಾರೆ.
ನಿನ್ನೆ ಸುದ್ದಿಗಾರರೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಜುಲೈ 20ರ ಹೊತ್ತಿಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಿದೆ, ಜುಲೈ 3ನೇ ವಾರದ ಹೊತ್ತಿಗೆ ಫಲಿತಾಂಶ ಪ್ರಕಟಿಸಬೇಕೆಂದು ನಾವು ಅಂದುಕೊಂಡಿದ್ದೇವೆ ಎಂದರು.
ಪ್ರಸಕ್ತ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಅಡೆತಡೆಯಿಲ್ಲದೆ ಶಿಕ್ಷಣ ಮುಂದುವರಿಯಲು ಶಿಕ್ಷಣ ತಜ್ಞರು, ಅಧಿಕಾರಿಗಳು, ಪೋಷಕರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ನೇತೃತ್ವದಲ್ಲಿ ಕಾರ್ಯಪಡೆಯನ್ನು ರಚಿಸಿ ಮಕ್ಕಳಲ್ಲಿ ನಿರಂತರ ಕಲಿಕೆಯನ್ನು ಹೇಗೆ ಮುಂದುವರಿಸಲಾಗುವುದು ಎಂದು ಯೋಜಿಸಲಾಗುವುದು ಎಂದಿದ್ದಾರೆ.
ಗ್ರಾಮ ಪಂಚಾಯತ್ ಲೈಬ್ರೆರಿಗಳಲ್ಲಿ ಟೆಲಿವಿಷನ್ ಸೆಟ್ ಗಳನ್ನು ಹಾಕಿ ಅದರ ಮೂಲಕ ಮಕ್ಕಳಿಗೆ ಕಲಿಕೆ ನೀಡುವ ಯೋಜನೆಯಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆದಿದೆ. ಮನೆಗಳಲ್ಲಿ ಟಿವಿಗಳಿಲ್ಲದ ಮಕ್ಕಳಿಗೆ ಇದರಿಂದ ಸಹಾಯವಾಗಲಿದೆ, ಚಂದನದಲ್ಲಿ ಬರುವ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು ಎಂದರು.