ಲಾಕ್ ಡೌನ್ ನಿಂದ ರಾಜ್ಯದ ಖಾಸಗಿ ಬಸ್ ಮಾಲೀಕರಿಗೆ 400 ಕೋಟಿ ರೂ ನಷ್ಟ- ಒಕ್ಕೂಟದ ಅಧ್ಯಕ್ಷ 

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್ ಡೌನ್‍ ನಿಂದ ರಾಜ್ಯದಲ್ಲಿ ಖಾಸಗಿ ಬಸ್ ಮಾಲೀಕರು 400 ಕೋಟಿ ರೂ ಗೂ ಅಧಿಕ ನಷ್ಟ ಅನುಭವಿಸಿದ್ದಾರೆ ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಕುಲಿಯಾಡಿ ಸುರೇಶ್ ನಾಯಕ್‍ ಹೇಳಿದ್ದಾರೆ. 
ಖಾಸಗಿ ಬಸ್ ಸಾಂದರ್ಭಿಕ ಚಿತ್ರ
ಖಾಸಗಿ ಬಸ್ ಸಾಂದರ್ಭಿಕ ಚಿತ್ರ

ಉಡುಪಿ: ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್ ಡೌನ್‍ ನಿಂದ ರಾಜ್ಯದಲ್ಲಿ ಖಾಸಗಿ ಬಸ್ ಮಾಲೀಕರು 400 ಕೋಟಿ ರೂ. ಗೂ ಅಧಿಕ ನಷ್ಟ ಅನುಭವಿಸಿದ್ದಾರೆ ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಕುಲಿಯಾಡಿ ಸುರೇಶ್ ನಾಯಕ್‍ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಎಕ್ಸ್ ಪ್ರೆಸ್ ಸೇವೆ ಸೇರಿದಂತೆ 8,000 ಖಾಸಗಿ ಬಸ್ ಗಳು ಕಾರ್ಯನಿರ್ವಹಿಸುತ್ತಿವೆ. ಲಾಕ್‍ ಡೌನ್‍ ನಿಂದ ಪ್ರತಿ ದಿನ 50,000 ರೂ ನಿಂದ 1.50 ಲಕ್ಷದ ವರೆಗೆ ಬಸ್ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. 

ಲಾಕ್ ಡೌನ್ ನಿಂದ ನಷ್ಟ ಉಂಟಾಗಿದ್ದರಿಂದ ಸದ್ಯ ಖಾಸಗಿ ಬಸ್ ಮಾಲೀಕರು ತೀವ್ರ ಸಂಕಷ್ಟದಲ್ಲಿರುವುದಾಗಿ ನಾಯಕ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com