ಅನ್ ಲಾಕ್ ನಡುವೆ ರಾಜ್ಯದಲ್ಲಿ ದಿನವೊಂದಕ್ಕೆ 1.6 ಲಕ್ಷ ಕೋವಿಡ್ ಟೆಸ್ಟ್, ಶೇ. 6.64 ಮಂದಿಗೆ ಲಸಿಕೆ

3ನೇ ಹಂತದ ಅನ್ ಲಾಕ್ ಜುಲೈ 5 ರಿಂದ ಪ್ರಾರಂಭವಾಗಿದ್ದು ಜನರು ಮನೆಯಿಂದ ಹೊರಬರಲು  ಪ್ರಾರಂಭಿಸಿದ್ದಾರೆ, ಆದರೆ ಕರ್ನಾಟಕದಲ್ಲಿ  ವ್ಯಾಕ್ಸಿನೇಷನ್ ಮತ್ತು ಕೋವಿಡ್ ಪರೀಕ್ಷೆ ಹೆಚ್ಚಳವಾಗಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 3ನೇ ಹಂತದ ಅನ್ ಲಾಕ್ ಜುಲೈ 5 ರಿಂದ ಪ್ರಾರಂಭವಾಗಿದ್ದು ಜನರು ಮನೆಯಿಂದ ಹೊರಬರಲು  ಪ್ರಾರಂಭಿಸಿದ್ದಾರೆ, ಆದರೆ ಕರ್ನಾಟಕದಲ್ಲಿ  ವ್ಯಾಕ್ಸಿನೇಷನ್ ಮತ್ತು ಕೋವಿಡ್ ಪರೀಕ್ಷೆ ಹೆಚ್ಚಳವಾಗಿಲ್ಲ. ಹೆಚ್ಚಿನ ಸಂಖ್ಯೆಯ ಜನರು ಆಗಮಿಸುತ್ತಿರುವ ಬೆಂಗಳೂರು ನಗರವು ಮೇ 17 ರಿಂದ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 13,237 (ಶನಿವಾರ) ದಿಂದ 13,459 (ಭಾನುವಾರ)ಕ್ಕೆ ಏರಿದೆ.

ಜುಲೈ 5 ರಿಂದ ದೈನಂದಿನ ಕೊರೊಣಾ ಪರೀಕ್ಷೆಗಳ ಸಂಖ್ಯೆ ಸ್ಥಿರವಾಗಿ ಕುಸಿದಿದೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತೋರಿಸುತ್ತವೆ. ಜುಲೈ 7 ರಂದು ಕೋವಿಡ್ ಪರೀಕ್ಷೆಗಳ ಸಂಖ್ಯೆ 1,66,631 ಆಗಿತ್ತು, ಆದರೆ ಜುಲೈ 10 ರಂದು ಅದು 1,45,666 ಕ್ಕೆ ಇಳಿದಿದೆ, ಆದರೂ ಇದು ಭಾನುವಾರ 1,58,898ಕ್ಕೆ ಏರಿದೆ.ಆದರೆ ತಜ್ಞರು ಸೂಚಿಸಿದಂತೆ ಗುರಿ ಆಧಾರಿತ, ಕೇಂದ್ರೀಕೃತ ಪರೀಕ್ಷೆಗಿಂತ ಯಾದೃಚ್ಚಿಕ ಪರೀಕ್ಷೆಯತ್ತ ಗಮನ ಹರಿಸಲಾಗಿದೆ.

ಮಾರ್ಚ್ 2020 ರಲ್ಲಿ ಸಾಂಕ್ರಾಮಿಕ ರೋಗ ರಾಜ್ಯದ ಮೇಲೆ ಪರಿಣಾಮ ಬೀರಿದಾಗಿನಿಂದ ಇದುವರೆಗೆ ನಡೆಸಿದ ಒಟ್ಟು ಪರೀಕ್ಷೆಗಳ ಸಂಖ್ಯೆ 3,59,34,618 (ಭಾನುವಾರದ ವೇಳೆಗೆ 3.59 ಕೋಟಿಗಿಂತಲೂ ಹೆಚ್ಚು) ರಾಜ್ಯದ ಅಂದಾಜು ಜನಸಂಖ್ಯೆ  6.84 ಕೋಟಿ (ಮಕ್ಕಳು ಸೇರಿದಂತೆ) ಮತ್ತು ವ್ಯಾಕ್ಸಿನೇಷನ್ ಗೆ ಅರ್ಹವಾದ ಜನಸಂಖ್ಯೆ 7.07 ಕೋಟಿ (ವಲಸೆ ಕಾರ್ಮಿಕರ ದೊಡ್ಡ ಭಾಗ ಮತ್ತು ತಾತ್ಕಾಲಿಕ ಜನರೂ ಸೇರಿದಂತೆ).

ಆರ್‌ಟಿ-ಪಿಸಿಆರ್, ಕೇಂದ್ರೀಕೃತ ಪರೀಕ್ಷೆಯತ್ತ ಸರ್ಕಾರ ಗಮನ ಹರಿಸಬೇಕು

ಪರೀಕ್ಷಾ ಶೇಕಡಾವಾರು ಕ್ರಮವಾಗಿ 52.46 ಮತ್ತು 50.77 ಕ್ರಮವಾಗಿ ಖಾಯಂ ನಿವಾಸಿಗಳು ಹಾಗೂ ವಲಸಿಗ ಜನಸಂಖ್ಯೆಯದ್ದಾಗಿದ್ದು ಈ ವರ್ಷ ಜನವರಿ 16 ರಂದು ಪ್ರಾರಂಭಿಸಲಾದ ವ್ಯಾಕ್ಸಿನೇಷನ್ ಅಭಿಯಾನ ಇಲ್ಲಿಯವರೆಗೆ ಗುರಿ ಜನಸಂಖ್ಯೆಯ ಶೇಕಡಾ 6.64 ರಷ್ಟು (7.07 ಕೋಟಿ) ಜನರನ್ನು ತಲುಪಿದೆ.(ಎರಡು ಡೋಸ್ ಲಸಿಕೆ ನೀಡಿರುವವರ ಸಂಖ್ಯೆ). ಆರೋಗ್ಯ ಕಾರ್ಯಕರ್ತರ ವಿಭಾಗ ಲಸಿಕೆಯ  ಅತಿದೊಡ್ಡ ಪಾಲನ್ನು(32.27 ಶೇಕಡಾ) ಕಂಡಿದೆ. 45 ವರ್ಷಕ್ಕಿಂತ ಮೇಲ್ಪಟ್ಟವರು, ಶೇಕಡಾ 22.21; ಮುಂಚೂಣಿ ಕಾರ್ಯಕರ್ತರು, ಶೇಕಡಾ 1.33; ಮತ್ತು 18-45 ವಯಸ್ಸಿನ ವಿಭಾಗ, ಶೇಕಡಾ 0.70 ಮಂದಿಗೆ ಲಸಿಕೆ ಸಿಕ್ಕಿದೆ.

ಕರ್ನಾಟಕ ಇದುವರೆಗೆ 2.56 ಕೋಟಿ ಡೋಸ್‌ಗಳನ್ನು (ಮೊದಲ ಮತ್ತು ಎರಡನೇ ಡೋಸ್)ನೀಡಿದೆ. ಆದರೆ ಅನ್ ಲಾಕ್ ಕ್ 3 ಹಂತ ಪ್ರಾರಂಭವಾಗುವುದರೊಂದಿಗೆ, ಪ್ರಕರಣಗಳು ಕಡಿಮೆಯಾಗಲು ಪ್ರತಿ ಜಿಲ್ಲೆಯಲ್ಲೂ ವ್ಯಾಕ್ಸಿನೇಷನ್ ಡ್ರೈವ್ ತೆಗೆದುಕೊಳ್ಳುವ ಅಗತ್ಯವಿದೆ ಎಂದು ತಜ್ಞರು ಸೂಚಿಸುತ್ತಾರೆ. ರಾಜ್ಯದ ವಾರ್ ರೂಮ್  ಅಂಕಿಅಂಶಗಳ ಪ್ರಕಾರ, ಬೆಂಗಳೂರು ನಗರವು ಅತಿ ಹೆಚ್ಚು ವ್ಯಾಕ್ಸಿನೇಷನ್ (ಶೇಕಡಾ 71.41) ನಡೆಸಿದ್ದರೆ  ಉಡುಪಿ ಜಿಲ್ಲೆಯುಶೇಕಡಾ 52.33ರೊಡನೆ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಮಿಕ್ಕ ಜಿಲ್ಲೆಗಳಲ್ಲಿ ಶೇಕಡಾ 46ಕ್ಕಿಂತ ಕಡಿಮೆ ಲಸಿಕೆ ವಿತರಣೆಯಾಗಿದೆ. ರಾಯಚೂರು ಅತಿ ಕಡಿಮೆ ಎಂದರೆ ಶೇ 27.29 ಮಂದಿಗೆ ಲಸಿಕೆ ನೀಡಿದೆ.

ಇದಕ್ಕೆ ಕಾರಣವೆಂದರೆ ಜನರಲ್ಲಿ ಇನ್ನೂ ಚಾಲ್ತಿಯಲ್ಲಿರುವ ಹಿಂಜರಿಕೆ ಮತ್ತು ರಾಜ್ಯಕ್ಕೆ ಲಸಿಕೆ ಸರಬರಾಜಿನ ಕೊರತೆ. ಸಾಂಕ್ರಾಮಿಕ ರೋಗವನ್ನು ತಗ್ಗಿಸಲು ಪ್ರಕರಣಗಳ ಪತ್ತೆ ಮತ್ತು ಗುರಿ ಪರೀಕ್ಷೆ ಎರಡು ಪ್ರಮುಖ ಮಾರ್ಗಗಳಾಗಿವೆ. ವ್ಯಾಕ್ಸಿನೇಷನ್ ಅನ್ನು ಹೆಚ್ಚಿಸುವುದು ಮೂಲ ಮಂತ್ರವಾಗಿರಬೇಕು ಮತ್ತು ಆರ್‌ಟಿಪಿಸಿಆರ್ ಆಧಾರಿತ ಕೇಂದ್ರೀಕೃತ ಪರೀಕ್ಷೆಯತ್ತ ಗಮನ ಹರಿಸಬೇಕು ಎಂದು ತಜ್ಞರು ಹೇಳಿದ್ದಾರೆ.

ಎಲ್ಲಾ ಪಾಸಿಟಿವ್ ಪ್ರಕರಣಗಳನ್ನು ಪತ್ತೆಹಚ್ಚುವುದು ಮತ್ತು ಮೂರನೇ ಅಲೆಯನ್ನು ವಿಳಂಬಗೊಳಿಸಲು ಶೀಘ್ರದಲ್ಲೇ ಚಿಕಿತ್ಸೆಯನ್ನು ಪ್ರಾರಂಭಿಸುವುದು ಮುಖ್ಯ. ಹಾಗಾದರೆ ಮೂರನೇ ಅಲೆಅಪಾಯವನ್ನು ಕಡಿಮೆ ಮಾಡುತ್ತದೆ, ಏಕೆಂದರೆ ಆ ಹೊತ್ತಿಗೆ ಹೆಚ್ಚಿನ ಜನರು ಲಸಿಕೆ ಪಡೆಯುವಂತಾಗಲಿದೆ” ಎಂದು ಶ್ರೀ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್ ನಿರ್ದೇಶಕ ಮತ್ತು ರಾಜ್ಯದ ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.

ಸಿಎಚ್‌ಡಿ ಗ್ರೂಪ್‌ನ ಸಿಇಒ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ಡಾ. ಎಡ್ಮಂಡ್ ಫರ್ನಾಂಡಿಸ್, “ಪ್ರತಿಯೊಂದು ಜಿಲ್ಲೆಯಲ್ಲೂ, ವಿಶೇಷವಾಗಿ ಕೈಗಾರಿಕೆಗಳು, ಶಾಲೆಗಳು ಮತ್ತು ಕಾಲೇಜುಗಳನ್ನು ಕೇಂದ್ರೀಕೃತವಾಗಿಸಿ ಲಸಿಕೆ ಅಭಿಯಾನ ಹೆಚ್ಚಿಸಬೇಕಾಗಿದೆ. ವ್ಯಾಕ್ಸಿನೇಷನ್ ನಮ್ಮ ಏಕೈಕ ಉತ್ತರವಾಗಿರಬೇಕು, ಆದರೆ ನಾವು ಆಸ್ಪತ್ರೆಗಳಲ್ಲಿ ಹಾಸಿಗೆಯ ಸಾಮರ್ಥ್ಯವನ್ನು ಹೆಚ್ಚಿಸಬೇಕು” ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com