ಇದು ಮಕ್ಕಳಾಟ ಅಲ್ಲ; ಆನ್ ಲೈನ್ ತರಗತಿಗೆ ಹಾಜರಾಗಲು ಮಾಡಬೇಕಾದ 'ಮರಕೋತಿ' ಸಾಹಸ!

ಆನ್ ಲೈನ್ ತರಗತಿಗೆ ಹಾಜರಾಗಲು ಮಕ್ಕಳು ಹರಸಾಹಸ ಪಡಬೇಕಾ? ಕೆಲವರು ಮರಗಳನ್ನು ಹತ್ತುತ್ತಿದ್ದಾರೆ. ಕೆಲವರು ಬೃಹತ್ ಬಂಡೆಗಳನ್ನು ಏರುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಮಗ್ನರಾಗಿದ್ದು ಕಾರುಗಳಲ್ಲೇ ಕುಳಿತುಕೊಳ್ಳುತ್ತಾರೆ.
ವಿದ್ಯಾರ್ಥಿಗಳು
ವಿದ್ಯಾರ್ಥಿಗಳು

ಮಡಿಕೇರಿ: ಆನ್ ಲೈನ್ ತರಗತಿಗೆ ಹಾಜರಾಗಲು ಮಕ್ಕಳು ಹರಸಾಹಸ ಪಡಬೇಕಾ? ಕೆಲವರು ಮರಗಳನ್ನು ಹತ್ತುತ್ತಿದ್ದಾರೆ. ಕೆಲವರು ಬೃಹತ್ ಬಂಡೆಗಳನ್ನು ಏರುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಮಗ್ನರಾಗಿದ್ದು ಕಾರುಗಳಲ್ಲೇ ಕುಳಿತುಕೊಳ್ಳುತ್ತಾರೆ. ಮಳೆಯೇ ಬರಲಿ ಬಿಸಿಲೆ ಇರಲಿ, ಕೊಡಗಿನ ಗ್ರಾಮೀಣ ಭಾಗದ ಮಕ್ಕಳು ಪ್ರತಿದಿನ ಸುಮಾರು 2 ಕಿಲೋಮೀಟರ್ ನಡೆದು ಗುಡ್ಡಗಾಡುಗಳಲ್ಲಿ ಸುತ್ತಾಡಿಕೊಂಡು ಸ್ಥಿರವಾದ 4 ಜಿ ನೆಟ್‌ವರ್ಕ್ ಹುಡುಕುತ್ತಾರೆ. 

ಮಕ್ಕಳ ಶಿಕ್ಷಣಕ್ಕೆ ಧಕ್ಕೆ ತರುತ್ತಿರುವ ಮೊಬೈಲ್ ನೆಟ್‌ವರ್ಕ್ ಸಮಸ್ಯೆಗಳ ಹೆಚ್ಚುತ್ತಿರುವುದರಿಂದ ಈ ಪ್ರದೇಶದಲ್ಲಿ ಸರಿಯಾದ ನೆಟ್ ವರ್ಕ್ ಗಳನ್ನು ಸ್ಥಾಪಿಸುವಂತೆ ಮನವಿ ಮಾಡುತ್ತಿದ್ದರು ಕಿವುಡು ಸರ್ಕಾರ ಯಾವುದೇ ಕ್ರಮಗೈಕೊಳ್ಳುತ್ತಿಲ್ಲ. ಹೀಗಾಗಿ ನಾವು ಎಲ್ಲಾ ನೆಟ್ ವರ್ಕ್ ಕಂಪನಿಗಳ ಇಂಟರ್ನೆಟ್ ಡಾಂಗಲ್ ಗಳನ್ನು ಖರೀದಿಸಿದ್ದೇವೆ. 

ಅವುಗಳನ್ನು ಎತ್ತರದ ಪ್ರದೇಶದಲ್ಲಿ ಸ್ಥಾಪಿಸಿದ್ದರೂ ಅದು ಏನೂ ಕೆಲಸ ಮಾಡುತ್ತಿಲ್ಲ. ಆದ್ದರಿಂದ, ನಾನು ನನ್ನ ಮಕ್ಕಳನ್ನು ಚೆಲವಾರ ಜಲಪಾತ ಪ್ರದೇಶಕ್ಕೆ ಜೀಪಿನಲ್ಲಿ ಕರೆದೊಯ್ಯುತ್ತೇನೆ. ಮನೆಯಿಂದ ಸುಮಾರು 2 ಕಿ.ಮೀ ದೂರದಲ್ಲಿದೆ. ನಂತರ ಹಿರಿಯ ಪೋಷಕರನ್ನು ನೋಡಿಕೊಳ್ಳಲು ನಾನು ಮನೆಗೆ ಹಿಂದಿರುಗುತ್ತೇನೆ. ತರಗತಿಗಳಲ್ಲಿ ಸಹಾಯ ಮಾಡಲು ನನ್ನ ಹೆಂಡತಿ ಮಕ್ಕಳೊಂದಿಗೆ ಇರುತ್ತೇನೆ ಎಂದು ಚೆಲವಾರದ ನರಿಯಂದದ ಗ್ರಾಮದ ನಿವಾಸಿ ಮಣಿಯಪಾಂಡ ಧೀರಜ್ ತಿಮ್ಮಯ್ಯ ಹಂಚಿಕೊಂಡರು. ಅವರ ಇಬ್ಬರು ಮಕ್ಕಳು - ಪ್ರಶಾ ಮತ್ತು ಪ್ರತಿಭಾ ಗೋಣಿಕೋಪ್ಪಲ್‌ನ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳು. ಅವರ ತರಗತಿಗಳು ಈಗ ಅವರ ತಂದೆಯ ಮಹೀಂದ್ರಾ ಜೀಪ್‌ನಲ್ಲಿ ನಡೆಯುತ್ತವೆ.

ಅಂತೆಯೇ, ವಿರಾಜ್‌ಪೇಟೆ ತಾಲ್ಲೂಕು ಚಾರಣದ ಕೇದಮಲ್ಲುರು ಪಂಚಾಯತ್ ಮಿತಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು 4ಜಿ ನೆಟ್‌ವರ್ಕ್ ಹುಡುಕಾಟದಲ್ಲಿ 2 ಕಿಲೋಮೀಟರ್‌ಗೂ ಹೆಚ್ಚು ಕಾಲ ಚಾರಣ ಮಾಡಿದ್ದಾರೆ. ಈ ಮಕ್ಕಳಲ್ಲಿ ಹೆಚ್ಚಿನವರು ಆರ್ಥಿಕವಾಗಿ ಹಿಂದುಳಿದ ಕುಟುಂಬದವರು. ಅಲ್ಲದೆ ಅವರು ತಮ್ಮ ಹೆತ್ತವರ ಉಳಿತಾಯದಿಂದ ಸಂಗ್ರಹಿಸಿದ ಹಣದಲ್ಲಿ ಮೊಬೈಲ್ ಫೋನ್‌ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದಾಗ್ಯೂ, ಈ ಪ್ರದೇಶದಲ್ಲಿನ 4ಜಿ ನೆಟ್‌ವರ್ಕ್ನ ಹುಡುಕಾಟದಲ್ಲಿ ಮಕ್ಕಳು ಮರಗಳು ಮತ್ತು ಬಂಡೆಗಳನ್ನು ಏರುತ್ತಾರೆ. 

'ನಾವು ಡಿಡಿ ಚಾನೆಲ್‌ನಲ್ಲಿ ಆನ್‌ಲೈನ್ ಪಾಠಗಳನ್ನು ನೋಡುತ್ತಿದ್ದೆವು. ಆದರೆ, ಮಳೆಯಿಂದಾಗಿ ವಿದ್ಯುತ್ ಕಡಿತವು ಗ್ರಾಮದಲ್ಲಿ ನಿರಂತರವಾಗಿದೆ. ಈಗ, ರೆಕಾರ್ಡ್ ಮಾಡಿದ ತರಗತಿಗಳನ್ನು ಬ್ರೌಸ್ ಮಾಡಲು ನಾವು 2 ಕಿ.ಮೀ ದೂರ ಹೋಗುತ್ತೇವೆ ಎಂದು ಕೇದಮಲ್ಲುರುವಿನ ಸರ್ಕಾರಿ ಶಾಲಾ ವಿದ್ಯಾರ್ಥಿ ನೀರೇಖಾ ಹಂಚಿಕೊಂಡಿದ್ದಾರೆ. 

ಇದಕ್ಕಿಂತ ಕೆಟ್ಟದ್ದೇನೆಂದರೆ, ಈ ಪ್ರದೇಶಗಳು ವನ್ಯಜೀವಿಗಳ ಓಡಾಟ ಹೆಚ್ಚಾಗಿದೆ. ಮಕ್ಕಳು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಾರೆ. ಈ ಬಗ್ಗೆ ಪ್ರಶ್ನಿಸಿದಾಗ, ಬಿಎಸ್ಎನ್ಎಲ್ ಎಂಜಿನಿಯರ್ ನಾರಾಯಣ್, 'ಹೆಚ್ಚಿನ ಗ್ರಾಮಗಳನ್ನು 2ಜಿ ನೆಟ್‌ವರ್ಕ್ ಟವರ್‌ಗಳೊಂದಿಗೆ ಸ್ಥಾಪಿಸಲಾಗಿದೆ. ಹಣವನ್ನು ಮಂಜೂರು ಮಾಡಿದರೆ, ನಾವು ಅವೆಲ್ಲವನ್ನೂ 4ಜಿ ಟವರ್‌ಗಳಿಗೆ ಅಪ್‌ಗ್ರೇಡ್ ಮಾಡಬಹುದು ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com