ಆಗಸ್ಟ್ 10ರ ವೇಳೆಗೆ ಭಾರತದಲ್ಲಿ 12.6 ಲಕ್ಷ ಕೋವಿಡ್ ಕೇಸ್ ಸೇರ್ಪಡೆ; ಕರ್ನಾಟಕದಲ್ಲಿ ಸುಮಾರು 60 ಸಾವಿರ ಪ್ರಕರಣ ಸೇರ್ಪಡೆ!

ಆಗಸ್ಟ್ 10 ರ ವೇಳೆಗೆ 1.26 ಮಿಲಿಯನ್ (12.6 ಲಕ್ಷ) ಹೊಸ ಕೇಸ್ ಒಳಗೊಂಡಂತೆ ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 32.1 ಮಿಲಿಯನ್ (321 ಲಕ್ಷ) ತಲುಪುವ ನಿರೀಕ್ಷೆಯಿದೆ ಎಂದು ಜೀವನ್ ರಕ್ಷಾ ಅಂಕಿ ಅಂಶಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಗಸ್ಟ್ 10 ರ ವೇಳೆಗೆ 1.26 ಮಿಲಿಯನ್ (12.6 ಲಕ್ಷ) ಹೊಸ ಕೇಸ್  ಒಳಗೊಂಡಂತೆ ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 32.1 ಮಿಲಿಯನ್ (321 ಲಕ್ಷ) ತಲುಪುವ ನಿರೀಕ್ಷೆಯಿದೆ ಎಂದು ಜೀವನ್ ರಕ್ಷಾ ಅಂಕಿ ಅಂಶಗಳು ತಿಳಿಸಿವೆ.

ದೇಶದಲ್ಲಿ ಸಾವಿನ ಸಂಖ್ಯೆ 4.40 ಲಕ್ಷ ಮುಟ್ಟುವ ಸಾಧ್ಯತೆ ಇದ್ದು. ಕರ್ನಾಟಕದಲ್ಲಿ ಕೋವಿಡ್ ಸಂಖ್ಯೆ 29.35 ಲಕ್ಷ ಪ್ರಕರಣಗಳಾಗುವ ಸಾಧ್ಯತೆಯಿದೆ, ಆಗಸ್ಟ್ 10 ರೊಳಗೆ ರಾಜ್ಯದಲ್ಲಿ 37,275 ಸಾವಿನ ಸಂಖ್ಯೆ ಮುಟ್ಟಲಿದೆ.

ಭಾರತ ಮತ್ತು ಕರ್ನಾಟಕವು ಈವರೆಗೆ ಮಾಡಿದ ಉತ್ತಮ ಕಾರ್ಯಗಳು, ವಿಶೇಷವಾಗಿ ಸುಧಾರಿತ ಕಂಟೈನ್ ಮೆಂಟ್ ನಿರ್ವಹಣೆ ಮುಂದುವರಿಯಬೇಕಿದೆ. ಪ್ರತಿ ಜಿಲ್ಲಾಡಳಿತವು ಕೋವಿಡ್‌ನ 7 ದಿನಗಳ ಮೂವಿಂಗ್ ಗ್ರೋತ್ ರೇಟ್ (ಎಂಜಿಆರ್) ಶೇಕಡಾ 2 ಕ್ಕಿಂತ ಕಡಿಮೆಯಿರುವುದನ್ನು ಖಾತ್ರಿಪಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಜೀವನ್ ರಕ್ಷಾ ಸಂಚಾಲಕ ಮೈಸೂರು ಸಂಜೀವ್ ತಿಳಿಸಿದ್ದಾರೆ.

ಕಳೆದ ವಾರ, ಕರ್ನಾಟಕದ 14 ಜಿಲ್ಲೆಗಳಲ್ಲಿ 7 ದಿನಗಳ ಎಂಜಿಆರ್ ಶೇಕಡಾ 1 ಕ್ಕಿಂತ ಕಡಿಮೆಯಿದ್ದರೆ, 15 ಜಿಲ್ಲೆಗಳಲ್ಲಿ ಎಂಜಿಆರ್ 1-2% ಇತ್ತು. ಕೊಡಗು ಜಿಲ್ಲೆಯಲ್ಲಿ ಮಾತ್ರ ಶೇ.3 ರಷ್ಟು ಕಡಿಮೆ ಎಂಜಿಆರ್ ಹೊಂದಿತ್ತು. ಇದು ಮುಂಬರುವ ವಾರದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ. 

ರಾಜ್ಯದ ಶೇ.80 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಪಡೆಯುವವರೆಗೆ ಎಲ್ಲಾ ಜಿಲ್ಲೆಗಳು 7 ದಿನಗಳ ಎಂಜಿಆರ್ ಅನ್ನು ಶೇ,2 ಕ್ಕಿಂತ ಕಡಿಮೆ ಇದ್ದರೆ, ಕರ್ನಾಟಕವು ನಿಸ್ಸಂದೇಹವಾಗಿ ಮೂರನೇ ಅಲೆ ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೂಕ್ಷ್ಮ ಕಂಟೈನ್‌ಮೆಂಟ್ ವಲಯಗಳು ಮತ್ತು ಹಳ್ಳಿಗಳಲ್ಲಿ , ಆರ್‌ಟಿ-ಪಿಸಿಆರ್ ಪರೀಕ್ಷೆ ಲಭ್ಯವಾಗುವಂತೆ ಮಾಡಬೇಕು. ರಾಪಿಡ್ ಆಂಟಿಜೆನ್ ಪರೀಕ್ಷೆಗಳ ಬದಲು ಸರಿಯಾದ ರೀತಿಯ ಜನರನ್ನು ಪರೀಕ್ಷಿಸುವುದನ್ನು ಅನುಸರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. 

ಪ್ರಸ್ತುತ ಪರೀಕ್ಷಾ ಅಂಕಿಅಂಶಗಳನ್ನು ಕಾಪಾಡಿಕೊಳ್ಳಬೇಕು ಆದರೆ ಯಾರನ್ನು ಪರೀಕ್ಷಿಸಲಾಗುತ್ತಿದೆ ಮತ್ತು ಇಷ್ಟು ಜನರನ್ನು ಏಕೆ ಪರೀಕ್ಷಿಸಲಾಗುತ್ತಿದೆ ಎಂಬುದರ ಹಿಂದೆ ಒಂದು ತಾರ್ಕಿಕತೆಯ ಅಗತ್ಯವಿದೆ ಎಂದು ಮೈಸೂರು ಸಂಜೀವ್ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com