ಕೋವಿಡ್ ಆತಂಕ: ಕೇರಳ-ಕರ್ನಾಟಕ ಗಡಿಗಳಲ್ಲಿ ತಪಾಸಣೆ ಮತ್ತಷ್ಟು ಬಿಗಿ

ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಝಿಕಾ ಸೋಂಕಿನ ಭೀತಿ ಕಾರಣಕ್ಕೆ ಗೃಹ ಸಚಿವರ ನಿರ್ದೇಶನದಂತೆ ಅಂತರ್ ರಾಜ್ಯ 28 ಗಡಿ ರಸ್ತೆಗಳಲ್ಲಿ ಪೋಸ್ಟ್ ರಚಿಸಲಾಗಿದ್ದು, ಗಡಿ ಭಾಗಗಳಲ್ಲಿ ಪ್ರಯಾಣಿಸುವವರ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. 
ಮಂಗಳೂರಿನಲ್ಲಿ ವಾಹನ ಪರಿಶೀಲನೆ ನಡೆಸುತ್ತಿರುವ ಪೊಲೀಸರು
ಮಂಗಳೂರಿನಲ್ಲಿ ವಾಹನ ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಮಂಗಳೂರು: ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಝಿಕಾ ಸೋಂಕಿನ ಭೀತಿ ಕಾರಣಕ್ಕೆ ಗೃಹ ಸಚಿವರ ನಿರ್ದೇಶನದಂತೆ ಅಂತರ್ ರಾಜ್ಯ 28 ಗಡಿ ರಸ್ತೆಗಳಲ್ಲಿ ಪೋಸ್ಟ್ ರಚಿಸಲಾಗಿದ್ದು, ಗಡಿ ಭಾಗಗಳಲ್ಲಿ ಪ್ರಯಾಣಿಸುವವರ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. 

ಈ ಗಡಿ ಭಾಗಗಳಲ್ಲಿ ಸಂಚರಿಸಬೇಕಾದರೆ ಇನ್ನು ಮುಂದೆ ಕೋವಿಡ್ ಲಸಿಕೆ ಪಡೆದ ದಾಖಲೆ ಅಥವಾ ಆರ್'ಟಿಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ ಹಾಜರುಪಡಿಸಬೇಕು. ಇಲ್ಲವೇ ಸ್ವಾಬ್ ಟೆಸ್ಟ್ ಮಾಡಿರುವುದು ಕಡ್ಡಾಯವಾಗಿದೆ.

ವಾರಗಳ ಹಿಂದಷ್ಟೇ ತಲಪ್ಪಾಡಿ ಸೇರಿದಂತೆ ಇತರೆ ಪ್ರಮುಖ ಪ್ರದೇಶಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿತ್ತು. ಗಡಿ ಪ್ರದೇಶದ ಮೂಲಕ ರಾಜ್ಯ ಪ್ರವೇಶಿಸುವ ಜನರು ಆರ್'ಟಿ-ಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದನ್ನು ಈ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದರು. 

ಇದೀಗ ರಾಜ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದ ಹಿನ್ನೆಲೆಯಲ್ಲಿ ಅಂತರ್ ರಾಜ್ಯ 28 ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ತಪಾಸಣೆ ನಡೆಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com