ಗೋಹತ್ಯೆ ನಿಷೇಧ ಮಸೂದೆ ಎಫೆಕ್ಟ್: ಬನ್ನೇರುಘಟ್ಟ ಮೃಗಾಲಯದ ಪ್ರಾಣಿಗಳಿಗೆ ಮಾಂಸಾಹಾರ ಪೂರೈಸಲು ಹೆಣಗಾಟ!

ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ಬಂದು ಸುಮಾರು 5 ತಿಂಗಳುಗಳಾಗಿವೆ. ಇದರ ಪರಿಣಾಮವಾಗಿ ಬನ್ನೇರುಘಟ್ಟ ಮೃಗಾಲಯ ಸಿಬ್ಬಂದಿ ಮಾಂಸಾಹಾರ ಪ್ರಾಣಿಗಳಿಗೆ ಆಹಾರ ಒದಗಿಸಲು ಹರ ಸಾಹಸ ಪಡುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ಬಂದು ಸುಮಾರು 5 ತಿಂಗಳುಗಳಾಗಿವೆ. ಇದರ ಪರಿಣಾಮವಾಗಿ ಬನ್ನೇರುಘಟ್ಟ ಮೃಗಾಲಯ ಸಿಬ್ಬಂದಿ ಮಾಂಸಾಹಾರ ಪ್ರಾಣಿಗಳಿಗೆ ಆಹಾರ ಒದಗಿಸಲು ಹರ ಸಾಹಸ ಪಡುತ್ತಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನ ಸಿಂಹ, ಚಿರತೆ, ಮತ್ತು ಹುಲಿಗಳಿಗೆ ಸುಮಾರು 1 ವರ್ಷದಿಂದ ಕೋಳಿ ಮಾಂಸ ನೀಡುತ್ತಿದ್ದಾರೆ, ಕಾರಣ ಅವರು ಗೋಮಾಂಸ ಪಡೆಯಲು ಹೆಣಗಾಡುತ್ತಿದ್ದಾರೆ ಮತ್ತು ಅದನ್ನು ಪೂರೈಸುವ ಗುತ್ತಿಗೆದಾರರು ಹೆಚ್ಚಿನ ಬೆಲೆಯನ್ನು ನಿಗದಿ ಮಾಡುತ್ತಿದ್ದಾರೆ.

ನಾವು ಗೋಮಾಂಸವನ್ನು ಸುಲಭವಾಗಿ ಪಡೆಯಲು ಮಸೂದೆಯಲ್ಲಿ ತಿದ್ದುಪಡಿಗಳನ್ನು ಪಡೆಯಲು ಇನ್ನೂ ಹೋರಾಟ ನಡೆಸುತ್ತಿದ್ದೇವೆ. ಗೋಮಾಂಸ ಸಂಗ್ರಹಿಸಲು ನಾವು ಟೆಂಡರ್‌ಗಳಿಗೆ ಕರೆ ನೀಡಿದ್ದೆವು, ಆದರೆ ಗುತ್ತಿಗೆದಾರ ಪ್ರತಿ ಕೆ.ಜಿ.ಗೆ 225 ರೂ. ಹೇಳುತ್ತಿದ್ದಾರೆ. ಆದರೆ ಈ ಮೊದಲು ಅದು 175 ರೂ ಗೆ ದೊರೆಯುತ್ತಿತ್ತು.

ನಮಗೆ ದಿನಕ್ಕೆ ಸುಮಾರು 500-600 ಕೆಜಿ ಗೋಮಾಂಸ ಬೇಕು. ಸದ್ಯ ಈ ಮಾಂಸಾಹಾರಿಗಳಿಗೆ ಕೋಳಿ ಮಾಂಸ ನೀಡುತ್ತಿದ್ದೇವೆ,ದು ಹೆಚ್ಚು ಕೊಬ್ಬಿನಂಶದ್ದಾಗಿರುವುದರಿಂದ, ನಾವು ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ನೀಡುತ್ತಿದ್ದೇವೆ ಎಂದು ಬಿಬಿಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪಶುವೈದ್ಯಕೀಯ ತಂಡವು ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತಿದೆ ಮತ್ತು ಈ ಬದಲಾವಣೆಯು ಅವುಗಳ ಮೇಲೆ ಏನಾದರೂ ಪರಿಣಾಮ ಬೀರುತ್ತದೆಯೇ ಎಂದು ನೋಡಲು ಪ್ರಾಣಿಗಳ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಆದೇಶದಿಂದಾಗಿ, ಬೆಲೆಗಳು ತುಂಬಾ ಹೆಚ್ಚಾಗಿದೆ. ನಾವು ಮೊದಲೇ ಟೆಂಡರ್‌ಗಳಿಗೆ ಕರೆ ಮಾಡಿದ್ದೆವು, ಆದರೆ ಉಲ್ಲೇಖಿಸಿದ ಬೆಲೆಗಳು ಹೆಚ್ಚಿರುವುದರಿಂದ ಅವುಗಳನ್ನು ಹಿಂಪಡೆಯಬೇಕಾಯಿತು. ನಂತರ, ಮರು-ಟೆಂಡರ್ ಕರೆದೆವು, ಅದನ್ನು ಪಡೆದ ವ್ಯಕ್ತಿ, ಬಿಲ್ ಪಾಸಾದ ನಂತರ ಹೊರಟುಹೋದರು. ನಾವು ಮತ್ತೆ ಟೆಂಡರ್‌ಗಳಿಗೆ ಕರೆ ಮಾಡಿದ್ದೇವೆ ಆದರೆ ಪ್ರತಿಕ್ರಿಯೆ ತುಂಬಾ ನೀರಸವಾಗಿದೆ ಎಂದು ತಿಳಿಸಿದ್ದಾರೆ.

ಮಾಂಸಾಹಾರಿಗಳಿಗೆ ಎಮ್ಮೆ ಮಾಂಸವನ್ನು ಪಡೆಯಲು ನಾವು ಆಶಿಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು. ಈ ಬಗ್ಗೆ ಕೂಡಲೇ ಪರಿಶೀಲನೆ ನಡೆಸುತ್ತೇವೆ ಎಂದು ಪಶುಸಂಗೋಪನಾ ವಿಭಾಗದ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com