ಅನ್'ಲಾಕ್ ಘೋಷಣೆಯಾದರೂ ಕೊಡಗು ಪ್ರವಾಸಿ ತಾಣಗಳು ಇನ್ನೂ ಕ್ಲೋಸ್: ಪ್ರವಾಸಿಗರಿಗೆ ನಿರಾಸೆ

ಕೊಡಗು ಜಿಲ್ಲೆಯಲ್ಲಿ ಅನ್'ಲಾಕ್ ಘೋಷಣೆಯಾಗಿ ಹಲವು ದಿನಗಳು ಕಳೆದರೂ ಪ್ರವಾಸಿ ತಾಣಗಳು ಮಾತ್ರ ಬಂದ್ ಆಗಿರುವುದು ಪ್ರವಾಸಿಗರಲ್ಲಿ ನಿರಾಸೆಯನ್ನುಂಟು ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅನ್'ಲಾಕ್ ಘೋಷಣೆಯಾಗಿ ಹಲವು ದಿನಗಳು ಕಳೆದರೂ ಪ್ರವಾಸಿ ತಾಣಗಳು ಮಾತ್ರ ಬಂದ್ ಆಗಿರುವುದು ಪ್ರವಾಸಿಗರಲ್ಲಿ ನಿರಾಸೆಯನ್ನುಂಟು ಮಾಡಿದೆ. 

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ವಹಣೆ ಮಾಡುತ್ತಿರುವ ಪ್ರವಾಸಿ ತಾಣಗಳು ಮಂಗಳವಾರದಿಂದ ಆರಂಭವಾಗಿದ್ದರೆ, ಅರಣ್ಯ ಇಲಾಖೆ ನಿರ್ವಹಣೆ ಮಾಡುತ್ತಿರುವ ಪ್ರವಾಸಿ ತಾಣಗಳು ಇನ್ನೂ ಕೆಲ ದಿನಗಳ ಕಾಲ ಬಂದ್ ಆಗಿರಲಿವೆ ಎಂದು ಹೇಳಲಾಗುತ್ತಿದೆ.

ಜನಪ್ರಿಯ ಪ್ರವಾಸಿ ತಾಣವಾಗಿರುವ ದುಬಾರೆ ಎಲಿಫೆಂಟ್ ಕ್ಯಾಂಪ್ (ಆನೆಗಳ ಶಿಬಿರ), ಆನೆಗಳ ಸುರಕ್ಷತೆಗಾಗಿ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಇನ್ನೂ ಕೆಲ ದಿನಗಳ ಕಾಲ ಶಿಬಿರವನ್ನು ತೆರೆಯದಿರಲು ನಿರ್ಧರಿಸಿದೆ. 

ಇನ್ನು ಕುಶಾಲನಗರದಲ್ಲಿರುವ ನಿಸರ್ಗಧಾಮ ಕೂಡ ಪುನರಾರಂಭ ಕುರಿತು ಮುಂದಿನ ವಾರ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. 

ಮತ್ತೊಂದು ಪ್ರವಾಸಿ ತಾಣ ಹಾರಂಗಿ ಜಲಾಶಯ ಕೂಡ ಬಂದ್ ಆಗಿದ್ದು, ಪುನರಾರಂಭ ಕುರಿತು ರಾಜ್ಯ ಸಮಿತಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಈ ಎಲ್ಲಾ ಪ್ರವಾಸಿಗಳಲ್ಲೂ ಸ್ವಚ್ಛತಾ ಕಾರ್ಯಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com