ರಾಜ್ಯದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ನಿಧಾನಗತಿ ಇಳಿಕೆ ಒಳ್ಳೆಯ ಲಕ್ಷಣ ಅಲ್ಲ!

ರಾಜ್ಯದಲ್ಲಿ ದೈನಂದಿನ ಕೋವಿಡ್-19 ಪ್ರಕರಣಗಳ ಸಂಖ್ಯೆ ಕುಸಿಯುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆಯಾಗುತ್ತಿದೆ ಆದರೆ ಸಕ್ರಿಯ ಪ್ರಕರಣಗಳ ಇಳಿಕೆ ಪ್ರಮಾಣ ನಿಧಾನಗತಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕೋವಿಡ್ ಸೋಂಕು ಪತ್ತೆ ಪರೀಕ್ಷೆ (ಸಂಗ್ರಹ ಚಿತ್ರ)
ಕೋವಿಡ್ ಸೋಂಕು ಪತ್ತೆ ಪರೀಕ್ಷೆ (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯದಲ್ಲಿ ದೈನಂದಿನ ಕೋವಿಡ್-19 ಪ್ರಕರಣಗಳ ಸಂಖ್ಯೆ ಕುಸಿಯುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆಯಾಗುತ್ತಿದೆ ಆದರೆ ಸಕ್ರಿಯ ಪ್ರಕರಣಗಳ ಇಳಿಕೆ ಪ್ರಮಾಣ ನಿಧಾನಗತಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಭಾರತದಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಾಗಿರುವ ಮೂರನೇ ರಾಜ್ಯ ಕರ್ನಾಟಕವಾಗಿದ್ದು, ಜೂನ್ ಮತ್ತೆ ಜುಲೈ ಗಳ ಈ ಹಿಂದಿನ ವಾರಗಳಲ್ಲಿ ವೇಗಗತಿಯಲ್ಲಿದ್ದ ಸಕ್ರಿಯ ಪ್ರಕರಣಗಳ ಕುಸಿತ ಈಗ ನಿಧಾನಗತಿಗೆ ತಿರುಗಿದೆ.

ಜೂ.29 ರಂದು ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.11.88 ರಷ್ಟಿದ್ದು, 97,592 ರಿಂದ 85,997 ಕ್ಕೆ ಇಳಿಕೆಯಾಗಿತ್ತು. ಜೂ.30 ಕ್ಕೆ ಸಕ್ರಿಯ ಪ್ರಕರಣಗಳು 76,054 ಕ್ಕೆ ಇಳಿಕೆಯಾಗುವ ಮೂಲಕ ಕುಸಿತ ಪ್ರಮಾಣ 11.03 ರಷ್ಟಿತ್ತು.

ಜು.1 ರಂದು 65,312 ಪ್ರಕರಣಗಳಿಗೆ ಇಳಿಕೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಇಳಿಕೆ ಶೇ.14.63 ರಷ್ಟು ದಾಖಲಾಗಿತ್ತು. ಜುಲೈ 2 ರಂದು ಸಕ್ರಿಯ ಪ್ರಕರಣಗಳು ದಾಖಲೆಯ ಶೇ.17.51ರಷ್ಟು ಇಳಿಕೆಯಾಗಿತ್ತು. ಆದರೆ ಜು.8 ರ ವೇಳೆಗೆ 38,729 ಸಕ್ರಿಯ ಪ್ರಕರಣಗಳೊಂದಿಗೆ ಇಳಿಕೆ ಪ್ರಮಾಣ ಶೇ.2.2 ರಷ್ಟಕ್ಕೆ ಕುಸಿಯಿತು. ಜು.12 ರಂದು ಸಕ್ರಿಯ ಪ್ರಕರಣಗಳ ಇಳಿಕೆ ಪ್ರಮಾಣ ಶೇ.1.08 ಕ್ಕೆ ಕುಸಿತ ದಾಖಲಿಸಿತ್ತು. ಜುಲೈ 14 ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ 33,462 ಇದ್ದು ಇಳಿಕೆ ಪ್ರಮಾಣ ಶೇ.1.72 ಇತ್ತು.

ದಿನನಿತ್ಯ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಕುಸಿತ ಕಾಣುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಇಳಿಕೆ ಸಂಖ್ಯೆಯೂ ನಿಧಾನಗತಿಯಲ್ಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಜು.2 ರ ಆಸುಪಾಸಿನಲ್ಲಿ ದಿನನಿತ್ಯ 14,337 ಇದ್ದ ಡಿಸ್ಚಾರ್ಜ್ ಆಗುತ್ತಿದ್ದವರ ಸಂಖ್ಯೆ ಈಗ 3,000 ಕ್ಕೆ ಇಳಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com