ನಗರದಲ್ಲಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 8 ಕೋಟಿ ರೂ. ಮೌಲ್ಯದ ಕಾರು, ಬೈಕ್'ಗಳು ವಶಕ್ಕೆ

ನಗರದಲ್ಲಿ ಹೆಚ್ಚಾಗಿದ್ದ ಕಾರು ವಂಚನೆ ಹಾಗೂ ಕಳವು ಪ್ರಕರಣಗಳನ್ನು ಮಟ್ಟಹಾಕಲು ವಿಶೇಷ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಮತ್ತು ಪೂರ್ವ ವಿಭಾಗದ ಪೊಲೀಸರು ಹಲವರನ್ನು ಬಂಧನಕ್ಕೊಳಪಡಿಸಿ ಅಂದಾಜು ರೂ.8 ಕೋಟಿ ಮೌಲ್ಯದ ಕಾರು ಹಾಗೂ ಬೈಕ್'ಗಳನ್ನು ವಶಪಡಿಸಿಕೊಂಡಿದ್ದಾರೆ.
ವಶಕ್ಕೆ ಪಡೆಯಲಾಗಿರುವ ಬೈಕ್ ಗಳ ಪರಿಶೀಲಿಸುತ್ತಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
ವಶಕ್ಕೆ ಪಡೆಯಲಾಗಿರುವ ಬೈಕ್ ಗಳ ಪರಿಶೀಲಿಸುತ್ತಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್

ಬೆಂಗಳೂರು: ನಗರದಲ್ಲಿ ಹೆಚ್ಚಾಗಿದ್ದ ಕಾರು ವಂಚನೆ ಹಾಗೂ ಕಳವು ಪ್ರಕರಣಗಳನ್ನು ಮಟ್ಟಹಾಕಲು ವಿಶೇಷ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಮತ್ತು ಪೂರ್ವ ವಿಭಾಗದ ಪೊಲೀಸರು ಹಲವರನ್ನು ಬಂಧನಕ್ಕೊಳಪಡಿಸಿ ಅಂದಾಜು ರೂ.8 ಕೋಟಿ ಮೌಲ್ಯದ ಕಾರು ಹಾಗೂ ಬೈಕ್'ಗಳನ್ನು ವಶಪಡಿಸಿಕೊಂಡಿದ್ದಾರೆ.

ಐಷಾರಾಮಿ ಕಾರುಗಳ ಮಾಲೀಕರನ್ನು ನಂಬಿಸಿ ಕಾರುಗಳನ್ನು ಪಡೆದು ಬೇರೆಯವರಿಗೆ ಒತ್ತೆ ಇಡುತ್ತಿದ್ದದ್ದಲ್ಲದೆ ಮಾರಾಟ ಮಾಡಿ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಮೂರು ಕೋಟಿ ಮೌಲ್ಯದ 19 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ನಸೀಬ್, ಮಹಮ್ಮದ್ ಆಜಂ ಹಾಗೂ ಮಹೀರ್ ಖಾನ್ ಎಂದು ಗುರ್ತಿಸಲಾಗಿದೆ. ಆರೋಪಿಗಳು ಚಿತ್ರದುರ್ಗ, ದಾವಣಗೆರೆ, ಭಟ್ಕಳ, ಮೈಸೂರು ಹಾಗೂ ಇನ್ನಿತರ ಕಡೆಗಳಲ್ಲಿ ಮಾರಾಟ ಮಾಡಿದ್ದ ಐಷರಾಮಿ ಕಾರುಗಳಾದ ಕ್ಯಾರವೆಲ್, ಫಾರ್ಚೂನರ್, ಕಿಯಾ ಸೆಲ್ಟೊಸ್, ಎಂಡೀವರ್, ಫೋಕ್ಸ್ ವ್ಯಾಗನ್, ಸ್ಕೋಡ ರ್ಯಾಪಿಡ್, ಎಕ್ಸ್‍ಯುವಿ-100 ಕಾರುಗಳು ಸೇರಿದಂತೆ ರೂ.3 ಕೋಟಿ ಮೌಲ್ಯದ ಒಟ್ಟು 19 ಐಷಾರಾಮಿ ಕಾರುಗಳನ್ನು ಹಾಗೂ ರೂ.2.25 ಮೌಲ್ಯದ 58 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಕಾರುಗಳನ್ನು ಮಾರಾಟ ಮಾಡುವುದಾಗಿ ಹೇಳಿ ಮಾಲೀಕರಿಂದ ಕಾರು ಪಡೆಯುತ್ತಿದ್ದ ಆರೋಪಿಗಳು ನಂತರ ಮಾಲೀಕರ ಗಮನಕ್ಕೆ ತರದೆಯೇ ಅವುಗಳನ್ನು ಮಾರಾಟ ಅಥವಾ ಅಡವಾಗಿ ಇಡುತ್ತಿದ್ದರು. ಬಳಿಕ ಕಾರುಗಳನ್ನು ಮರಳಿ ಕೇಳುತ್ತಿದ್ದ ಮಾಲೀಕರ ಮೇಲೆ ಆರೋಪಿಗಳು ಹಲ್ಲೆ ನಡೆಸುತ್ತಿದ್ದರು. ಈ ಕುರಿತು ಜ್ಞಾನಭಾರತಿ, ವಯ್ಯಾಲಿಕಾವಲ್ ಹಾಗೂ ಪುಲಕೇಶಿ ನಗರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಹೀಗಾಗಿ ಆರೋಪಿಗಳ ಬಂಧನಕ್ಕೆ ತಂಡವನ್ನು ರಚನೆ ಮಾಡಲಾಗಿತ್ತು. ಇದರಂತೆ ಮೈಸೂರು, ಭಟ್ಕಳ, ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಆರೋಪಿಗಳು ಮಾರಾಟ ಮಾಡಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಪ್ರಕರಣ ಸಂಬಂಧ ಪೂರ್ವ ವಿಭಾಗ ಗೋವಿಂದಾಪುರ ಪೊಲೀಸರು ಶಬ್ಬೀರ್ ಖಾನ್ ನನ್ನ ಬಂಧನಕ್ಕೊಳಪಡಿಸಿದ್ದು, ಈತನಿಂಗ ರೂ.1.8 ಕೋಟಿ ಮೌಲ್ಯ 20 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. 

ಕೆಜಿ ಹಳ್ಳಿ ಠಾಣೆ ವ್ಯಾಪ್ತಿಯ ಎಕ್ಸಿಸ್ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬಲು ಬಂದಿದ್ದ ಆರೋಪಿಗಳು 75 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದರು. ಈ ಆರೋಪಿಗಳನ್ನು ಪತ್ತೆ ಮಾಡಿ ಹಣವನ್ನು ವಶಪಡಿಸಿಕೊಂಡಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ವಾಹನ ಪತ್ತೆಯಾಗಿರಲಿಲ್ಲ. ಈ ನಿಟ್ಟಿನಲ್ಲಿ ವಾಹನವನ್ನು ಪತ್ತೆಮಾಡುವ ಸಲುವಾಗಿ ಗೋವಿಂದಪುರ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿ ತಂಡ ತನಿಖೆ ಕೈಗೊಂಡಿತ್ತು.

ಆ ಸಂದರ್ಭದಲ್ಲಿ ಟಯೋಟಾ ಇನೋವಾ ಕಾರು ಚಾಲಕ ಶಬ್ಬೀರ್‍ ಖಾನ್ ಎಂಬಾತನನ್ನು ವಿಚಾರಣೆ ಮಾಡಿದಾಗ ಅಸಮರ್ಪಕ ಮಾಹಿತಿ ನೀಡಿದ್ದ ಕಾರಣ ವಿಚಾರಣೆ ನಡೆಸಿದಾಗ ತನ್ನ ಸ್ನೇಹಿತರಾದ ಶರಣ್ ಮತ್ತು ಶಕ್ತಿವೇಲು ಎಂಬುವವರೊಂದಿಗೆ ಸೇರಿಕೊಂಡು ಕಾರುಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿದ್ದನು. ಈ ಪ್ರಕರಣದಲ್ಲಿ ಶಬ್ಬೀರ್‍ ಖಾನ್‍ನನ್ನು ಬಂಧಿಸಿದ್ದು, ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಒಟ್ಟಾರೆ 5 ಇನೋವಾ, 2 ಟೆಂಫೋಟ್ರಾವೆಲರ್, ಮಹೀಂದ್ರ ಎಕ್ಸ್‍ಯುವಿ ವಾಹನ, ಮಹೀಂದ್ರಾ ವೆರಿಟ್ಟೋ, ಟಯೋಟಾ ಟಯೋಸ್ 5, ಶಿಫ್ಟ್ ಡಿಸೈರ್ 3, ಹೋಂಡಾ ಅಸೆಟ್ 1, ಟಾಟಾ ವಿಸ್ತಾ 1, ಮಾರುತಿ ಜೆನ್ 1 ಸೇರಿ ಒಟ್ಟು 1 ಕೋಟಿ 80 ಲಕ್ಷ ಮೌಲ್ಯದ 20 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಾಣಸವಾಡಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಐದು ಮಂದಿಯನ್ನು ಬಂಧಿಸಿ 22 ಲಕ್ಷ ಬೆಲೆಯ 28 ವಿವಿಧ ಮಾದರಿಯ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com