ದಲಿತ ಉದ್ಯಮಿಗಳ ಪ್ರೋತ್ಸಾಹಕ್ಕಾಗಿ ಯಾವ ಯೋಜನೆ ರೂಪಿಸಿದ್ದೀರಾ? ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಪ್ರಶ್ನೆ

ದಲಿತ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಯಾವ್ಯಾವ ಯೋಜನೆ ರೂಪಿಸಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ

ಬೆಂಗಳೂರು: ದಲಿತ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಯಾವ್ಯಾವ ಯೋಜನೆ ರೂಪಿಸಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ನಾರಾಯಣಸ್ವಾಮಿ ಅವರು ಸಂದರ್ಶನದಲ್ಲಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ,ಎಸ್‌ಸಿ ಉದ್ಯಮಿಗಳನ್ನು ಸರ್ಕಾರ ಪ್ರೋತ್ಸಾಹಿಸುತ್ತದೆ ಸಚಿವರು ಹೇಳುತ್ತಾರೆ, ಆದರೆ ರಾಜ್ಯ ಸರ್ಕಾರವು ಭಾರತದ ಅತಿದೊಡ್ಡ  ಎಸ್‌ಸಿ / ಎಸ್‌ಟಿ ಉದ್ಯಮಶೀಲತೆ ಕಾರ್ಯಕ್ರಮವಾದ 'ಸಮೃದ್ಧಿ' ಯೋಜನೆಯನ್ನು ಬಹುತೇಕ ನಿಲ್ಲಿಸಿದೆ ಎಂದು ಹೇಳಿದ್ದಾರೆ.

ಸಮೃದ್ಧಿ ಕಾರ್ಯಕ್ರಮ ಪ್ರಾರಂಭವಾದಾಗ 33,675 ಜನರು ಅರ್ಜಿ ಸಲ್ಲಿಸಿದ್ದರು, ಅದರಲ್ಲಿ  2,2140 ಜನರು ಅರ್ಹರು ಎಂದು ಕಂಡುಬಂದಿದೆ ಎಂದು ಖರ್ಗೆ ಹೇಳಿದ್ದಾರೆ, ಎರಡೂವರೆ ವರ್ಷಗಳ ನಂತರ, ಸರ್ಕಾರವು ಅವರಲ್ಲಿ 5,000 ಜನರಿಗೆ ಸಹ ಅನುದಾನ ನೀಡಿಲ್ಲ ಎಂದು ಆರೋಪಿಸಿದ್ದಾರೆ.

2018-19ರಲ್ಲಿ 225 ಕೋಟಿ ರೂ., 2019-20ರಲ್ಲಿ 30 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು, ಆದರೆ 2020-21 ರಲ್ಲಿ ಯಾವುದೇ ಹಂಚಿಕೆ ಮಾಡಲಾಗಿಲ್ಲ. ಈ ಕಾರ್ಯಕ್ರಮದಡಿ ಪ್ರತಿ ಫಲಾನುಭವಿಗೆ ವ್ಯವಹಾರ ಪ್ರಾರಂಭಿಸಲು 10 ಲಕ್ಷ ರೂ ನೀಡಲಾಗುತ್ತದೆ.

ಹಣವನ್ನು ವಿನಿಯೋಗಿಸದೆ ಉದ್ಯಮಶೀಲತೆಯ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಸರ್ಕಾರವು ಉದ್ಯೋಗಗಳನ್ನು ಸೃಷ್ಟಿಸಬೇಕು ಅಥವಾ ಉದ್ಯೋಗ ಸೃಷ್ಟಿಸಲು ಬಯಸುವ ಜನರಿಗೆ ಅವಕಾಶಗಳನ್ನು ಸೃಷ್ಟಿಸಬೇಕು. ಉದ್ಯಮಿಗಳನ್ನು ಉದ್ಯೋಗ ಸೃಷ್ಟಿಕರ್ತರಾಗಿ ಮಾಡಬೇಕಾಗಿದೆ, ಅವರಿಗೆ ಸಾಲ ನೀಡುವ ಬದಲು ಅವರಿಗೆ ಅನುದಾನ ನೀಡಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಈ ಯೋಜನೆಯಡಿ ಆಯ್ಕೆಯಾದ 630 ಅರ್ಜಿದಾರರಿಗೆ ಅನುದಾನವನ್ನು ನೀಡುವ ಗುರಿ ಹೊಂದಿದ್ದು, ಈಗಾಗಲೇ 360 ಮಂದಿಗೆ ಧನಸಹಾಯ ನೀಡಲಾಗಿದೆ. ಇನ್ನೂ 108 ಮಂದಿ ತಮ್ಮ ವ್ಯವಹಾರಗಳನ್ನು ಆರಂಭಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com