ದ್ವಿತೀಯ ಪಿಯುಸಿ ಶೈಕ್ಷಣಿಕ ವರ್ಷ ಇಂದು ಆರಂಭ: ಆನ್ ಲೈನ್ ಮೂಲಕ ವಿದ್ಯಾರ್ಥಿಗಳಿಗೆ ತರಗತಿ!
ದ್ವಿತೀಯ ಪಿಯುಸಿ ಶೈಕ್ಷಣಿಕ ವರ್ಷ ಗುರುವಾರದಿಂದ ಆರಂಭವಾಗಲಿದೆ. ಭೌತಿಕ ತರಗತಿಗಳನ್ನು ಆರಂಭಿಸುವ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಳ್ಳದಿದ್ದರೂ ಆನ್ ಲೈನ್ ಮೂಲಕ ಸಂಪೂರ್ಣವಾಗಿ ಶಿಕ್ಷಣ ಆರಂಭಿಸುವಂತೆ ರಾಜ್ಯ ಸರ್ಕಾರ ಇಲಾಖೆಗೆ ಸೂಚಿಸಿದೆ.
Published: 15th July 2021 07:52 AM | Last Updated: 15th July 2021 01:31 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ದ್ವಿತೀಯ ಪಿಯುಸಿ ಶೈಕ್ಷಣಿಕ ವರ್ಷ ಗುರುವಾರದಿಂದ ಆರಂಭವಾಗಲಿದೆ. ಭೌತಿಕ ತರಗತಿಗಳನ್ನು ಆರಂಭಿಸುವ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಳ್ಳದಿದ್ದರೂ ಆನ್ ಲೈನ್ ಮೂಲಕ ಸಂಪೂರ್ಣವಾಗಿ ಶಿಕ್ಷಣ ಆರಂಭಿಸುವಂತೆ ರಾಜ್ಯ ಸರ್ಕಾರ ಇಲಾಖೆಗೆ ಸೂಚಿಸಿದೆ.
ಕಳೆದ ವರ್ಷ, ಪ್ರತಿ ವಿಷಯಗಳ ವಾಟ್ಸಾಪ್ ಗ್ರೂಪ್ ಗಳನ್ನು ರಚಿಸಿ ಉಪನ್ಯಾಸಕರು ಪೂರ್ವ ರೆಕಾರ್ಡ್ ಪಾಠಗಳ ಲಿಂಕ್ ಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸುವಂತೆ ಸೂಚಿಸಲಾಗಿತ್ತು. ಈ ವರ್ಷ ಉಪನ್ಯಾಸಕರು ತರಗತಿಗಳನ್ನು ಎಂಎಸ್ ಟೀಮ್, ಗೂಗಲ್ ಮೀಟ್, ಜೂಮ್ ಅಥವಾ ಜಿಯೊಗಳಲ್ಲಿ ನಡೆಸಲಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ನಿಗದಿತ ಸಮಯವನ್ನು ನೀಡುತ್ತದೆ. ಬೆಳಗ್ಗೆ 10 ಗಂಟೆಗೆ ಆರಂಭವಾಗುವ ತರಗತಿಗಳ ಮೊದಲ ಅವಧಿ 11 ಗಂಟೆಗೆ ಮುಗಿಯಲಿದೆ. ಎರಡನೇ ಪಿರೆಡ್ 11 ಗಂಟೆಯಿಂದ ಮಧ್ಯಾಹ್ನದವರೆಗೆ, ಮೂರನೇ ಪಿರೆಡ್ 12.30ರಿಂದ 1.30ರವರೆಗೆ ನಾಲ್ಕನೇ ಪಿರೆಡ್ 1.30ರಿಂದ 2.30ರವರೆಗೆ ನಡೆಯಲಿದೆ.
ಉಪನ್ಯಾಸಕರು ನಿಗದಿತ ಅವಧಿಯಲ್ಲಿ ತರಗತಿಗಳನ್ನು ನಡೆಸಬೇಕು, ನಂತರ ಪ್ರಾಂಶುಪಾಲರಿಗೆ ಪ್ರತಿದಿನ ವಿದ್ಯಾರ್ಥಿಗಳ ಹಾಜರಾತಿ ಪಟ್ಟಿಯನ್ನು ಕಳುಹಿಸಬೇಕು. ಕಳೆದ ಜುಲೈ 7ರಿಂದ ಉಪನ್ಯಾಸಕರು ಕಾಲೇಜುಗಳಿಗೆ ಹೋಗುತ್ತಿದ್ದು ಆಯಾ ಕಾಲೇಜುಗಳಿಂದ ಆನ್ ಲೈನ್ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ.