ಕೋವಿಡ್ 19 ಮತ್ತು ಸರ್ಕಾರದ ಕಠಿಣ ನಿಯಮಕ್ಕೆ ಯಶವಂತಪುರ ಎಪಿಎಂಸಿಯಲ್ಲಿ 300 ಅಂಗಡಿಗಳು ಕ್ಲೋಸ್!

ಸುಮಾರು ಒಂದು ವರ್ಷದ ಹಿಂದೆ ಆರಂಭವಾದ ಕೋವಿಡ್ ಸಾಂಕ್ರಾಮಿಕದಿಂದಾಗಿ ಬಹುತೇಕ ಎಲ್ಲ ವಲಯಗಳ ವಹಿವಾಟು ನೆಲಕಚ್ಚಿದ್ದು, ಇದೀಗ ಸರ್ಕಾರದ ನಿಯಮಗಳಿಂದಾಗಿ ಎಪಿಎಂಸಿ ಮಾರಾಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಯಶವಂತಪುರ ಎಪಿಎಂಸಿ
ಯಶವಂತಪುರ ಎಪಿಎಂಸಿ

ಬೆಂಗಳೂರು: ಸುಮಾರು ಒಂದು ವರ್ಷದ ಹಿಂದೆ ಆರಂಭವಾದ ಕೋವಿಡ್ ಸಾಂಕ್ರಾಮಿಕದಿಂದಾಗಿ ಬಹುತೇಕ ಎಲ್ಲ ವಲಯಗಳ ವಹಿವಾಟು ನೆಲಕಚ್ಚಿದ್ದು, ಇದೀಗ ಸರ್ಕಾರದ ನಿಯಮಗಳಿಂದಾಗಿ ಎಪಿಎಂಸಿ ಮಾರಾಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು.. ಕೋವಿಡ್ ಸಾಂಕ್ರಾಮಿಕ ಮತ್ತು ಎಪಿಎಂಸಿ ಕಾಯ್ದೆಯಲ್ಲಿನ ತಿದ್ದುಪಡಿಗಳಿಂದಾಗಿ ನಗರದ ಯಶವಂತಪುರದ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗೆ ದೊಡ್ಡ ಹೊಡೆತ ಬಿದ್ದಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಳಿಗೆಗಳ ಪೈಕಿ ಬರೊಬ್ಬರಿ 1,000 ಮಳಿಗೆಗಳಲ್ಲಿ ಸುಮಾರು 300 ಅಕ್ಕಿ, ಗೋಧಿ  ಮತ್ತು ದ್ವಿದಳ ಧಾನ್ಯಗಳ ವ್ಯವಹಾರವು ದೈನಂದಿನ ವ್ಯವಹಾರವನ್ನು ನಿಲ್ಲಿಸಿದೆ.

ಈ ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಯಶವಂತಪುರದ ಮಳಿಗೆಗಳ ಅಧ್ಯಕ್ಷ ರಮೇಶ್ ಚಂದ್ರ ಲಾಹೋತಿ ಅವರು, ಕೋವಿಡ್ ಸಾಂಕ್ರಾಮಿಕ ಮತ್ತು ಸರ್ಕಾರದ ನಿಯಮಗಳಿಂದಾಗಿ ಸುಮಾರು 300 ಮಳಿಗೆಗಳನ್ನು ಮುಚ್ಚಲಾಗಿದೆ. ಕೋವಿಡ್ 2ನೇ ಅಲೆ ಬಳಿಕ ಎಪಿಎಂಸಿಯಲ್ಲಿ  ವ್ಯಾಪಾರ-ವಹಿವಾಟು ಕುಸಿದಿದೆ ಎಂದು ಹೇಳಿದ್ದಾರೆ.

"ನಾವು ಇಲ್ಲಿ 2,200 ಪರವಾನಗಿ ಹೊಂದಿರುವ ಮಳಿಗೆಗಳನ್ನು ಹೊಂದಿದ್ದೇವೆ, ಅವುಗಳಲ್ಲಿ ಸುಮಾರು 1,000 ಅಂಗಡಿಗಳು ಮಾತ್ರ ಸಕ್ರಿಯವಾಗಿವೆ. ಪ್ರಸ್ತುತ ಸುಮಾರು 700 ಅಂಗಡಿಗಳು ಮಾತ್ರ ವಹಿವಾಟು ನಡೆಸುತ್ತಿವೆ. ಕೋವಿಡ್‌ನ ಎರಡನೇ ಅಲೆಯು ಮೊದಲನೆಯದಕ್ಕಿಂತ ಹೆಚ್ಚಾಗಿ ವ್ಯಾಪಾರಿಗಳ  ಮೇಲೆ ಪ್ರಭಾವ ಬೀರಿದೆ. ವಹಿವಾಟು ಕುಸಿತಕ್ಕೆ ಎರಡು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿರುವ ಅವರು, 'ಕೋವಿಡ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಸಹಾಯ ಮಾಡಲು ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದಪಡಿ ತಂದಿತ್ತು. ಕೆಲವು ತಿಂಗಳುಗಳ ಕಾಲ ಆಹಾರ ಧಾನ್ಯಗಳ ಸಾಮೂಹಿಕ ಉಚಿತ ವಿತರಣೆ  ಮತ್ತು ಕೃಷಿ ಕಾನೂನುಗಳ ಅಡಿಯಲ್ಲಿ ಎಪಿಎಂಸಿಗಳಿಗೆ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿಯಿಂದಾಗಿ ಎಪಿಎಂಸಿಗಳಲ್ಲಿ ಕಾರ್ಯನಿರ್ವಹಿಸುವವರ ಮೇಲೆ ಅದು ಶೇ.0.6ರಷ್ಟು ಶುಲ್ಕವನ್ನು ವಿಧಿಸುತ್ತಿದೆ. ಎಪಿಎಂಸಿ ವ್ಯಾಪ್ತಿಯಿಂದ ಹೊರಗಿರುವವರ ಮೇಲಿನ ಶುಲ್ಕಕ್ಕೆ ಹೋಲಿಸಿದರೆ ಇದು ಹೆಚ್ಚು. ಹೀಗಾಗಿ  ವ್ಯವಹಾರವು ಬೇರೆಡೆಗೆ ಹೋಗಲು ಇದು ಒಂದು ಪ್ರಮುಖ ಕಾರಣವಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಜುಲೈ 2020 ರಲ್ಲಿ ಜಾರಿಗೆ ಬಂದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಗ್ರೀವಾಜ್ಞೆ 2020, ಮಾರುಕಟ್ಟೆ ಉತ್ಪನ್ನಗಳ ಮೇಲಿನ ಎಪಿಎಂಸಿಯ ಏಕಸ್ವಾಮ್ಯವನ್ನು ಕೊನೆಗೊಳಿಸಿದೆ. ಈ ವಿಚಾರವಾಗಿ ಬೆಂಗಳೂರು ಧಾನ್ಯ ವ್ಯಾಪಾರಿಗಳ ಸಂಘದ ಜಂಟಿ ಕಾರ್ಯದರ್ಶಿ ಮತ್ತು 'ಶ್ರೀ ರಾಮನಾಥ ಟ್ರೇಡರ್ಸ್'  ಮತ್ತು ಎಂಪಿಎಂಸಿಯ ಎರಡು ಮಳಿಗೆಗಳ ಪಾಲುದಾರ ಎಂ.ರಮೇಶ್ ಅವರು ಈ ಬಗ್ಗೆ ಮಾತನಾಡಿ, ಎಪಿಎಂಸಿಗಳೊಳಗಿರುವ ವ್ಯಾಪಾರಿಗಳ ಮೇಲೆ ವಿಧಿಸುವ ಮಾರುಕಟ್ಟೆ ಶುಲ್ಕದ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರವು ಆದೇಶಿಸಿದಂತೆ ಚಿಲ್ಲರೆ ವ್ಯಾಪಾರಿಗಳಿಂದ ನಮ್ಮಿಂದ ತರಲಾಗುವ  ಪ್ರತಿ 100 ರೂ ಮೌಲ್ಯದ ಉತ್ಪನ್ನಗಳಿಗೆ ಮಾರುಕಟ್ಟೆ ಶುಲ್ಕವಾಗಿ 60 ಪೈಸೆ ವಿಧಿಸಲು ನಾವು ಒತ್ತಾಯಿಸುತ್ತೇವೆ. ಕಾಯ್ದೆಯಲ್ಲಿನ ತಿದ್ದುಪಡಿಯಿಂದಾಗಿ, ಯಾರಾದರೂ ಅಂಗಳದ ಹೊರಗೆ ವ್ಯವಹಾರವನ್ನು ಪ್ರಾರಂಭಿಸಬಹುದು ಮತ್ತು ಅವರು ಖರೀದಿದಾರರಿಗೆ ಯಾವುದೇ ಶುಲ್ಕವನ್ನು ವಿಧಿಸಬೇಕಾಗಿಲ್ಲ. ಈ ಕ್ರಮವು  ಅಂಗಳದ ಹೊರಗೆ ವ್ಯಾಪಾರ ಮಾಡುವವರಿಗೆ ದೊಡ್ಡ ಅನುಕೂಲವನ್ನು ನೀಡುತ್ತದೆ. ಏಕೆಂದರೆ ಅವರು ತಮ್ಮ ಸರಕುಗಳನ್ನು ನಮಗಿಂತ ಅಗ್ಗವಾಗಿ ಮಾರಾಟ ಮಾಡಬಹುದು ಎಂದು ಅವರು ಹೇಳಿದರು.

ಎಪಿಎಂಸಿ ವ್ಯಾಪಾರಿಗಳನ್ನು ಮೈಕ್ರೋ, ಸ್ಮಾಲ್ ಮತ್ತು ಮಧ್ಯಮ ಉದ್ಯಮಗಳ ಅಡಿಯಲ್ಲಿ ಸೇರಿಸಿಕೊಳ್ಳಬೇಕೆಂದು ರಮೇಶ್ ಎಲ್ಲಾ ವ್ಯಾಪಾರಿಗಳ ಪರವಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com