ಕೋಲಾರ: ಕಾಡಾನೆ ದಾಳಿಗೆ ರೈತ ಬಲಿ

ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ನಡಗುಮ್ಮಮಾನ ಹಳ್ಳಿಯಲ್ಲಿ ಇಂದು ಬೆಳಿಗ್ಗೆ ಹೊಲಕ್ಕೆ ತೆರಳಿದ್ದ ರೈತನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.
ಕಾಡಾನೆ ದಾಳಿ (ಎಕ್ಸ್ ಪ್ರೆಸ್ ಚಿತ್ರ)
ಕಾಡಾನೆ ದಾಳಿ (ಎಕ್ಸ್ ಪ್ರೆಸ್ ಚಿತ್ರ)

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ನಡಗುಮ್ಮಮಾನ ಹಳ್ಳಿಯಲ್ಲಿ ಇಂದು ಬೆಳಿಗ್ಗೆ ಹೊಲಕ್ಕೆ ತೆರಳಿದ್ದ ರೈತನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.

ಮೃತನನ್ನು ನಾಡಗುಮ್ಮನ ಹಳ್ಳಿಯ ಬತಿಯಪ್ಪ (51) ಎಂದು ಗುರುತಿಸಲಾಗಿದೆ. ಜಮೀನಿಗೆ ಹೋಗಿದ್ದ ಬತ್ತಿಯಪ್ಪ ಮೇಲೆ ಆನೆ ದಾಳಿ ನಡೆಸಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಈ  ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಕೋಲಾರ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಿವಶಂಕರ್ ತಿಳಿಸಿದರು. 

ಬಂಗಾರಪೇಟೆ ತಾಲ್ಲೂಕಿನಲ್ಲಿ ಬೀಡುಬಿಟ್ಟಿರುವ ಆನೆಗಳ ಬಗ್ಗೆ ವಿವರ ನೀಡಿದ ಶಿವಶಂಕರ್, ಒಂಬತ್ತು ಆನೆಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಬುಡಿಕೋಟ್‌ನ ಕಮ್ಮಸಮುದ್ರ ಮತ್ತು ಸುತ್ತಮುತ್ತ ಕ್ಯಾಂಪಿಂಗ್ ಮಾಡಲಾಗಿದ್ದು, ಆನೆಗಳನ್ನು ತಮಿಳುನಾಡು ಅರಣ್ಯ ಪ್ರದೇಶಕ್ಕೆ ಓಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಜುಲೈ 10ರಂದು ವೃದ್ಧ ಮಹಿಳೆ ಗುಲ್ಲಹಳ್ಳಿ ಗ್ರಾಮದ 61 ವರ್ಷದ ಸಿದ್ದಮ್ಮ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಮೊಮ್ಮಕ್ಕಳನ್ನು ನೋಡಲು ಪಕ್ಕದ ಹಳ್ಳಿಗೆ ತೆರಳುತ್ತಿದ್ದಾಗ ಕಾಡಾನೆ ದಾಳಿ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com