ಕೇಂದ್ರದಿಂದ ಕರ್ನಾಟಕಕ್ಕೆ 8,542 ಕೋಟಿ ರೂ. ಜಿಎಸ್ ಟಿ ಪರಿಹಾರ ಬಿಡುಗಡೆ
ಜಿಎಸ್‌ಟಿ ಪರಿಹಾರದ ಬದಲಾಗಿ 75,000 ಕೋಟಿ ರೂ.ಗಳನ್ನು ‘ಬ್ಯಾಕ್-ಟು-ಬ್ಯಾಕ್ ಸಾಲ ಸೌಲಭ್ಯ’ ಅಡಿಯಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಿರುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.
Published: 16th July 2021 01:19 PM | Last Updated: 16th July 2021 02:44 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಜಿಎಸ್‌ಟಿ ಪರಿಹಾರದ ಬದಲಾಗಿ 75,000 ಕೋಟಿ ರೂ.ಗಳನ್ನು ‘ಬ್ಯಾಕ್-ಟು-ಬ್ಯಾಕ್ ಸಾಲ ಸೌಲಭ್ಯ’ ಅಡಿಯಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಿರುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆದಾಯದ ಕೊರತೆ ಮತ್ತು ಆರ್ಥಿಕತೆಯ ಮೇಲೆ ಅದರ ಪ್ರಭಾವದಿಂದಾಗಿ ಜಿಎಸ್ ಟಿ ಸಂಗ್ರಹದಲ್ಲಿನ ನಷ್ಟವನ್ನು ಸಾಲ ಸೌಲಭ್ಯ ಸರಿದೂಗಿಸುವ ನಿರೀಕ್ಷೆಯಿದೆ.
ಮೊದಲ ಕಂತಾಗಿ ಕರ್ನಾಟಕ 8,542.17 ಕೋಟಿ ರೂ.ಗಳನ್ನು ಸ್ವೀಕರಿಸಿದೆ. ಸೆಸ್ ಸಂಗ್ರಹದಲ್ಲಿ ರಾಜ್ಯಗಳಿಗೆ ಪ್ರತಿ ಎರಡು ತಿಂಗಳಿಗೊಮ್ಮೆ ನಿಯಮಿತವಾಗಿ ಜಿಎಸ್ಟಿ ಪರಿಹಾರವನ್ನು ಬಿಡುಗಡೆ ಜೊತೆಗೆ ಹೆಚ್ಚುವರಿಯಾಗಿ ಈ ಹಣವನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.
ಮೇ ತಿಂಗಳಲ್ಲಿ ನಡೆದ 43ನೇ ಜಿಎಸ್ ಟಿ ಸಲಹಾ ಸಭೆಯಲ್ಲಿ ಕೇಂದ್ರ ಸರ್ಕಾರ 1.59 ಲಕ್ಷ ಕೋಟಿ ಸಾಲ ಪಡೆದು, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು.
ಕಳೆದ ವರ್ಷ ಸಾಲ ಪಡೆಯಲಿದ್ದ ನಿಯಮಗಳೇ ಈ ವರ್ಷವೂ ಅನ್ವಯವಾಗಲಿದೆ. ಮೊದಲ ಕಂತು ವರ್ಷದ ಪರಿಹಾರದ ಕೊರತೆಯ ಸುಮಾರು ಶೇಕಡಾ 50 ರಷ್ಟಿದೆ. ಬಾಕಿ ಮೊತ್ತವನ್ನು 2021-22ರ ದ್ವಿತೀಯಾರ್ಧದಲ್ಲಿ ಸ್ಥಿರ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ಹೇಳಿದೆ.
ಸೆಸ್ ಸಂಗ್ರಹದಿಂದ ನಿಯಮಿತ ಪರಿಹಾರದ ಹೊರತಾಗಿ ಕರ್ನಾಟಕಕ್ಕೆ ಈ ಹಣಕಾಸು ವರ್ಷದಲ್ಲಿ 18,000 ಕೋಟಿ ರೂ.ನೀಡುವ ಭರವಸೆ ನೀಡಲಾಗಿದೆ.