ಉತ್ತರ ಕನ್ನಡ: ಶಾಲಾ ದಾಖಲಾತಿಯಲ್ಲಿ ಕಾರವಾರ, ಸಿರ್ಸಿ ಮೇಲುಗೈ

ಕಾರವಾರ ಮತ್ತು ಸಿರ್ಸಿಯ ಶಾಲೆಗಳಲ್ಲಿ ಶೇ. 94 ಮತ್ತು ಶೇ.93 ರಷ್ಟು ದಾಖಲಾತಿಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲೆಯ ದಾಖಲಾತಿ ಆಮಗತಿಯಲ್ಲಿ ಸಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾರವಾರ: ಕೊರೋನಾ ಸಾಂಕ್ರಾಮಿಕ ರೋಗದ ಕಾರಣ ರಾಜ್ಯದಲ್ಲಿ ಶಾಲೆಗೆ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮತ್ತು ಸಿರ್ಸಿಯ ಶಾಲೆಗಳಲ್ಲಿ ಶೇ. 94 ಮತ್ತು ಶೇ.93 ರಷ್ಟು ದಾಖಲಾತಿಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲೆಯ ದಾಖಲಾತಿ ಆಮಗತಿಯಲ್ಲಿ ಸಾಗುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಶೇ.86 ರಷ್ಟು ದಾಖಲಾತಿಯೊಂದಿಗೆ ಸಿರ್ಸಿ ಆರನೇ ಸ್ಥಾನದಲ್ಲಿತ್ತು.  ಆದರೆ ಅಧಿಕಾರಿಗಳ ಶ್ರಮದಿಂದ ಎರಡನೇ ಸ್ಥಾನಕ್ಕೆ ತಲುಪಿದೆ, ಕಾರವಾರ ಮೊದಲ ಸ್ಥಾನದಲ್ಲಿದೆ. 

ಶೇ. 94ರಷ್ಟು ದಾಖಲಾತಿಯೊಂದಿಗೆ ಕಾರವಾರ ಮೊದಲ ಸ್ಥಾನದಲ್ಲಿದೆ, ಶೇ. 93ರಷ್ಟು ದಾಖಲಾತಿಯೊಂದಿಗೆ ಸಿರ್ಸಿ ಎರಡನೇ ಸ್ಥಾನದಲ್ಲಿದೆ. ಚಿತ್ರದುರ್ಗ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ಕಾರವಾರ ಜಿಲ್ಲಾ ವಿದ್ಯಾಧಿಕಾರಿ ಹರೀಶ್ ಗಾಂವ್ಕರ್ ತಿಳಿಸಿದ್ದಾರೆ.

ಇತರ ಜಿಲ್ಲೆಗಳಿಗಿಂತ ದಾಖಲಾತಿ ಪ್ರಕ್ರಿಯೆಯಲ್ಲಿ ಉತ್ತರ ಕನ್ನಡ ಮುಂದಿದೆ.  ಇದನ್ನು ಶಿಕ್ಷಣ ಇಲಾಖೆ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕಾಗಿದೆ. 

ನಮ್ಮ ಹೆಚ್ಚಿನ ಶಾಲೆಗಳು ಇಂಟರ್ನೆಟ್ ಸಂಪರ್ಕವಿಲ್ಲದ  ಹಳ್ಳಿಗಳಲ್ಲಿವೆ. ಶಾಲಾ ಅಧಿಕಾರಿಗಳು ಯಾವುದೋ ಸ್ಥಳಕ್ಕೆ ಬರಬೇಕು, ಅಲ್ಲಿ ವಿವರಗಳನ್ನು ಅಪ್‌ಲೋಡ್ ಮಾಡಲು ನೆಟ್‌ವರ್ಕ್ ಇರಬೇಕಾಗುತ್ತದೆ. ಬಹುಶಃ ಒಂದೆರಡು ದಿನಗಳಲ್ಲಿ, ನಮ್ಮ ಪ್ರವೇಶ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com