ದಕ್ಷಿಣ ಕನ್ನಡ-ಕೊಡಗಿನಲ್ಲಿ ಜಿಟಿ ಜಿಟಿ ಮಳೆ: ಶೀತ ಗಾಳಿ, ಜನಜೀವನ ಅಸ್ತವ್ಯಸ್ತ; ಹಲವು ಮನೆಗಳಿಗೆ ಹಾನಿ

ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಗುರುವಾರವೂ ಭರ್ಜರಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಡೀ ದಿನ ಸುರಿದ ಧಾರಾಕಾರ ಮಳೆಗೆ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.
ಮಳೆಯಿಂದ ಸಂಭವಿಸಿದ ಹಾನಿ
ಮಳೆಯಿಂದ ಸಂಭವಿಸಿದ ಹಾನಿ

ಮಂಗಳೂರು: ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಗುರುವಾರವೂ ಭರ್ಜರಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಡೀ ದಿನ ಸುರಿದ ಧಾರಾಕಾರ ಮಳೆಗೆ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.

ಮಂಗಳೂರು, ಬಂಟ್ವಾಳ, ಮತ್ತು ಮುಲ್ಕಿಯಲ್ಲಿ ಐದು ಮನೆಗಳು ಹಾನಿಗೊಳಗಾಗಿವೆ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 15 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಮಂಗಳೂರಿನಲ್ಲಿ ಮಳೆ ಸಂಬಂಧಿತ ಘಟನೆಯಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.  ಪುಟ್ಟೂರು-ಕುಂಜೂರುಪಂಜ-ಪಣಜಾ ರಸ್ತೆಯ ಚೆಲ್ಯಡ್ಕಾದಲ್ಲಿ ಡ್ಯಾಮ್ ಕಮ್ ಸೇತುವೆ ನದಿಯ ನೀರಿನ ಮಟ್ಟ ಏರಿಕೆಯ ನಂತರ ಮುಳುಗಿದೆ.

ಈ ಸೇತುವೆ ಮೂಲಕ ಸಾಗುತ್ತಿದ್ದ ವಾಹನಗಳ ಮಾರ್ಗವನ್ನು ಕೈಕಾರ-ಸಂತ್ಯೂರು ರಸ್ತೆಗೆ ಬದಲಾಯಿಸಲಾಯಿತು. ಬೇಜಾಯಿ, ಆನೆಗುಂದಿ ಮತ್ತು ಬಲ್ಲಾಬಾಗ್ ಸೇರಿದಂತೆ ತಗ್ಗು ಪ್ರದೇಶದಲ್ಲಿದ್ದ ಹಲವು ಮನೆಗಳಿಗೆ ನೀರು ನುಗ್ಗಿದ ಘಟನೆ ವರದಿಯಾಗಿದೆ.

ಪಂಪ್‌ವೆಲ್ ಸೇತುವೆ ಅಂಡರ್‌ಪಾಸ್ ಮತ್ತು ಸರ್ವೀಸ್ ರಸ್ತೆ  ನೀರಿನಲ್ಲಿ ಮುಳುಗಿತ್ತು. ಪ್ರಯಾಣಿಕರು ಪ್ರವಾಹದ ನೀರಿನಲ್ಲೇ ಸಂಚರಿಸುತ್ತಿರುವುದು ಕಂಡುಬಂತು. ಬಂಟ್ವಾಳದಲ್ಲಿ   ನೇತ್ರಾವತಿ ನದಿಯ ನೀರಿನ ಮಟ್ಟ ಗುರುವಾರ ಸಂಜೆ ವೇಳೆಗೆ 7 ಮೀ (8.5 ಮೀ ಅಪಾಯದ ಮಟ್ಟ),ಇತ್ತು.

ಸೋಮೇಶ್ವರ, ಉಲ್ಲಾಳ ಸೇರಿದಂತೆ ಹಲವು ಪ್ರದೇಶಗಳ ನಿವಾಸಿಗಳು ಸಮುದ್ರದ ಏರಿಳಿತದಿಂದ ಭಯಬೀತರಾಗಿದ್ದಾರೆ, ಸಮುದ್ರ ತೀರದಲ್ಲಿರುವ ಅನೇಕ ಮನೆಗಳು ಮತ್ತು ರಸ್ತೆಗಳು ಸಮುದ್ರದ ಅಬ್ಬರಕ್ಕೆ ಹಾನಿಗೊಳಗಾಗಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com