ಬೆಂಗಳೂರು: ಮಕ್ಕಳ ಕಳ್ಳ ಸಾಗಣೆ ಮಾಡಿದ ಮೂವರ ಬಂಧನ

ಜುಲೈ 9 ರಂದು ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಬಿಹಾರದಿಂದ ಬೆಂಗಳೂರಿಗೆ 8 ಬಾಲಕರನ್ನು ಕಳ್ಳಸಾಗಣೆ ಮಾಡಿ ಬಾಲ ಕಾರ್ಮಿಕ ಪದ್ಧತಿಗೆ ಒತ್ತಾಯಿಸಿದ ಆರೋಪದ ಮೇಲೆ ಸರ್ಕಾರಿ ರೈಲ್ವೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜುಲೈ 9 ರಂದು ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಬಿಹಾರದಿಂದ ಬೆಂಗಳೂರಿಗೆ 8 ಬಾಲಕರನ್ನು ಕಳ್ಳಸಾಗಣೆ ಮಾಡಿ ಬಾಲ ಕಾರ್ಮಿಕ ಪದ್ಧತಿಗೆ ಒತ್ತಾಯಿಸಿದ ಆರೋಪದ ಮೇಲೆ ಸರ್ಕಾರಿ ರೈಲ್ವೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಮಕ್ಕಳನ್ನು ಧಾನಪುರ ಎಕ್ಸ್ ಪ್ರೆಸ್ ನಲ್ಲಿ ಕರೆ ತಂದಿದ್ದರು, ಆರೋಪಿಗಳು ಹಾಸನ ಜಿಲ್ಲೆಯ ಸೋಮಲಾಪುರ ಗ್ರಾಮದಲ್ಲಿ ಅಡಗಿಕೊಂಡಿದ್ದರು. ಕೃಷ್ಣ ಸಹಾನಿ, ಮೋಹನ್ ಸಹಾನಿಯಾ ಮತ್ತು ಜಿತೇಂದರ್ ಬಂಧಿತ ಅರೋಪಿಗಳು.

ಬಿಹಾರ ಮೂಲದ ಮೂವರ ವಿರುದ್ಧ ಐಪಿಸಿ ಸೆಕ್ಷನ್ 363 ಮತ್ತು 370 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಚ್ಪನ್ ಬಚಾವೊ ಆಂದೋಲನ್ ಮತ್ತು ಚೈಲ್ಡ್ ಲೈನ್ ಮಕ್ಕಳ ಸಂಸ್ಥೆ ಪ್ರಕರಣ ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೇಗುಸರಾಯ್ ಜಿಲ್ಲೆಯಿಂದ ಮೂವರು ಮಕ್ಕಳನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ರಿತೇಶ್ ಎಂಬಾತನ ವಿರುದ್ಧ ಗುರುವಾರ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com