ನಟ ದರ್ಶನ್ ಸರಳ ಮತ್ತು ಹೃದಯವಂತ, ರೈತ ರಾಯಭಾರಿ ಸ್ಥಾನದಿಂದ ಕೈಬಿಡಲ್ಲ: ಕೃಷಿ ಸಚಿವ ಬಿ.ಸಿ. ಪಾಟೀಲ್
ನಟ ದರ್ಶನ್ ಒಳ್ಳೆ ಹುಡುಗ, ಕಷ್ಟಪಟ್ಟು ಮೇಲೆ ಬಂದಿದ್ದಾರೆ, ಅವರನ್ನು ಕೃಷಿ ರಾಯಭಾರತ್ವದಿಂದ ವಾಪಸ್ ತೆಗೆದುಕೊಳ್ಳುವ ಕೆಲಸ ಏನೂ ಮಾಡಿಲ್ಲ ಎಂದು ನನಗೆ ಮನವರಿಕೆಯಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.
Published: 16th July 2021 02:05 PM | Last Updated: 16th July 2021 02:46 PM | A+A A-

ಬಿ ಸಿ ಪಾಟೀಲ್
ಬೆಂಗಳೂರು: ನಟ ದರ್ಶನ್ ಒಳ್ಳೆ ಹುಡುಗ, ಕಷ್ಟಪಟ್ಟು ಮೇಲೆ ಬಂದಿದ್ದಾರೆ, ಅವರನ್ನು ಕೃಷಿ ರಾಯಭಾರತ್ವದಿಂದ ವಾಪಸ್ ತೆಗೆದುಕೊಳ್ಳುವ ಕೆಲಸ ಏನೂ ಮಾಡಿಲ್ಲ ಎಂದು ನನಗೆ ಮನವರಿಕೆಯಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.
ದರ್ಶನ್ ಮುಗ್ಧ, ಕೆಳಹಂತದಿಂದ ಮೇಲೆ ಬಂದವರು, ಅವರ ಏಳಿಗೆಯನ್ನು ಸಹಿಸದವರು ಪಿತೂರಿ ಮಾಡುತ್ತಿದ್ದಾರೆ ಅನಿಸುತ್ತಿದೆ. ದುರುದ್ದೇಶದಿಂದ ಅವರ ವಿರುದ್ಧ ಈ ಕೇಸು ಹಾಕಿಸುತ್ತಿದ್ದಾರೆ ಎಂಬುದು ನನ್ನ ಭಾವನೆ ಎಂದು ಬೆಂಗಳೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ಬಹಳ ಸರಳ ಮತ್ತು ದೊಡ್ಡ ಹೃದಯವಂತ ಹುಡುಗ, ಕೆಟ್ಟ ಕೆಲಸ ಅವರು ಮಾಡುವುದಿಲ್ಲ ಎಂಬುದು ನನ್ನ ಭಾವನೆ, ಅವರನ್ನು ಪ್ರಚೋದನೆ ಮಾಡಿದಾಗ ಅವರ ಬಾಯಿಂದ ಬಂದ ಮಾತಾಗಿರಬಹುದೇ ಹೊರತು ಹೃದಯದಿಂದ ಬಂದ ಮಾತಾಗಿರಲಿಕ್ಕಿಲ್ಲ, ಅಷ್ಟು ಕಠೋರ ಮನಸ್ಸಿನ ವ್ಯಕ್ತಿಯಲ್ಲ, ಅವರನ್ನು ರೈತ ರಾಯಭಾರ ಸ್ಥಾನದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಬಹಿರಂಗವಾಗಿ ಎಲ್ಲರ ಮುಂದೆ ವ್ಯಕ್ತಿಯ ತಲೆ ತೆಗಿತೀನಿ ಎಂದು ಮಾತನಾಡುವವರನ್ನು ರೈತರ ಬ್ರಾಂಡ್ ಅಂಬಾಸಡರ್ ಆಗಿ ಮಾಡಲಾಗಿದೆ ಎಂದು ನಿನ್ನೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಟೀಕಿಸಿದ್ದರು.