ಐತಿಹಾಸಿಕ ಕೆಆರ್ ಎಸ್ ಡ್ಯಾಂನ ಮೆಟ್ಟಿಲುಗಳು ಕುಸಿತ; ಜಲಾಶಯದ ಬಳಿ ಆತಂಕದ ವಾತಾವರಣ; ಶಾಸಕ ರವೀಂದ್ರ ಶ್ರೀಕಂಠಯ್ಯ ಭೇಟಿ

ಕೃಷ್ಣರಾಜ ಸಾಗರ ಅಣೆಕಟ್ಟಿನಲ್ಲಿ ಬಿರುಕು ಎಂಬ ವಿವಾದ ತಣ್ಣಗಾಗುತ್ತಿರುವ ಹೊತ್ತಿನಲ್ಲೇ ಡ್ಯಾಂನ ಮೆಟ್ಟಿಲಿನ ಗೋಡೆಯಿಂದ ಕಲ್ಲು ಕುಸಿತವಾಗಿ ಆತಂಕವನ್ನುಂಟು ಮಾಡಿದೆ.
ಅಣೆಕಟ್ಟಿನ ಗೋಡೆಯ ಕಲ್ಲು ಕುಸಿತ
ಅಣೆಕಟ್ಟಿನ ಗೋಡೆಯ ಕಲ್ಲು ಕುಸಿತ

ಮಂಡ್ಯ: ಕೃಷ್ಣರಾಜ ಸಾಗರ ಅಣೆಕಟ್ಟಿನಲ್ಲಿ ಬಿರುಕು ಎಂಬ ವಿವಾದ ತಣ್ಣಗಾಗುತ್ತಿರುವ ಹೊತ್ತಿನಲ್ಲೇ ಡ್ಯಾಂನ ಮೆಟ್ಟಿಲಿನ ಗೋಡೆಯಿಂದ ಕಲ್ಲು ಕುಸಿತವಾಗಿ ಆತಂಕವನ್ನುಂಟು ಮಾಡಿದೆ.

ಕೆಆರ್‌ಎಸ್‌ ಡ್ಯಾಂನಿಂದ ಬೃಂದಾವನ ಹಾಗೂ ಕಾವೇರಿ ಮಾತೆ ಪ್ರತಿಮೆಗೆ ಹೋಗಲು ನಿರ್ಮಿಸಿದ್ದ ಮೆಟ್ಟಿಲಿನ ಗೋಡೆಯಿಂದ 30ಕ್ಕೂ ಹೆಚ್ಚು ಕಲ್ಲು ಕುಸಿತವಾಗಿದ್ದು, ಡ್ಯಾಂ ಬಿರುಕು ವಿವಾದದ ಬೆನ್ನಲ್ಲೇ ಕಲ್ಲು ಕುಸಿತವಾಗಿರುವುದು ಅಪಾಯದ ಮುನ್ಸೂಚನೆಯನ್ನು ನೀಡಿದಂತಿದೆ. 

+80 ಅಡಿ ಗೇಟುಗಳ ಬಳಿ ಇರುವ ಮೆಟ್ಟಿಲು ಇದಾಗಿದ್ದು, ಈಗ ಉಂಟಾಗಿರೋ ಕಲ್ಲು ಕುಸಿತ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯದ ಭೀತಿ ಹೆಚ್ಚಿಸಿದಂತೆ ಮಾಡಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಐತಿಹಾಸಿಕ ಕೆಆರ್‌ಎಸ್‌ ಡ್ಯಾಂ ಭದ್ರತೆ ದೃಷ್ಟಿಯಿಂದ ಹಲವು ವರ್ಷಗಳ ಹಿಂದೆಯೇ ಮೆಟ್ಟಿಲ ಮೇಲೆ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿತ್ತು. ಡ್ಯಾಂ ಕಟ್ಟಿದ ಕಾಲದಲ್ಲಿ ಮಣ್ಣು, ಸುರ್ಕಿಯಿಂದ ನಿರ್ಮಾಣ ಮಾಡಿದ್ದ ಮೆಟ್ಟಿಲುಗಳು ಇದಾಗಿದ್ದು, ಸತತ ಮಳೆಯಿಂದಾಗಿ ಏಕಾಏಕಿ ಕಲ್ಲುಗಳು ಕುಸಿದಿವೆ

ಕಲ್ಲು ಕುಸಿತವಾಗಿರುವ ಸುದ್ದಿ ತಿಳಿದು ನೀರಾವರಿ ನಿಗಮದ ಅಧಿಕಾರಿಗಳ ಜೊತೆ ಭೇಟಿ ನೀಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಸ್ಥಳ ಪರಿಶೀಲನೆ ನಡೆಸಿದರು. ಕುಸಿದಿರೋ ಕಲ್ಲುಗಳನ್ನು ಮತ್ತೆ ಯಥಾಸ್ಥಿತಿಯಲ್ಲಿ ಕೂರಿಸಿದ್ದು, ದುರಸ್ಥಿ ಕಾಮಗಾರಿಗೆ ಮುಂದಾಗಿದ್ದಾರೆ. ಸ್ಥಳೀಯ ಶಾಸಕ ರವೀಂದ್ರ, ರಸ್ತೆ ಕೆಳಗಿನ ಕಲ್ಲುಗಳು ಕುಸಿದಿರೋದ್ರಿಂದ ಡ್ಯಾಂಗೂ ಏನೂ ಸಂಬಂಧವಿಲ್ಲ. ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ‌. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com