ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭ; 8.76 ಲಕ್ಷ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗಿ!

ಬಹು ದಿನಗಳಿಂದ ಸುಮಾರು 8.76 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಯುತ್ತಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆ ಉತ್ಸಾಹ ಭರಿತ ವಾತಾವರಣದೊಂದಿಗೆ ಸೋಮವಾರದಿಂದ ರಾಜ್ಯಾದಾದ್ಯಂತ ಆರಂಭವಾಯಿತು.
ವಿದ್ಯಾರ್ಥಿನಿಯ ದೇಹದ ಉಷ್ಣತೆ ಪರೀಕ್ಷೀಸುತ್ತಿರುವ ಪರೀಕ್ಷಾ ಸಿಬ್ಬಂದಿ
ವಿದ್ಯಾರ್ಥಿನಿಯ ದೇಹದ ಉಷ್ಣತೆ ಪರೀಕ್ಷೀಸುತ್ತಿರುವ ಪರೀಕ್ಷಾ ಸಿಬ್ಬಂದಿ

ಬೆಂಗಳೂರು: ಬಹು ದಿನಗಳಿಂದ ಸುಮಾರು 8.76 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಯುತ್ತಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆ ಉತ್ಸಾಹ ಭರಿತ ವಾತಾವರಣದೊಂದಿಗೆ ಸೋಮವಾರದಿಂದ ರಾಜ್ಯಾದಾದ್ಯಂತ ಆರಂಭವಾಯಿತು.

ಇಂದು ಕೋರ್ ಪೇಪರ್ ಮತ್ತು ಜುಲೈ 22 ರಂದು ಭಾಷಾ ಪತ್ರಿಕೆಗಳೊಂದಿಗೆ ಎರಡು ದಿನ ಪರೀಕ್ಷೆ ನಡೆಯಲಿದೆ. ರಾಜ್ಯಾದ್ಯಂತ ಸ್ಥಾಪಿಸಲಾದ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ ದೊರೆಯಿತು. ಕೆಲವು ಕಡೆಗಳಲ್ಲಿ  ಬಲೂನ್,  ರನ್ನಿಂಗ್ ಲೈಟ್ ಗಳೊಂದಿಗೆ ಅಲಂಕಾರ ಮಾಡಲಾಗಿತ್ತು.

ಸಾರಿಗೆ ಇಲಾಖೆಯ ಸಿಬ್ಬಂದಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮೀಸಲಾದ ಬಸ್‌ಗಳನ್ನು ಸಹ ಓಡಿಸಿದರು. ಕೇರಳ ವಿದ್ಯಾರ್ಥಿಗಳಿಗೆ ಮಂಗಳೂರು ಬಳಿಯ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಬಸ್ಸುಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಮಳೆಗಾಲದ ನಡುವೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಕಾಯುತ್ತಿರುವುದು ಕಂಡುಬಂತು. ಶಿರಸಿಯಲ್ಲಿ ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿ ತಪಾಸಣೆಗಾಗಿ ಪರೀಕ್ಷಾ ಕೇಂದ್ರದ ಬಳಿ ಬೃಹದಾಕಾರದ ಛತ್ರಿಯನ್ನು ಹಾಕಲಾಗಿತ್ತು.

ಗೋವಾದಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಪಿಪಿಇ ಕಿಟ್ ಧರಿಸಿದ ಆರೋಗ್ಯ ಕಾರ್ಯಕರ್ತರು ಸ್ವಾಬ್ ಪರೀಕ್ಷೆ ನಡೆಸಿದರು. ಇತರ ಕಡೆಗಳಿಂದ ಬಂದಂತಹ ವಿದ್ಯಾರ್ಥಿಗಳ ದೇಶದ ಉಷ್ಣತೆಯನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸರ್ಸ್ ವಿತರಣೆ ಕಾರ್ಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ ನೆರವಾದದ್ದು ಕಂಡುಬಂದಿತು. 

ಸಂತೋಷದಿಂದ ಪರೀಕ್ಷೆ ಬರೆದಿದ್ದಾಗಿ ಬೆಂಗಳೂರಿನ ರಾಜಾಜಿನಗರದ ವಿಎಸ್ ಎಂ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳು ಹೇಳಿದರು. ನಂಜನಗೂಡಿನ ಸರ್ಕಾರಿ ಶಾಲೆ ಆವರಣವನ್ನು ಆಲಂಕಾರ ಮಾಡಲಾಗಿತ್ತು. ಪರೀಕ್ಷಾ ಹಬ್ಬ ಎಂಬ ಬ್ಯಾನರ್ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಪರೀಕ್ಷಾ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಗುಲಾಬಿ ನೀಡುವ ಮೂಲಕ ಸ್ವಾಗತಿಸಿದರು. 

ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್ ಗಳ ಮೂಲಕ ಒಎಂಆರ್ ಶೀಟ್ ನ್ನು ಹೇಗೆ ಭರ್ತಿ ಮಾಡಬೇಕು ಎಂಬುದರ ಬಗ್ಗೆ ಸಲಹೆ ನೀಡಲಾಗುತಿತ್ತು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಲಾಗುತಿತ್ತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಬೆಂಗಳೂರಿನಲ್ಲಿ ಪರೀಕ್ಷೆ ಆರಂಭಕ್ಕೂ ಮುನ್ನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಪರೀಕ್ಷಾ ಕೇಂದ್ರದಲ್ಲಿ ಗರಿಷ್ಠ 12 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com